ಅಶೋಕ ಜನಮನ ಕಾರ್ಯಕ್ರಮಕ್ಕೆ ಡಿಕೆಶಿ ಆಗಮನ ಖಚಿತ - ಶಾಸಕ ಅಶೋಕ್ ರೈ ಹೇಳಿಕೆ - ಸಿಎಂ ಸಿದ್ದರಾಮಯ್ಯ ಬರುವ ಸಾಧ್ಯತೆ

PTR_30 OCT_4
Published on

ಪುತ್ತೂರು: ದೀಪಾವಳಿ ಸಂದರ್ಭದಲ್ಲಿ ರೈ ಎಸ್ಟೇಟ್ ಎಜುಕೇಶನಲ್ ಆಂಡ್ ಚಾರಿಟೆಬಲ್ ಟ್ರಸ್ಟ್ ವತಿಯಿಂದ ನ.೨ರಂದು ಕೊಂಬೆಟ್ಟು ಕ್ರೀಡಾಂಗಣದಲ್ಲಿ ನಡೆಯುವ ಅಶೋಕ ಜನಮನ ಕಾರ್ಯಕ್ರಮಕ್ಕೆ ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಆಗಮಿಸುವುದು ಖಚಿತವಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಬರುವ ಸಾಧ್ಯೆತ ಇದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದ್ದಾರೆ.

ಉಪಮುಖ್ಯಮಂತ್ರಿ, ಕಾಂಗ್ರೆಸ್ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಬೆಳಗ್ಗೆ ೧೧ಕ್ಕೆ ಪುತ್ತೂರಿಗೆ ಆಗಮಿಸಿ, ೨ ಗಂಟೆಯವರೆಗೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಪೆಂಡಾಲ್‌ಗಳು, ವೇದಿಕೆ ಸಿದ್ಧವಾಗುತ್ತಿದ್ದು, ಅಡುಗೆಗೆ ಬೇಕಾದ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ. ೭೫ ಸಾವಿರ ಮಂದಿಗೆ ಬೇಕಾದ ವಸ್ತ್ರಗಳ ಖರೀದಿಯೂ ಆಗಿದೆ. ೨೦ ಸಾವಿರ ಆಸನದ ವ್ಯವಸ್ಥೆಯನ್ನು ಮಾಡಲಾಗುತ್ತದೆ. ೩೦೦ ಕಾರ್ಯಕರ್ತರು ಅಪೇಕ್ಷೆಗಳಿಲ್ಲದೆ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಕ್ರೀಡಾಂಗಣದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ ಎಂದರು.

೧೨ಕ್ಕೆ ೫೦ ಸಾವಿರ ಮಂದಿಗೆ ವಸ್ತ್ರ ವಿತರಣೆ ಹಾಗೂ ಉಳಿದವರಿಗೆ ೩ ಗಂಟೆಯ ಬಳಿಕ ವಿತರಣೆ ಮುಂದುವರಿಯಲಿದೆ. ೨೫ ಊಟದ ಕೌಂಟರ್ ನಿರ್ಮಾಣ, ಊಟದ ವಿಚಾರಣೆಗೆ ೧೫ ಕೌಂಟರ್ ವ್ಯವಸ್ಥೆ ಮಾಡಲಾಗಿದೆ. ಸೀರೆ ವಿತರಣೆಗೆ ೨೫ ಕೌಂಟರ್ ಮಾಡಿ ನೂಕು ನುಗ್ಗಲು ಆಗದ ರೀತಿಯಲ್ಲಿ ವ್ಯವಸ್ಥೆ ಮಾಡಲಾಗಿದೆ. ಮಕ್ಕಳು ಹಾಗೂ ವಯಸ್ಸಾದವರಿಗೆ ಪ್ರತ್ಯೇಕ ವ್ಯವಸ್ಥೆಯನ್ನು ಮಾಡಲಾಗಿದೆ ಎಂದರು.

ಟ್ರಸ್ಟಿನ ಕಾರ್ಯಾಧ್ಯಕ್ಷ ಸುದೇಶ್ ಶೆಟ್ಟಿ, ಸದಸ್ಯರಾದ ಜಯಪ್ರಕಾಶ್ ಬದಿನಾರು, ನಿಹಾಲ್ ಶೆಟ್ಟಿ, ಪ್ರಮುಖರಾದ ಮುರಳೀಧರ ರೈ ಮಠಂದಬೆಟ್ಟು, ಕೃಷ್ಣ ಪ್ರಸಾದ್ ಆಳ್ವ, ಉಮಾನಾಥ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಭದ್ರತೆ ಪರಿಶೀಲನೆ

ಕೊಂಬೆಟ್ಟು ಕ್ರೀಡಾಂಗಣದಲ್ಲಿ ನಡೆಯುವ ಅಶೋಕ ಜನಮನ ಕಾರ್ಯಕ್ರಮಕ್ಕೆ ಸಿಎಂ, ಡಿಸಿಎಂ ಭಾಗವಹಿಸುವ ಹಿನ್ನೆಲೆಯಲ್ಲಿ ಭದ್ರತೆ ಹಾಗೂ ಕೈಗೊಂಡ ವ್ಯವಸ್ಥೆಗಳ ಬಗ್ಗೆ ಜಿಲ್ಲಾ ಪೊಲೀಸ್ ಅಽಕ್ಷಕ ಯತೀಶ್ ಎನ್. ನೇತೃತ್ವದಲ್ಲಿ ಪರಿಶೀಲನೆ ನಡೆಸಿ ಶಾಸಕ ಅಶೋಕ್ ಕುಮಾರ್ ರೈ ಜತೆ ಚರ್ಚೆ ನಡೆಸಿದರು. ಪುತ್ತೂರು ಉಪಅಽಕ್ಷಕ ಅರುಣ್ ನಾಗೇಗೌಡ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net