More

    ತನ್ನದೇ ಕಿಡ್ನಿ ಸ್ಟೋನ್​ ಬಳಸಿ ಕಲಾಕೃತಿ ತಯಾರಿಸಿದ ಕಲಾವಿದ..!

    ನವದೆಹಲಿ: ನೀವು ಅನೇಕ ರೀತಿಯ ಕಲಾವಿದರ ಬಗ್ಗೆ ಕೇಳಿರಬಹುದು. ಸಣ್ಣದಾಗಿ ಚಿತ್ರ ಬಿಡಿಸುವವರಿಂದ ಹಿಡಿದು ಚಾಕ್​ ಪೀಸ್​ನಲ್ಲೂ ಕೆತ್ತನೆ ಮಾಡಿರುವುದನ್ನು ನಾವು ನೋಡಿದ್ದೇವೆ. ಆದರೆ ಇಲ್ಲೊಬ್ಬ ಭೂಪ, ಕಿಡ್ನಿ ಸ್ಟೋನ್​ಗಳನ್ನೇ ಬಳಸಿಕೊಂಡು ಕಲಾಕೃತಿಯನ್ನು ನಿರ್ಮಿಸಿದ್ದಾನೆ.

    ಹೌದು. ಇಂಗ್ಲೆಂಡ್​ ಮೂಲದ ಕಲಾವಿದನೊಬ್ಬ ಈ ರೀತಿಯ ವಿಚಿತ್ರ ಕಲಾಕೃತಿಯನ್ನು ನಿರ್ಮಿಸಿದ್ದು ಎಲ್ಲರ ಗಮನ ಸೆಳೆಯುತ್ತಿದ್ದಾನೆ.ಈ ಕಲಾಕೃತಿಯ ಫೋಟೋಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿವೆ. ಈತ ತಯಾರಿಸಿರುವ ಕಲಾಕೃತಿ ಸ್ಟೋನ್​ ಹೆಂಜ್​ ಎನ್ನುವ ಯುನೆಸ್ಕೋ ಪಾರಂಪರಿಕ ಪ್ರದೇಶದ್ದು. ಇದನ್ನು ಬೃಹತ್​ ಗಾತ್ರದ ಶಿಲೆಗಳನ್ನು ಒಂದರ ಮೇಲೊಂದು ಇಟ್ಟು ವೃತ್ತಾಕಾರವಾಗಿ ಜೋಡಿಸಿ ಮಾಡಲಾಗಿತ್ತು. ಇದು ಖಗೋಳೀಯ ದೃಷ್ಟಿಯಿಂದ ನಿರ್ಮಿಸಲ್ಪಟ್ಟಿತ್ತು. ಹೀಗಾಗಿ ಇದನ್ನು ಒಂದು ಅದ್ಭುತ ಎಂದೇ ಬಣ್ಣಿಸಲಾಗುತ್ತದೆ.

    ಅಂದಹಾಗೆ ಈ ಕಲಾವಿದನ ಹೆಸರು ಸೈಮನ್​ ಲೆ ಬೊಗ್ಗಿಟ್ಸ್​ ಎಂದು. ಅವರು ಈ ಕಲಾಕೃತಿಗೆ ಇಟ್ಟ ಹೆಸರು ‘ಹ್ಯುಮ್ಯಾನಿಟಿ’ ಎಂದು. ಇದು ಮನುಷ್ಯನಾಗಿ ಇರುವುದು ಎಂದರೆ ಏನು ಎನ್ನುವುದರ ಬಗ್ಗೆ ಹೇಳುತ್ತದೆ ಎಂದು ಕಲಾವಿದರು ಹೇಳಿಕೊಂಡಿದ್ದಾರೆ. (ಏಜೆನ್ಸೀಸ್​)

    ತನ್ನದೇ ಕಿಡ್ನಿ ಸ್ಟೋನ್​ ಬಳಸಿ ಕಲಾಕೃತಿ ತಯಾರಿಸಿದ ಕಲಾವಿದ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts