More

    ಕೃಷ್ಣನಿಗೆ ಜತೆಯಾದ ಆಶಿಕಾ; ಪಿ.ಸಿ. ಶೇಖರ್ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆ

    ಬೆಂಗಳೂರು: ಪರಭಾಷೆಯ ಚಿತ್ರಗಳಲ್ಲಿ ನಟಿಸಿದರೂ, ಕನ್ನಡದಲ್ಲಿ ಒಳ್ಳೆಯ ಅವಕಾಶಗಳು ಸಿಕ್ಕರೆ ನಟಿಸುತ್ತೇನೆ ಎಂದು ಆಶಿಕಾ ರಂಗನಾಥ್ ಹೇಳಿದ್ದರು. ಅದರಂತೆ, ತಮಿಳು ಚಿತ್ರವೊಂದರ ಮೊದಲ ಹಂತದ ಚಿತ್ರೀಕರಣ ಮುಗಿಸಿ ಬಂದಿರುವ ಅವರು, ಇದೀಗ ಇನ್ನೊಂದು ಹೊಸ ಕನ್ನಡ ಚಿತ್ರದಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡಿದ್ದಾರೆ.

    ಪಿ.ಸಿ. ಶೇಖರ್ ನಿರ್ದೇಶನದ ಹೊಸ ಚಿತ್ರದಲ್ಲಿ ‘ಮದರಂಗಿ’ ಕೃಷ್ಣ ಅಭಿನಯಿಸುತ್ತಿದ್ದಾರೆ ಎಂಬ ಸುದ್ದಿಯೊಂದು 15 ದಿನಗಳ ಹಿಂದೆ ಕೇಳಿಬಂದಿತ್ತು. ಆ ಚಿತ್ರಕ್ಕೆ ನಾಯಕಿಯಾಗಿ ಆಶಿಕಾ ಆಯ್ಕೆಯಾಗಿದ್ದಾರೆ. ‘ಕಡ್ಡಿಪುಡಿ’ ಚಂದ್ರು ನಿರ್ವಿುಸುತ್ತಿರುವ ಈ ಚಿತ್ರದ ಮುಹೂರ್ತ ಅಕ್ಟೋಬರ್ 10ರಂದು ನಡೆಯಲಿದೆ. ಅದಾಗಿ ಎರಡು ವಾರಗಳ ನಂತರ ಚಿತ್ರೀಕರಣ ಪ್ರಾರಂಭವಾಗಲಿದೆ.

    ಇನ್ನೂ ಹೆಸರಿಡದ ಈ ಚಿತ್ರಕ್ಕೆ ಆಶಿಕಾ ಆಯ್ಕೆಯಾಗಿರುವ ಕುರಿತು ಮಾತನಾಡುವ ಶೇಖರ್, ‘ಇದೊಂದು ರೊಮ್ಯಾಂಟಿಕ್ ಕಾಮಿಡಿ ಚಿತ್ರ. ‘ರೊಮಿಯೋ’ ಬಿಡುಗಡೆಯಾಗಿ ಒಂಬತ್ತು ವರ್ಷಗಳ ನಂತರ ಇಂಥದ್ದೊಂದು ಸಿನಿಮಾ ಮಾಡುತ್ತಿದ್ದೇನೆ. ಇದೊಂದು ಸ್ಟೈಲಿಶ್ ಚಿತ್ರವಾಗಲಿದ್ದು, ಆಶಿಕಾ ಬಹಳ ಕ್ಲಾಸ್ ಆಗಿ ಕಾಣುತ್ತಾರೆ. ಅವರ ಹೇರ್​ಸ್ಟೈಲ್, ಕಾಸ್ಟೂ್ಯಮ್ ಎಲ್ಲವೂ ಬೇರೆ ತರಹ ಇರುತ್ತದೆ. ಕಾಪೋರೇಟ್ ವಲಯವನ್ನು ಪ್ರತಿನಿಧಿಸುವ ಕಥೆ ಚಿತ್ರದಲ್ಲಿದ್ದು, ಭಾವನೆಗಳಿಗೆ ಹೆಚ್ಚು ಒತ್ತು ಕೊಡಲಾಗಿದೆ. ಆಶಿಕಾ ಎರಡಕ್ಕೂ ಸೂಟ್ ಆಗುತ್ತಾರೆ ಎಂಬ ಕಾರಣಕ್ಕೆ ಅವರನ್ನು ಆಯ್ಕೆ ಮಾಡಲಾಗಿದೆ’ ಎನ್ನುತ್ತಾರೆ ಶೇಖರ್. ಇದಕ್ಕೂ ಮುನ್ನ ಅವರು ಮಾನ್ವಿತಾ ಅಭಿನಯದ ಇನ್ನೊಂದು ಚಿತ್ರವನ್ನು ನಿರ್ದೇಶಿಸಲಿದ್ದು, ಆ ಚಿತ್ರವು ಈ ತಿಂಗಳ ಕೊನೆಗೆ ಪ್ರಾರಂಭವಾಗಲಿದೆ.

    ರಾಜ್ಯಕ್ಕೆ ಕಾಲಿಟ್ಟಿದೆ ಹೊಸ ರೀತಿಯ ಜ್ವರ; 171 ಮಕ್ಕಳು ಆಸ್ಪತ್ರೆಗೆ ದಾಖಲು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts