ಮಾದಕ ಮಾರಾಟ ದಂಧೆಯಲ್ಲಿ ತೊಡಗಿದ್ದವನ ಬಂಧನ

Published on

ಬಾಗೇಪಲ್ಲಿ: ತೆಲಂಗಾಣ, ಆಂಧ್ರಪ್ರದೇಶ ಸೇರಿ ರಾಜ್ಯದ ವಿವಿಧೆಡೆ ಮಾದಕ ವಸ್ತು ಮಾರಾಟ ದಂಧೆಯಲ್ಲಿ ತೊಡಗಿದ್ದ ಬಾಗೇಪಲ್ಲಿಯ ಆರೋಪಿಯನ್ನು ಹೈದರಾಬಾದ್​ನ ಕೂಕಟ್​ಪಲ್ಲಿ ಠಾಣೆ ಪೊಲೀಸರು ಬಂಧಿಸಿ, ಸೋಮವಾರ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.

ಪಟ್ಟಣದ 1ನೇ ವಾರ್ಡ್​ನ ನಿವಾಸಿ ಅಪ್ಪಣ್ಣ ಬಂಧಿತ. ಹೈದರಾಬಾದ್​ನಿಂದ ಬಾಗೇಪಲ್ಲಿಗೆ ಆಗಮಿಸಿದ್ದ ಕೂಕಟ್​ಪಲ್ಲಿ ಠಾಣೆ ಪೊಲೀಸರು ಸೋಮವಾರ ಬೆಳಗ್ಗೆ ಅಪ್ಪಣ್ಣನ್ನು ಬಂಧಿಸಿ, ಬಾಗೇಪಲ್ಲಿ ಪೊಲೀಸರಿಗೆ ಮಾಹಿತಿ ನೀಡಿ, ನಂತರ ಮೆಡ್ಚಲ್​ ಜಿಲ್ಲಾ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.ಹಾಗೆಯೇ, ಪ್ರಕರಣ ಸಂಬಂಧ ಆಂಧ್ರಪ್ರದೇಶದ 6 ಜನರ ವಿರುದ್ಧ ತೆಲಂಗಾಣ ರಾಜ್ಯದ ಕೂಕಟ್​ಪಲ್ಲಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತೆಲಂಗಾಣ ರಾಜ್ಯದ ಹೈದರಾಬಾದ್​ನ ಕೂಕಟ್​ಪಲ್ಲಿ ಠಾಣೆ ಪೊಲೀಸರು ನಡೆಸಿರುವ ಕಾರ್ಯಾಚರಣೆಯಲ್ಲಿ ಆರೋಪಿಗಳಿಂದ 1 ಕೋಟಿ ರೂ. ಬೆಲೆಬಾಳುವ 820 ಗ್ರಾಂ ಕೊಕೈನ್​, ತೂಕದ ಯಂತ್ರ ಹಾಗೂ 5 ಪೋನ್​ಗಳನ್ನು ವಶಪಡಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net