

ಮುಂಬೈ: ಅಜಯ್ ದೇವಗನ್ ಮುಂಬೈನ ಜುಹು ಪ್ರದೇಶದಲ್ಲಿ ಹೊಸ ಮನೆ ಖರೀದಿಸಿದ್ದಾರೆ. ಈಗಾಗಲೇ ಅದೇ ಏರಿಯಾದಲ್ಲಿ ಅವರಿಗೊಂದು ಮನೆ ಇದೆ. ಈಗ 60 ಕೋಟಿ ರೂ. ಮೌಲ್ಯದ ಇನ್ನೊಂದು ಮನೆಯನ್ನು ಅವರು ಖರೀದಿಸಿದ್ದಾರೆ. ಒಂದು ಮನೆ ಇರುವಾಗ, ಅಷ್ಟೊಂದು ಮೊತ್ತ ಕೊಟ್ಟು ಅವರು ಇನ್ನೊಂದು ಮನೆ ಖರೀದಿಸುವುದಕ್ಕೆ ಕಾರಣವೇನು ಎಂಬ ಪ್ರಶ್ನೆ ಬರಬಹುದು. ಅದಕ್ಕೆ ಕಾರಣವೇನೆಂದರೆ, ಲಾಕ್ಡೌನ್ನಿಂದ ರಿಯಲ್ ಎಸ್ಟೇಟ್ ವ್ಯಾಪಾರ ಇಳಿಮುಖವಾಗಿದೆ. ಸೈಟ್ ಮತ್ತು ಮನೆಗಳ ದರ ಕಡಿಮೆಯಾಗಿದೆ. ಹೆಚ್ಚು ಬೆಲೆಬಾಳುವ ಮನೆಗಳು ಕಡಿಮೆ ದರಕ್ಕೆ ಸಿಗುತ್ತಿವೆ. ಇದನ್ನು ಎನ್ಕ್ಯಾಶ್ ಮಾಡಿಕೊಳ್ಳುತ್ತಿರುವ ಹಲವು ಸೆಲೆಬ್ರಿಟಿಗಳು, ಮನೆ ಖರೀದಿಸುವಲ್ಲಿ ಬಿಜಿಯಾಗಿದ್ದಾರೆ.
ಬರೀ ಅಜಯ್ ದೇವಗನ್ ಅಷ್ಟೇ ಅಲ್ಲ, ಕಳೆದ ಆರು ತಿಂಗಳುಗಳಿಂದ ಹಲವು ಸೆಲೆಬ್ರಿಟಿಗಳು ಮನೆ ಖರೀದಿಸಿದ್ದಾರೆ. ಅಮಿತಾಭ್ ಬಚ್ಚನ್ ಅವರಿಗೆ ಈಗಾಗಲೇ ಮುಂಬೈನಲ್ಲಿ ಐದು ಮನೆಗಳಿದ್ದು, ಇತ್ತೀಚೆಗಷ್ಟೇ ಜುಹು ಪ್ರದೇಶದಲ್ಲಿ 32 ಕೋಟಿ ರೂ. ಕೊಟ್ಟು ಹೊಸ ಮನೆ ಖರೀದಿಸಿದ್ದಾರಂತೆ. ಪ್ರಾಜೆಕ್ಟ್ ಅಟ್ಲಾಂಟಿಸ್ ಎಂಬ ಅಪಾರ್ಟ್ವೆುಂಟ್ನ 27 ಮತ್ತು 28ನೇ ಮಹಡಿಗೆ ಹೊಂದಿಕೊಂಡಂತೆ ಇರುವ ಈ ಮನೆಯು 5,184 ಚದುರಡಿ ವಿಸ್ತೀರ್ಣದಲ್ಲಿದ್ದು, ಈ ಮನೆಗೆ ಆರು ಕಾರ್ ರ್ಪಾಂಗ್ ನೀಡಲಾಗಿದೆಯಂತೆ. ಆಲಿಯಾ ಭಟ್ ಸಹ ಅಷ್ಟೇ ಮೊತ್ತದ ಮನೆಯನ್ನು ಬಾಂದ್ರಾದ ವಾಸ್ತು ಪಾಲಿ ಹಿಲ್ ಅಪಾರ್ಟ್ ಮೆಂಟ್ನಲ್ಲಿ ಖರೀದಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನು ಜಾಹ್ನವಿ ಕಪೂರ್, ಜುಹು ಪ್ರದೇಶದ ಆರಯ ಎಂಬ ಅಪಾರ್ಟ್ವೆುಂಟ್ನ 14, 15 ಮತ್ತು 16ನೇ ಮಹಡಿಗೆ ಹೊಂದಿಕೊಂಡಿರುವಂತಹ ಫ್ಲಾಟ್ ಖರೀದಿಸಿದ್ದು, ಈ ಫ್ಲಾಟ್ಗೆ 39 ಕೋಟಿ ರೂ. ಕೊಟ್ಟಿದ್ದಾರಂತೆ.
ಇವರೆಲ್ಲರಿಗಿಂತ ಅತೀ ದುಬಾರಿ ವ್ಯವಹಾರವೆಂದರೆ ಅದು ಹೃತಿಕ್ ರೋಶನ್ ಅವರದ್ದು. ಹೃತಿಕ್ 97.50 ಕೋಟಿ ರೂ.ಗಳಿಗೆ ಎರಡು ಮನೆಗಳನ್ನು ಖರೀದಿಸಿದ್ದಾರಂತೆ. ಈ ಪೈಕಿ ಒಂದು ಡ್ಯುಪ್ಲೆ ಪೆಂಟ್ಹೌಸ್ ಎಂಬುದು ಗೊತ್ತಿರಲಿ. ಈ ಮನೆಗಳಿಗೆ ಹೋಗುವುದಕ್ಕೆಂದೇ ಪ್ರತ್ಯೇಕ ಲಿಫ್ಟ್ಗಳಿದ್ದು, ಹೃತಿಕ್ ಕುಟುಂಬಕ್ಕೆ 10 ರ್ಪಾಂಗ್ ಲಾಟ್ಗಳನ್ನು ನೀಡಲಾಗಿದೆಯಂತೆ. ಈ ಎರಡೂ ಫ್ಲಾಟ್ಗಳು ಒಟ್ಟು ವಿಸ್ತೀರ್ಣ 38 ಸಾವಿರ ಚದರಡಿಗಳು. ಇದಲ್ಲದೆ ಅರ್ಶದ್ ವಾರ್ಸಿ, ಆಯುಷ್ಮಾನ್ ಖುರಾನ, ಯಾಮಿ ಗೌತಮ್ ಮುಂತಾದವರು ಚಂಡೀಗಢ, ಗೋವಾ ಮುಂತಾದ ಕಡೆ ಮನೆ ಮತ್ತು ವಿಲ್ಲಾಗಳನ್ನು ಖರೀದಿಸಿದ್ದಾರೆ. (ಏಜೆನ್ಸೀಸ್)