ಎಷ್ಟೇ ಪ್ರಯತ್ನಿಸಿದ್ರೂ ನಿಮ್ಮ ಮಕ್ಕಳ ತೂಕ ಹೆಚ್ಚಾಗುತ್ತಿಲ್ಲವೇ? ಹಾಗಿದ್ದರೆ ಈ ರೀತಿ ಆಹಾರ ಟ್ರೈ ಮಾಡಿ ನೋಡಿ! Recipe

untitled-design-2025-10-07t143622330-68e4d818deaf1
Published on

Recipe: ಮಕ್ಕಳ ಬೆಳವಣಿಗೆಯಲ್ಲಿ ಪೋಷಕರ ಪಾತ್ರ ಮಹತ್ವವಾಗಿರುತ್ತದೆ. ಇಲ್ಲಿ ಪೋಷಕರು ಮನೆಯಲ್ಲಿ ತಯಾರಿಸುವಂತಹ ಆಹಾರ ಪದಾರ್ಥಗಳು ಮಕ್ಕಳಲ್ಲಿ ಶಕ್ತಿ ಬರುವಲ್ಲಿ ಸಹಾಯ ಮಾಡುತ್ತವೆ. ಕೆಲವೊಮ್ಮೆ ನೀವು ಎಷ್ಟೇ ಪೌಷ್ಟಿಕಾಂಶ ಇರುವಂತಹ ಆಹಾರಗಳನನ್ನು ನೀಡಿದರೂ ಸಹ ಮಕ್ಕಳ ತೂಕ ಹೆಚ್ಚುತ್ತಿಲ್ಲವೇ, ಇದರಿಂದ ನೀವು ಏನು ಮಾಡಬೇಕು ಎಂಬ ಗೊಂದಲದಲ್ಲಿದ್ದರೆ, ಈ ರೀತಿಯ ಆಹಾರವನ್ನು ನೀಡಿ ಇದು ನಿಮ್ಮ ಮಕ್ಕಳಲ್ಲಿ ತೂಕ ಹೆಚ್ಚಿಸುವಲ್ಲಿ ಸಹಾಯ ಮಾಡುತ್ತದೆ.

ಬೇಕಾಗುವ ಪದಾರ್ಥಗಳು

* 1 ಕ್ಯಾರೆಟ್

* 1 ಆಲೂಗಡ್ಡೆ

* 1/2 ಕಪ್​ ಬಟಾಣಿ

* ತಾವರೆ ಬೀಜದ ಪುಡಿ

* ಸ್ವಲ್ಪ ಕಾಳು ಮೆಣಸಿನ ಪುಡಿ

* ಜೀರಿಗೆ ಪುಡಿ

* ಇಂಗು

* ಅರಿಶಿಣ ಪುಡಿ

ಮಾಡುವ ವಿಧಾನ

ಮೊದಲು ಒಂದು ಕುಕ್ಕರ್​ಗೆ ಆಲೂಗಡ್ಡೆ, ಬಟಾಣಿ, ಕ್ಯಾರೆಟ್​ ಹಾಕಿ 3 ವಿಶಲ್​ ಹೊಡಿಸಿ ಬೇಯಿಸಿಟ್ಟುಕೊಳ್ಳಿ. ನಂತರ ಒಂದು ಬೌಲ್​ಗೆ ಬೇಯಿಸಿಟ್ಟುಕೊಂಡಿರುವ ತರಕಾರಿ ಹಾಕಿ ಅದಕ್ಕೆ ತಾವರೆ ಬೀಜದ ಪುಡಿ, ಕಾಳು ಮೆಣಸಿನ ಪುಡಿ, ಜೀರಿಗೆ ಪುಡಿ, ಇಂಗು, ಅರಿಶಿಣ ಪುಡಿ ಹಾಕಿ ಮಿಕ್ಸ್​ ಮಾಡಿ ಸಣ್ಣ ಸಣ್ಣ ಉಂಡೆಗಳಾಗಿ ಮಾಡಿ. ಇದಾದ ನಂತರ ಅದನ್ನು ಸಣ್ಣಕ್ಕೆ ತಟ್ಟಿ ಇಟ್ಟುಕೊಳ್ಳಿ. ಇದಾದ ಬಳಿಕ ಒಲೆಯ ಮೇಲೆ ತವ ಇಟ್ಟು ಎರಡೂ ಕಡೆ ಸ್ವಲ್ಪ ಹೊತ್ತು ಬೇಯಿಸಿ ಸ್ವಲ್ಪ ತಣ್ಣಗಾದ ನಂತರ ಮಕ್ಕಳಿಗೆ ತಿನ್ನಲು ಕೊಡಿ..(ಏಜೆನ್ಸೀಸ್​)

ಎಚ್ಚರಿಕೆ: ಎರಡು ವರ್ಷದ ನಂತರದ ಮಕ್ಕಳಿಗೆ ಮಾತ್ರ ಕೊಡಿ. ಎರಡು ವರ್ಷದ ಒಳಗಿನ ಮಕ್ಕಳಿಗೆ ಯಾವುದೇ ಕಾರಣಕ್ಕೂ ನೀಡಬೇಡಿ..ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net