ತಾನೇ ರಾಜ್ಯದ ಮುಂದಿನ ನಾಯಕ ಎನ್ನುವಂತೆ ಓಡಾಡ್ತಿದಾನೆ; ವಿಜಯೇಂದ್ರ ವಿರುದ್ಧ ಅರುಣ್ ಸೋಮಣ್ಣ ಪರೋಕ್ಷ ವಾಗ್ದಾಳಿ!

arun somanna
Published on

ಬೆಂಗಳೂರು: ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ಸಚಿವ ವಿ ಸೋಮಣ್ಣ ಅವರ ಪುತ್ರ ಹೆಸರು ಹೇಳದೆ ಗುಡುಗಿದ್ದಾರೆ. ಇದೀಗ ಅರುಣ್ ಸೋಮಣ್ಣ ಮಾತನಾಡಿರುವ ವಿಡಿಯೋ ವೈರಲ್ ಆಗಿದ್ದು ಹೊಸ ವಿವಾದ ಹುಟ್ಟಿದೆ.

ಸಚಿವ ವಿ ಸೋಮಣ್ಣ ಪುತ್ರ ಅರುಣ್ ಸೋಮಣ್ಣ, ಕಾರ್ಯಕ್ರಮವೊಂದರಲ್ಲಿ 'ನಮ್ಮ ಪಕ್ಷದಲ್ಲಿ ಹಿರಿಯ ನಾಯಕರು ಇದ್ದಾರೆ. ಅವರು ತಮ್ಮ ಸೀಟನ್ನು ತ್ಯಾಗ ಮಾಡಿ ತಮ್ಮ ಮಗನನ್ನ ಕೂರಿಸಿದ್ದಾರೆ. ಈಗ ಅವನು ಇಡೀ ಕರ್ನಾಟಕಕ್ಕೆ ಅವನೇ ನೆಕ್ಸ್ಟ್ ಲೀಡರ್ ಅನ್ನೊ ರೀತಿ ಓಡಾಡ್ತಿದಾನೆ. ನಾನು ನಿನ್ನೆ ಫೋನ್ ಮಾಡಿದ್ರೆ ಮಹಾಪುರುಷ ಏಕ ವಚನದಲ್ಲಿ ಮಾತಾಡಿದ್ದಾನೆ.

ಅದಕ್ಕೆ ನಾನು 'ಸರ್ ಮರ್ಯಾದೆ ಕೊಟ್ಟು ಮಾತಾಡ್ತಿದೀನಿ. ನಾನು ಏಕವಚನದಲ್ಲಿ ಮಾತನಾಡಬಹುದು' ಎಂದು ನಾನು ತಿರುವಾಕ್ಕೊಂಡು ಏಕ ವಚನದಲ್ಲಿ ಮಾತನಾಡಿದೆ. ನಾನು ರಾಜಕಾರಣಿಯಾಗಿ ಹುಟ್ಟಿಲ್ಲ, ನಾನು ರಾಜಕಾರಣಿಯಾಗಿ ಸಾಯಲ್ಲ' ಎಂದು ಹೆಸರು ಹೇಳದೇ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪರ ಪುತ್ರ ವಿಜಯೇಂದ್ರ ವಿರುದ್ಧ ಗುಡುಗಿದ್ದಾರೆ.

ಇದೀಗ ವಿಜಯೇಂದ್ರ ವಿರುದ್ಧ ಅರುಣ್ ಸೋಮಣ್ಣ ಮಾತನಾಡಿರುವ ವಿಡಿಯೋ ವೈರಲ್ ಆಗಿದ್ದು ಈ ಘಟನೆ ಬಿಜೆಪಿಯ ಒಳಗೂ ಎಲ್ಲವೂ ಸರಿಯಿಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net