ರಾಜಕೀಯಕ್ಕೆ ಬರ್ತಾರಾ ಅಶ್ವಿನಿ ಪುನೀತ್ ರಾಜ್​​ಕುಮಾರ್?

ಅಶ್ವಿನಿ ಪುನೀತ್
Published on

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ಪತ್ನಿ ಅಶ್ವಿನಿ ಪುನೀತ್ ರಾಜ್​ಕುಮಾರ್ ರಾಜಕೀಯಕ್ಕಾ ಬರುತ್ತಾರಾ? ರಾಜಕೀಯಕ್ಕೆ ಸೇರ್ಪಡೆಯಾಗಿ ಪುನೀತ್ ಅವರ ಸಾಮಾಜಿಕ ಕಾರ್ಯಗಳನ್ನು ಮುಂದುವರಿಸುತ್ತಾರಾ ಎಂಬ ಮಾತುಗಳು ಇದೀಗ ಚರ್ಚೆಯಲ್ಲಿವೆ.

ಈ ಹಿಂದೆ ಪುನೀತ್ ರಾಜ್​ಕುಮಾರ್ ಅವರನ್ನು ರಾಜಕೀಯಕ್ಕೆ ಕರೆತರಲು ರಾಜಕೀಯ ಪಕ್ಷಗಳು ಪ್ರಯತ್ನಿಸಿದ್ದವು. ಪುನೀತ್ ಈ ವೇಳೆ ನಯವಾಗಿಯೇ ರಾಜಕೀಯದ ಆಫರನ್ನು ತಿರಸ್ಕರಿಸಿದ್ದರು. ಸಮಾಜದ ಜತೆಗೇ ಇದ್ದು, ಯಾರಿಗೂ ಗೊತ್ತಾಗದಂತೆ ಪವರ್​​ಸ್ಟಾರ್ ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ಬಂದಿದ್ದರು.

ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಇದೀಗ ಪುನೀತ್ ಪತ್ನಿ ಅಶ್ವಿನಿ ಅವರನ್ನು ರಾಜಕೀಯ ಪಕ್ಷಗಳು ಸೆಳೆಯಲು ಮುಂದಾಗಿವೆ ಎಂಬ ಮಾತುಗಳು ಚಾಲ್ತಿಯಲ್ಲಿದೆ. ಈಗಾಗಲೇ ಪಕ್ಷವೊಂದರಿಂದ ಚುನಾವಣೆಗೆ ಸ್ಪರ್ಧಿಸುವಂತೆ ಆಫರ್ ಕೂಡಾ ಬಂದಿದೆ ಎನ್ನಲಾಗಿದೆ.

ಸದ್ಯ ಅಶ್ವಿನಿ ಪುನೀತ್ ರಾಜ್​ಕುಮಾರ್, ಪುನೀತ್ ಅವರ ಸಮಾಜಮುಖಿ ಕಾರ್ಯಗಳನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಅಭಿಮಾನಿಗಳು ಹಾಗೂ ಸಾರ್ವಜನಿಕರ ನಡುವೆ ನಿರಂತರ ಸಂಪರ್ಕದಲ್ಲಿದ್ದಾರೆ. ಹೀಗಾಗಿ ಪುನೀತ್ ಅವರಂತೆಯೇ ರಾಜಕೀಯದಿಂದ ದೂರವಿದ್ದು, ಸಮಾಜದ ಜತೆಗೆ ತೊಡಗಿಸಿಕೊಳ್ಳಲು ಅಶ್ವಿನಿ ಮುಂದಾಗಿದ್ದಾರೆ ಎನ್ನಲಾಗಿದೆ. ರಾಜಕೀಯದ ಆಫರ್​ಗಳನ್ನು ಅಶ್ವಿನಿ ತಿರಸ್ಕರಿಸಿದ್ದು, ಬಂದಿರುವ ಎಲ್ಲಾ ಆಫರ್​ಗಳಿಗೂ 'ನೋ' ಎಂದು ಹೇಳಿದ್ದಾರೆ ಎಂದು ವರದಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net