ಮೆಷಿನ್​ ಕಾಫಿ ಕುಡಿಯುತ್ತಿದ್ದೀರಾ.. ಹುಷಾರ್​!; ನಿಮ್ಮ ಹೃದಯ ಅಪಾಯದಲ್ಲಿದೆ ಎಂದ ಹೊಸ ಅಧ್ಯಯನ | Machine Coffee

dk - 2025-03-24T155212.656
Published on

Machine Coffee : ಇತ್ತೀಚಿನ ದಿನಗಳಲ್ಲಿ ದೊಡ್ಡ-ದೊಡ್ಡ ಅಫೀಸ್​ ಕಚೇರಿಗಳಲ್ಲಿ ಸಾಮಾನ್ಯವಾಗಿ ಕಾಫಿ ಕುಡಿಯಲು ಮಷಿನ್​ ಬಳಸುತ್ತಾರೆ. ಅಲ್ಲದೆ, ಹೋಟೆಲ್​ ಸೇರಿದಂತೆ ಮನೆಗಳಲ್ಲಿ ಕೆಲವರು ಕಾಫಿ ಮಷಿನ್​ನನ್ನೇ ಆಯ್ಕೆ ಮಾಡಿಕೊಂಡಿರುತ್ತಾರೆ. ಆದರೆ, ಇಂತಹ ಮಷಿನ್​ ಕಾಫಿ ಸೇವನೆ ಮಾಡೋದ್ರಿಂದ ಹೃದಯಕ್ಕೆ ಹಾನಿಯಾಗುತ್ತದೆ ಎಂದು ಹೊಸ ಸಂಶೋಧನೆ ವರದಿ ಬಹಿರಂಗಗೊಳಿಸಿದೆ.

ಮಷಿನ್​ ಕಾಫಿ ಕೊಲೆಸ್ಟ್ರಾಲ್​ ಕಾಫಿ ಕೊಲೆಸ್ಟ್ರಾಲ್​ ಹೆಚ್ಚಿಸುತ್ತದೆ ಅಲ್ಲದೆ, ಹೃದಯ ಸಂಬಂಧಿಸಿದ ಸಮಸ್ಯೆಗಳಿಗೆ ಕಾರಣವಾಗುತ್ತದೆ.ಸಂಶೋಧನೆ ಹೇಳೊದೇನು? ಎಂದು ನೋಡೋಣ..

ಸಾಮಾನ್ಯವಾಗಿ ಹೆಚ್ಚಿನ ಜನರು ಕಚೇರಿಯಲ್ಲಿ ಇರುವ ಕಾಫಿ ವೆಂಡಿಂಗ್ ಮೆಷಿನ್‌ನಿಂದ ಕ್ಯಾಪುಸಿನೊ, ಲ್ಯಾಟೆ ಅಥವಾ ಕಪ್ಪು ಕಾಫಿ ಕುಡಿಯುತ್ತಾರೆ. ನೀವು ಕೂಡ ದಿನಕ್ಕೆ ಹಲವಾರು ಬಾರಿ ಆಫೀಸ್ ಯಂತ್ರದಿಂದ ಕಾಫಿ ಕುಡಿಯುತ್ತಿರಬಹುದು. ಆದರೆ ಅದು ನಿಮ್ಮ ಹೃದಯದ ಆರೋಗ್ಯಕ್ಕೆ ಹಾನಿಕಾರಕ ಎಂದು ನಿಮಗೆ ತಿಳಿದಿದೆಯೇ?

ಸಂಶೋಧನೆ ಹೇಳೊದೇನು..?

ಕಚೇರಿ ಯಂತ್ರಗಳಲ್ಲಿ ತಯಾರಿಸಿದ ಕಾಫಿಯು ಕಾಗದದ ಮೂಲಕ ಫಿಲ್ಟರ್ ಮಾಡಿದ ಕಾಫಿಗಿಂತ ಗಮನಾರ್ಹವಾಗಿ ಹೆಚ್ಚಿನ ಕೊಲೆಸ್ಟ್ರಾಲ್-ಹೆಚ್ಚಿಸುವ ಸಂಯುಕ್ತಗಳನ್ನು ಹೊಂದಿರುತ್ತದೆ ಎಂದು ಉಪ್ಸಲಾ ವಿಶ್ವವಿದ್ಯಾಲಯ ಮತ್ತು ಚಾಲ್ಮರ್ಸ್ ತಂತ್ರಜ್ಞಾನ ವಿಶ್ವವಿದ್ಯಾಲಯದ ಅಧ್ಯಯನವು ಕಂಡುಹಿಡಿದಿದೆ.

14 ವಿಭಿನ್ನ ಕಚೇರಿ ಯಂತ್ರಗಳಿಂದ(ಕಾಫಿ ಮಷಿನ್​) ಕಾಫಿಯನ್ನು ವಿಶ್ಲೇಷಿಸಿ, ಎರಡು(ಕೆಫೆಸ್ಟಾಲ್​ ಮತ್ತು ಕಹ್ವಿಯೋಲ್​) ನೈಸರ್ಗಿಕ ಡೈಟರ್​ಪಿಸ್​ಗಳ ಉಪಸ್ಥಿತಿಯನ್ನು ಪರಿಶೀಲಿಸಿತು.

ಕಾಫಿ ಎಣ್ಣೆಯಲ್ಲಿ ಕೆಫೆಸ್ಟಾಲ್​ ಮತ್ತು ಕಹ್ವಿಯೋಲ್​ನಂತಹ ಸಂಯುಕ್ತಗಳು ಕಂಡು ಬರುತ್ತದೆ. ಇದು ಕೊಲೆಸ್ಟ್ರಾಲ್​ ಅನ್ನ ಹೆಚ್ಚಿಸುತ್ತದೆ. ಪೇಪರ್ ಫಿಲ್ಟರ್‌ಗಳು ಇವುಗಳನ್ನು ನಿಲ್ಲಿಸುತ್ತವೆ. ಆದರೆ, ಕೆಲಸದ ಸ್ಥಳದಲ್ಲಿ ಬಳಸುವ ಬ್ರೂವರ್‌ಗಳಲ್ಲಿ ಬಳಸುವ ಲೋಹದ ಫಿಲ್ಟರ್‌ಗಳು ಅವುಗಳನ್ನು ಒಳಗೆ ಬಿಡುತ್ತವೆ. ಅವು ನಿಮ್ಮ ಕಪ್‌ಗೆ ಹೋಗಲು ಅವಕಾಶ ಮಾಡಿಕೊಡುತ್ತವೆ ಮತ್ತು ಅವುಗಳ ಸಾಂದ್ರತೆಯನ್ನು ಹೆಚ್ಚಿಸುತ್ತವೆ. ಯಂತ್ರದಿಂದ ತಯಾರಿಸಿದ ಕಾಫಿಯಲ್ಲಿ ಕೆಫೆಸ್ಟಾಲ್ ಸಾಂದ್ರತೆಯು ಲೀಟರ್‌ಗೆ 176 ಮಿಲಿಗ್ರಾಂಗಳಷ್ಟಿದ್ದು, ಇದು ಕಾಗದದಿಂದ ಫಿಲ್ಟರ್ ಮಾಡಿದ ಕಾಫಿಯಲ್ಲಿ ಕಂಡುಬರುವ ಪ್ರತಿ ಲೀಟರ್‌ಗೆ 12 ಮಿಲಿಗ್ರಾಂಗಳಿಗಿಂತ ಸುಮಾರು 15 ಪಟ್ಟು ಹೆಚ್ಚಾಗಿದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ದಿನಕ್ಕೆ 3 ಅಥವಾ ಅದಕ್ಕಿಂತ ಹೆಚ್ಚು ಕಪ್ ಕಾಫಿ ಕುಡಿಯುವ ಉದ್ಯೋಗಿಗಳು ತಿಳಿಯದೆಯೇ ತಮ್ಮ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ ಎಂದು ಈ ಅಧ್ಯಯನವು ಹೇಳುತ್ತದೆ.

ಲೋಹದಿಂದ ಫಿಲ್ಟರ್​ ಮಾಡಿದ ಕಾಫಿಯ ಬದಲು ಪೇಪರ್​ನಿಂದ ಫಿಲ್ಟರ್​ ಮಾಡಿದ ಕಾಫಿ ಸೇವನೆಯಿಂದ ಕೆಟ್ಟ ಕೊಲೆಸ್ಟ್ರಾಲ್​ 0.58 mmol|L ರಷ್ಟು ಕಡಿಮೆಯಾಗಬಹುದು ಎಂದು ಸಂಶೋಧಕರು ಹೇಳುತ್ತಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net