More

  ಮಧ್ಯಂತರ ಜಾಮೀನು ಅರ್ಜಿ ವಜಾ ಬೆನ್ನಲ್ಲೇ ತಿಹಾರ್ ಜೈಲಿನಲ್ಲಿ ಕೇಜ್ರಿವಾಲ್ ಭೇಟಿಯಾದ ಪತ್ನಿ ಸುನಿತಾ!

  ನವದೆಹಲಿ: ತಿಹಾರ್ ಜೈಲಿನಲ್ಲಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಪತ್ನಿ ಸುನೀತಾ ಕೇಜ್ರಿವಾಲ್ ಮತ್ತು ಎಎಪಿ ಸಂಸದ ರಾಘವ್ ಚಡ್ಡಾ ಬುಧವಾರ ಭೇಟಿಯಾಗಿದ್ದಾರೆ ಎಂದು ಜೈಲಿನ ಅಧಿಕೃತ ಮೂಲಗಳು ತಿಳಿಸಿವೆ.

  ಇದನ್ನೂ ಓದಿ: ಉತ್ತರಾಖಂಡದಿಂದ ರಾಜ್ಯದ ಚಾರಣಿಗರನ್ನು ಸುರಕ್ಷಿತವಾಗಿ ಕರೆತರಲು ಕ್ರಮ: ಸಿಎಂ ಸಿದ್ದರಾಮಯ್ಯ

  ಮಧ್ಯಾಹ್ನ 1 ಗಂಟೆಗೆ ಕೇಜ್ರಿವಾಲ್​ ಅವರನ್ನು ಭೇಟಿ ಮಾಡಿದರು. ಜೈಲು ನಿಯಮಗಳ ಪ್ರಕಾರ ಇಬ್ಬರಿಗೂ ಸಂದರ್ಶಕರ ಕೊಠಡಿಯಲ್ಲಿ ಅರ್ಧ ಗಂಟೆ ಭೇಟಿಯಾಗಲು ಅವಕಾಶ ನೀಡಲಾಗಿತ್ತು ಎಂದು ಮೂಲಗಳು ತಿಳಿಸಿವೆ.

  ನಿಯಮಗಳ ಪ್ರಕಾರ, ಇಬ್ಬರು ಸಂದರ್ಶಕರು ಜೈಲಿನಲ್ಲಿರುವ ಕೈದಿಯನ್ನು ವಾರಕ್ಕೆ ಎರಡು ಬಾರಿ ಭೇಟಿ ಮಾಡಬಹುದು. ಅಲ್ಲದೆ ಒಬ್ಬ ಕೈದಿ ತನ್ನ ಕುಟುಂಬ ಸದಸ್ಯರೊಂದಿಗೆ ಪ್ರತಿದಿನ ಐದು ನಿಮಿಷ ಫೋನ್‌ನಲ್ಲಿ ಮಾತನಾಡಬಹುದು. ದೆಹಲಿ ಸಿಎಂ ಕೇಜ್ರಿವಾಲ್ ತಮ್ಮ ಕೊಠಡಿಯ ದೂರದರ್ಶನದಲ್ಲಿ ಮಂಗಳವಾರ ಲೋಕಸಭಾ ಚುನಾವಣಾ ಫಲಿತಾಂಶಗಳನ್ನು ವೀಕ್ಷಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

  ಮಧ್ಯಂತರ ಜಾಮೀನು ವಜಾಗೊಳಿಸಿದ ದೆಹಲಿ ಕೋರ್ಟ್​: ದೆಹಲಿ ಸಿಎಂ ಮತ್ತು ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರ ನ್ಯಾಯಾಂಗ ಬಂಧನವನ್ನು ರೋಸ್ ಅವೆನ್ಯೂ ಕೋರ್ಟ್ ಜೂನ್ 19 ರವರೆಗೆ ವಿಸ್ತರಿಸಿದೆ. ಅವರನ್ನು ಇಂದು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಶಿಕ್ಷೆಗೆ ಒಳಗಾಗಿರುವ ಅರವಿಂದ್ ಕೇಜ್ರಿವಾಲ್ ಲೋಕಸಭೆ ಚುನಾವಣಾ ಪ್ರಚಾರಕ್ಕೆಂದು ಮಧ್ಯಂತರ ಜಾಮೀನು ಪಡೆದಿದ್ದರು. ಕಳೆದ ಭಾನುವಾರ ಅವರು ಮತ್ತೆ ಜೈಲಿಗೆ ವಾಪಾಸಾಗಿದ್ದರು. ಅನಾರೋಗ್ಯದ ನೆಪವೊಡ್ಡಿ ಮತ್ತೆ ಮಧ್ಯಂತರ ಜಾಮೀನಿಗೆ ಅರ್ಜಿ ಸಲ್ಲಿಸಿದ್ದ ಅವರ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.

  ಚಿಕ್ಕಬಳ್ಳಾಪುರ ಶಾಸಕರ ರಾಜೀನಾಮೆ ಪತ್ರ ವೈರಲ್​? ಖಡಕ್ ರಿಯಾಕ್ಷನ್ ಕೊಟ್ಟ ಪ್ರದೀಪ್‌ ಈಶ್ವರ್‌!

  See also  ಸಿಂದಗಿ ಮಠದ ಶಾಂತವೀರ ಪಟ್ಟಾಧ್ಯಕ್ಷರ 44ನೇ ಪುಣ್ಯ ಸ್ಮರಣೋತ್ಸವ 4ರಿಂದ ಮಾ.10ರವರೆಗೆ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts