ದೇಶದಲ್ಲಿ ನಾಯಿಗಳಿಗಿಂತಲೂ ಹೆಚ್ಚಾಗಿ ಜಾರಿ ನಿರ್ದೇಶನಾಲಯ...: ಸಿಎಂ ಅಶೋಕ್ ಗೆಹ್ಲೋಟ್

Untitled design - 2023-10-27T151015.302
Published on

ರಾಜಸ್ಥಾನ: ಇಂದು ರಾಜ್ಯದ ಕಾಂಗ್ರೆಸ್​ ನಾಯಕರ ಮೇಲೆ ತನಿಖಾ ಸಂಸ್ಥೆಯಾದ ಜಾರಿ ನಿರ್ದೇಶನಾಲಯವು ನಡೆಸಿದ ದಾಳಿ ವಿರುದ್ಧ ರಾಜಸ್ಥಾನ ಸಿಎಂ ಅಶೋಕ್​ ಗೆಹ್ಲೋಟ್​ ನೇರ ವಾಗ್ದಾಳಿ ನಡೆಸಿದರು.

ಜಾರಿ ನಿರ್ದೇಶನಾಲಯವು ರಾಜಸ್ಥಾನದ ಕೆಲವು ಕಾಂಗ್ರೆಸ್ ನಾಯಕರ ಮನೆಗಳ ಮೇಲೆ ದಾಳಿ ನಡೆಸಿದ ಬೆನ್ನಲ್ಲೇ ಮಾತನಾಡಿದ ಅಶೋಕ್ ಗೆಹ್ಲೋಟ್, ಜಾರಿ ನಿರ್ದೇಶನಾಲಯವು ದಾರಿತಪ್ಪಿ ಅಲೆದಾಡುತ್ತಿದೆ ಎಂದರು.

ಜೈಪುರದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸಿಎಂ, "ದೇಶದಲ್ಲಿ ನಾಯಿಗಳಿಗಿಂತಲೂ ಹೆಚ್ಚಾಗಿ ಜಾರಿ ನಿರ್ದೇಶನಾಲಯ ದಾಳಿ ಮಾಡುತ್ತಿದೆ" ಎಂದು ಟೀಕಿಸಿದರು. ಇದಲ್ಲದೆ, ಪ್ರಧಾನಿ ನರೇಂದ್ರ ಮೋದಿ ಅವರು ಅವರ 'ಗ್ಯಾರಂಟಿ ಮಾದರಿಯನ್ನು ಅನುಸರಿಸುತ್ತಿದ್ದಾರೆ ಎಂದು ಹೇಳಿದರು.

"ನಾನು ಜಾರಿ ನಿರ್ದೇಶನಾಲಯ ಮತ್ತು ಸಿಬಿಐ ಮುಖ್ಯಸ್ಥರಿಂದ ಸಮಯ ಕೋರಿದೆ. ಆದರೆ ಈಗ ಇವು ರಾಜಕೀಯ ಅಸ್ತ್ರವಾಗಿ ಮಾರ್ಪಟ್ಟಿವೆ. ಮೋದಿ ಜೀ ಅವರಿಗೆ ಕೌಂಟ್‌ಡೌನ್ ಪ್ರಾರಂಭವಾಗಿದೆ ಎಂದು ತಿಳಿದಿರಲಿಲ್ಲ. ಈಗ ಅವರು ನಮ್ಮ 'ಗ್ಯಾರಂಟಿ ಮಾದರಿ'ಯನ್ನು ಅನುಸರಿಸುತ್ತಿದ್ದಾರೆ" ಎಂದು ಅಶೋಕ್​ ಹೇಳಿದರು.

ಜಾರಿ ನಿರ್ದೇಶನಾಲಯವು ಜೈಪುರ ಮತ್ತು ಸಿಕರ್‌ನಲ್ಲಿರುವ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಗೋವಿಂದ್ ಸಿಂಗ್ ದೋತಸ್ರಾ ಅವರ ಆವರಣದ ಮೇಲೆ ದಾಳಿ ನಡೆಸಿದ್ದು, ಆಪಾದಿತ ಪರೀಕ್ಷಾ ಪತ್ರಿಕೆ ಸೋರಿಕೆ ಪ್ರಕರಣದ ಹಣ ವರ್ಗಾವಣೆ ತನಿಖೆಯ ಭಾಗವಾಗಿ ಮತ್ತು ವಿದೇಶಿ ವಿನಿಮಯ ಉಲ್ಲಂಘನೆ ಪ್ರಕರಣದಲ್ಲಿ ಸಿಎಂ ಅಶೋಕ್ ಗೆಹ್ಲೋಟ್ ಅವರ ಪುತ್ರನಿಗೆ ಸಮನ್ಸ್ ನೀಡಿತು.

ಮಾಜಿ ಶಾಲಾ ಶಿಕ್ಷಣ ಸಚಿವ ದೋತಸ್ರಾ ಅವರ ಆವರಣದ ಹೊರತಾಗಿ, ಸಂಸ್ಥೆಯು ದೌಸಾದ ಮಹುವಾ ಕ್ಷೇತ್ರದಿಂದ ಪಕ್ಷದ ಅಭ್ಯರ್ಥಿ ಓಂಪ್ರಕಾಶ್ ಹುಡ್ಲಾ ಮತ್ತು ಇತರ ಕೆಲವರ ನಿವಾಸಗಳಲ್ಲಿ ಸಹ ಶೋಧಿಸಿತು. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ (PMLA)ನಿಬಂಧನೆಗಳ ಅಡಿಯಲ್ಲಿ ಈ ದಾಳಿಗಳನ್ನು ಕೈಗೊಳ್ಳಲಾಗಿದೆ.

"ತಮ್ಮ ಸರ್ಕಾರವನ್ನು ಬೀಳಿಸಲು ಸಾಧ್ಯವಾಗದ ಕಾರಣ ಬಿಜೆಪಿಯು ಇಂತಹ ದಾಳಿಗಳ ಮೂಲಕ ತನ್ನನ್ನು ಗುರಿಯಾಗಿಸುತ್ತಿದೆ" ಎಂದು ಅಶೋಕ್ ಗುರುವಾರ ಆರೋಪಿಸಿದರು. 200 ಸದಸ್ಯ ಬಲದ ರಾಜಸ್ಥಾನ ವಿಧಾನಸಭೆಗೆ ನವೆಂಬರ್ 25 ರಂದು ಚುನಾವಣೆ ನಡೆಯಲಿದ್ದು, ಡಿಸೆಂಬರ್ 3 ರಂದು ಫಲಿತಾಂಶ ಪ್ರಕಟವಾಗಲಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net