ಅರಿಶಿನ, ಮೆಹೆಂದಿ ಶಾಸ್ತ್ರದ ಸಂಭ್ರಮದಲ್ಲಿ ಆ್ಯಕ್ಷನ್​​ ಕಿಂಗ್​ ಅರ್ಜುನ್​​ ಸರ್ಜಾ ಪುತ್ರಿ ಐಶ್ವರ್ಯಾ ಸರ್ಜಾ

Untitled-design-55-1
Published on

ಚೆನ್ನೈ: ಆ್ಯಕ್ಷನ್​ಕಿಂಗ್​ ಅರ್ಜುನ್​ ಸರ್ಜಾ ಅವರ ಪುತ್ರಿ ಐಶ್ವರ್ಯಾ ಸರ್ಜಾ ಉಮಾಪತಿ ರಾಮಯ್ಯ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ನಟಿಯ ವಿವಾಹಪೂರ್ವ ಕಾರ್ಯಕ್ರಮಗಳು ಪ್ರಾರಂಭವಾಗಿದ್ದು ನಟಿಯ ಅರಿಶಿನ ಮತ್ತು ಮೆಹೆಂದಿ ಶಾಸ್ತ್ರದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿವೆ. ಫೋಟೋಗಳಿಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿ ಶುಭಹಾರೈಸಿದ್ದಾರೆ.

ಚೆನ್ನೈನಲ್ಲಿರುವ ಅರ್ಜುನ್ ಸರ್ಜಾ ಅವರ ನಿವಾಸದಲ್ಲಿ ನೆರವೇರಿದ ಅರಿಶಿನ ಮತ್ತು ಮೆಹೆಂದಿ ಶಾಸ್ತ್ರದ ಸಮಾರಂಭದಲ್ಲಿ ಕುಟುಂಬಸ್ಥರು, ಸಂಬಂಧಿಕರು ಮತ್ತು ಅತ್ಯಾಪ್ತರು ಮಾತ್ರ ಭಾಗಿಯಾಗಿದ್ದರು. ಅರಿಶಿನ ಶಾಸ್ತ್ರದ ಥೀಮ್​​ 'ಕವರ್ ಮಿ ಇನ್ ಸನ್‌ಶೈನ್' ಎಂದಾಗಿತ್ತು.

ಅರ್ಜುನ್ ಸರ್ಜಾ, ಮಾಜಿ ನಟಿ ನಿವೇದಿತಾ ಅರ್ಜುನ್ ಅವರ ಪುತ್ರಿ ಐಶ್ವರ್ಯಾ ಮತ್ತು ನಟ-ನಿರ್ದೇಶಕ ತಂಬಿ ರಾಮಯ್ಯ ಅವರ ಪುತ್ರ ಉಮಾಪತಿ ಮದುವೆಯ ಆರತಕ್ಷತೆ ಜೂನ್ 14, 2024ರಂದು ಚೆನ್ನೈನ ಲೀಲಾ ಪ್ಯಾಲೇಸ್‌ನಲ್ಲಿ ನಡೆಯಲಿದೆ. ಈ ಸ್ಟಾರ್ ಜೋಡಿಯ ನಿಶ್ಚಿತಾರ್ಥ 2023 ಅಕ್ಟೋಬರ್ 28ರಂದು ನಡೆದಿತ್ತು.

ಅಸಲಿಗೆ ಐಶ್ವರ್ಯಾ ಅರ್ಜುನ್ ಮತ್ತು ಉಮಾಪತಿ ರಾಮಯ್ಯ ಮೊದಲ ಭೇಟಿಯಾದ ಸ್ಥಳ ಕುತೂಹಲವನ್ನು ಉಂಟುಮಾಡುತ್ತದೆ. ಏಕೆಂದರೆ ಆ್ಯಕ್ಷನ್​​ ಕಿಂಗ್​ ಅರ್ಜುನ್ ಸರ್ಜಾ ಅವರು ನಿರೂಪಕರಾಗಿದ್ದ ರಿಯಾಲಿಟಿ ಶೋ ಸರ್ವೈವರ್‌ ಈ ಜೋಡಿಯ ಮೊದಲ ಭೇಟಿಯ ವೇದಿಕೆಯಾಗಿದೆ. (ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net