8 ತಂಡ, 19 ಪಂದ್ಯ; ಸೆ.09ರಿಂದ ಏಷ್ಯಾ ಕಪ್​ ಟೂರ್ನಿ ಆರಂಭ! ಹೀಗಿದೆ ಸಂಪೂರ್ಣ ವೇಳಾಪಟ್ಟಿ | Asia Cup 2025

ವಿಜಯವಾಣಿ (34)
Published on

Asia Cup 2025: ಇದೇ ಸೆ.09ರಿಂದ ದುಬೈನಲ್ಲಿ ಏಷ್ಯಾ ಕಪ್ ಟಿ20 ಟೂರ್ನಿ ಆರಂಭವಾಗಲಿದ್ದು, 8 ತಂಡಗಳು ಟೂರ್ನಮೆಂಟ್​ನ ಭಾಗವಾಗಲಿವೆ. ಒಟ್ಟು 19 ಪಂದ್ಯಗಳು ನಡೆಯಲಿದ್ದು, ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಟೀಮ್ ಇಂಡಿಯಾ ಟ್ರೋಫಿ ಗೆಲ್ಲಲು ಎದುರುನೋಡುತ್ತಿದೆ. 'ಸ್ಕೈ' ಕ್ಯಾಪ್ಟನ್ ಆದರೆ, ಉಪನಾಯಕನಾಗಿ ಶುಭಮನ್ ಗಿಲ್ ತಂಡದ ಪರ ಕಣಕ್ಕಿಳಿಯುತ್ತಿರುವುದು ಸದ್ಯ ಕ್ರಿಕೆಟ್​ ಪ್ರಿಯರ ನಿರೀಕ್ಷೆಯನ್ನು ದುಪ್ಪಟ್ಟಾಗಿಸಿದೆ.

ಭಾರತ, ಪಾಕಿಸ್ತಾನ, ಓಮನ್ ಮತ್ತು ಯುಎಇ ತಂಡಗಳು ಗ್ರೂಪ್ ಎ ಸೇರಿದ್ದರೆ, ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ ಮತ್ತು ಹಾಂಗ್ ಕಾಂಗ್ ತಂಡಗಳು ಗ್ರೂಪ್ ಬಿ ಸೇರಿವೆ. ಈ ಟೂರ್ನಿಯ ಎಲ್ಲಾ ಪಂದ್ಯಗಳು ಭಾರತೀಯ ಕಾಲಮಾನ ಸಂಜೆ 7:30ಕ್ಕೆ ಆರಂಭವಾಗಬೇಕಿತ್ತು. ಆದರೆ, ಯುಎಇ (ದುಬೈ) ಕ್ರಿಕೆಟ್ ಇತ್ತೀಚೆಗೆ ಪಂದ್ಯದ ಆರಂಭದ ವೇಳೆಯನ್ನು ಬದಲಾಯಿಸಿರುವುದು ಗಮನಾರ್ಹ. ಈ ಕುರಿತಂತೆ ಮಾಹಿತಿ ಕೂಡ ಹಂಚಿಕೊಂಡಿದೆ.

ಏಷ್ಯಾ ಕಪ್ 2025 ಟೂರ್ನಮೆಂಟ್‌ನ 19 ಪಂದ್ಯಗಳಲ್ಲಿ, 18 ಪಂದ್ಯಗಳು (ಫೈನಲ್​ ಪಂದ್ಯ ಸೇರಿ) ಭಾರತೀಯ ಕಾಲಮಾನ ರಾತ್ರಿ 8 ಗಂಟೆಗೆ ಶುರುವಾಗಲಿದೆ. ಸೆಪ್ಟೆಂಬರ್‌ನಲ್ಲಿ ದುಬೈನಲ್ಲಿ ಹೆಚ್ಚಿನ ತಾಪಮಾನದ ಹಿನ್ನೆಲೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕ್ರಿಕೆಟ್​ ಮೂಲಗಳು ತಿಳಿಸಿವೆ. ಪ್ರಸಾರಕರ ಕೋರಿಕೆಯ ಮೇರೆಗೆ ಯುಎಇ ಕ್ರಿಕೆಟ್ ಪಂದ್ಯದ ಸಮಯಗಳಲ್ಲಿ ಈ ಬದಲಾವಣೆಗಳನ್ನು ತಂದಿದೆ ಎಂದು ವರದಿಯಾಗಿದೆ.

ಲೀಗ್ ಹಂತದ ವೇಳಾಪಟ್ಟಿ

  • ಸೆ. 09: ಅಫ್ಘಾನಿಸ್ತಾನ vs ಹಾಂಗ್ ಕಾಂಗ್, ಅಬುಧಾಬಿ
  • ಸೆ.10: ಭಾರತ vs ಯುಎಇ, ದುಬೈ ಪಂದ್ಯ ಆರಂಭ: ರಾತ್ರಿ 8:00 ಗಂಟೆ
  • ಸೆ.11: ಬಾಂಗ್ಲಾದೇಶ vs ಹಾಂಗ್ ಕಾಂಗ್, ಅಬುಧಾಬಿ ಪಂದ್ಯ ಆರಂಭ: ರಾತ್ರಿ 8:00 ಗಂಟೆ
  • ಸೆ.12: ಪಾಕಿಸ್ತಾನ vs ಓಮನ್, ದುಬೈ ಪಂದ್ಯ ಆರಂಭ: ರಾತ್ರಿ 8:00 ಗಂಟೆ
  • ಸೆ.13: ಬಾಂಗ್ಲಾದೇಶ vs ಶ್ರೀಲಂಕಾ, ಅಬುಧಾಬಿ ಪಂದ್ಯ ಆರಂಭ: ರಾತ್ರಿ 8:00 ಗಂಟೆ
  • ಸೆ.14: ಭಾರತ vs ಪಾಕಿಸ್ತಾನ, ದುಬೈ (ಹೈವೋಲ್ಟೇಜ್ ಪಂದ್ಯ) ಪಂದ್ಯ ಆರಂಭ: ರಾತ್ರಿ 8:00 ಗಂಟೆ
  • ಸೆ.15: ಯುಎಇ vs ಓಮನ್, ಅಬುಧಾಬಿ ಪಂದ್ಯ ಆರಂಭ: ರಾತ್ರಿ 8:00 ಗಂಟೆ
  • ಸೆ. 15: ಶ್ರೀಲಂಕಾ vs ಹಾಂಗ್ ಕಾಂಗ್, ದುಬೈ ಪಂದ್ಯ ಆರಂಭ: ರಾತ್ರಿ 8:00 ಗಂಟೆ
  • ಸೆ.17: ಪಾಕಿಸ್ತಾನ vs ಯುಎಇ, ದುಬೈ ಪಂದ್ಯ ಆರಂಭ: ರಾತ್ರಿ 8:00 ಗಂಟೆ
  • ಸೆ.18: ಶ್ರೀಲಂಕಾ vs ಅಫ್ಘಾನಿಸ್ತಾನ, ಅಬುಧಾಬಿ ಪಂದ್ಯ ಆರಂಭ: ರಾತ್ರಿ 8:00 ಗಂಟೆ
  • ಸೆ.19: ಭಾರತ vs ಓಮನ್ - ಅಬುಧಾಬಿ ಪಂದ್ಯ ಆರಂಭ: ರಾತ್ರಿ 8:00 ಗಂಟೆ

ಸೂಪರ್ 4 ಹಂತ

  • ಸೆ.20: ಗ್ರೂಪ್-ಬಿ ಅಗ್ರ vs ಎರಡನೇ ಸ್ಥಾನ ಪಡೆದ ತಂಡ (B1 Vs B2), ದುಬೈ ಪಂದ್ಯ ಆರಂಭ: ರಾತ್ರಿ 8:00 ಗಂಟೆ
  • ಸೆ. 21: ಗ್ರೂಪ್-ಎ ಅಗ್ರ vs ಎರಡನೇ ಸ್ಥಾನ ಪಡೆದ ತಂಡ (A1 vs A2), ದುಬೈ ಪಂದ್ಯ ಆರಂಭ: ರಾತ್ರಿ 8:00 ಗಂಟೆ
  • ಸೆ.23: A2 vs B1, ದುಬೈ ಪಂದ್ಯ ಆರಂಭ: ರಾತ್ರಿ 8:00 ಗಂಟೆ
  • ಸೆ.24: A1 vs B2, ದುಬೈ ಪಂದ್ಯ ಆರಂಭ: ರಾತ್ರಿ 8:00 ಗಂಟೆ
  • ಸೆ.25: A2 vs B2, ದುಬೈ ಪಂದ್ಯ ಆರಂಭ: ರಾತ್ರಿ 8:00 ಗಂಟೆ
  • ಸೆ.26: A1 vs B1, ದುಬೈ ಪಂದ್ಯ ಆರಂಭ: ರಾತ್ರಿ 8:00 ಗಂಟೆ
  • ಸೆ.28: ಫೈನಲ್ ಪಂದ್ಯ ಆರಂಭ: ರಾತ್ರಿ 8:00 ಗಂಟೆ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net