ಹೃದಯಾಘಾತ: ಎಎಸ್​ಬಿ ಕಾಲೇಜು ಪ್ರಾಂಶುಪಾಲ ಮಾರ್ಟಿನ್ ನಿಧನ

Principal Martin
Published on

ಆನೇಕಲ್: ಎಎಸ್​ಬಿ ಸರ್ಕಾರಿ ಕಾಲೇಜು ಪ್ರಾಂಶುಪಾಲ ಮಾರ್ಟಿನ್ ತೀವ್ರ ಹೃದಯಾಘಾತದಿಂದ ಮೃತಪಟ್ಟರು.

ಆನೇಕಲ್​ ತಾಲೂಕಿನಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದ ಪ್ರಾಂಶುಪಾಲ ಮಾರ್ಟಿನ್, ಹಳೆಯ ವಿದ್ಯಾರ್ಥಿಗಳನ್ನೂ ಭಾಗಿಯಾಗಿಸಿಕೊಂಡು ಕಾಲೇಜಿನ ಅಬಿವೃದ್ಧಿಗೆ ಶ್ರಮಿಸಿದ್ದರು. ಅಲ್ಲದೇ, ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಭಾನುವಾರ ಸಂಜೆ ತೀವ್ರ ಹೃದಯಾಘಾತವಾಗಿ ಮಾರ್ಟಿನ್ ಅಸುನೀಗಿದರು. ಮಾರ್ಟಿನ್ ಇನ್ನಿಲ್ಲ ಎಂಬ ಸುದ್ದಿ ಕೇಳಿ ವಿದ್ಯಾರ್ಥಿಗಳು ಕಂಬನಿ ಮಿಡಿದಿದ್ದಾರೆ. ಸಾಮಾಜಿಕ ಜಾಲತಾಣದಲ್ಲೂ ಮಾರ್ಟಿನ್​ರ ಭಾವಚಿತ್ರ ಪೋಸ್ಟ್​ ಮಾಡಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಇಂದು(ಸೋಮವಾರ) ಕಾಲೇಜಿನಲ್ಲಿ ಹಳೇ ವಿದ್ಯಾರ್ಥಿಗಳ ಸಂಘ ಮತ್ತು ವಿದ್ಯಾರ್ಥಿಗಳಿಂದ ಅಂತಿಮ ನಮನ ಸಲ್ಲಿಸಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net