More

    ಮಗಳ ವಯಸ್ಸಿನವಳ ಜತೆ ಮದುವೆ: ನಟ ಅರ್ಬಾಜ್​ ಖಾನ್ ಕೊಟ್ಟ ಸಮರ್ಥನೆ ಹೀಗಿದೆ ನೋಡಿ…​

    ಮುಂಬೈ: ನಟ ಸಲ್ಮಾನ್​ ಖಾನ್​ ಸಹೋದರ ಹಾಗೂ ನಟಿ ಮಲೈಕಾ ಅರೋರಾ ಮಾಜಿ ಪತಿ ಅರ್ಬಾಜ್​ ಖಾನ್​ ಮತ್ತು ಮೇಕಪ್ ಆರ್ಟಿಸ್ಟ್ ಶುರಾ ಖಾನ್ ಕಳೆದ ವರ್ಷ ಡಿಸೆಂಬರ್​ 24ರಂದು ದಿಢೀರನೇ ಮದುವೆ ಮಾಡಿಕೊಳ್ಳುವ ಮೂಲಕ ಎಲ್ಲರಿಗೂ ಸರ್ಪ್ರೈಸ್​ ನೀಡಿದ ಸಂಗತಿ ನಿಮಗೆಲ್ಲರಿಗೂ ತಿಳಿದೇ ಇದೆ.

    ತನಿಗಿನ 22 ವರ್ಷ ಕಿರಿಯ ಹಾಗೂ ಮಗಳ ವಯಸ್ಸಿನ ಯುವತಿಯನ್ನು ವರಿಸಿದ್ದಕ್ಕೆ ಅರ್ಬಾಜ್​ ಖಾನ್​ ಟ್ರೋಲ್​ಗೆ ಗುರಿಯಾದರು. ಇದೀಗ ಎಲ್ಲ ಟ್ರೋಲ್​ಗಳಿಗೂ ಉತ್ತರ ನೀಡಿರುವ ಅರ್ಬಾಜ್​, ನಮ್ಮಿಬ್ಬರ ಮದುವೆ ಯೋಚಿಸಿ ತೆಗೆದುಕೊಂಡ ನಿರ್ಧಾರವಾಗಿದೆ. ಇದು ಇಬ್ಬರ ಸಮ್ಮತಿಯಿಂದ ನಡೆದಿದೆ. ಇಬ್ಬರಿಗೂ ಪರಸ್ಪರ ಏನು ಬೇಕು ಎಂದು ತಿಳಿದಿತ್ತು ಎಂದು ಅರ್ಬಾಜ್​ ಹೇಳಿದ್ದಾರೆ.

    ನನ್ನ ಪತ್ನಿ ನನಗಿಂತ ವಯಸ್ಸಿನಲ್ಲಿ ತುಂಬಾ ಕಿರಿಯವಳಾಗಿದ್ದರೂ ಅವಳು 16 ವರ್ಷ ವಯಸ್ಸಿನವಳಲ್ಲ. ತನ್ನ ಜೀವನದಲ್ಲಿ ತನಗೆ ಏನು ಬೇಕೆಂಬುದು ಆಕೆಗೆ ಚೆನ್ನಾಗಿ ತಿಳಿದಿದೆ ಮತ್ತು ನನಗೂ ನನ್ನ ಜೀವನದಲ್ಲಿ ಏನು ಬೇಕೆಂದು ಗೊತ್ತಿದೆ. ನಾವು ಒಬ್ಬರಿಗೊಬ್ಬರು ಏನನ್ನು ನಿರೀಕ್ಷಿಸುತ್ತೇವೆ, ನಮಗೆ ಏನು ಬೇಕು ಮತ್ತು ನಮ್ಮ ಭವಿಷ್ಯವನ್ನು ನಾವು ಹೇಗೆ ನೋಡುತ್ತಿದ್ದೇವೆ ಎಂಬುದನ್ನು ನೋಡಲು ಆ ಒಂದು ವರ್ಷದಲ್ಲಿ ನಾವು ಸಾಕಷ್ಟು ಸಮಯವನ್ನು ಒಟ್ಟಿಗೆ ಕಳೆದಿದ್ದೇವೆ. ಮದುವೆ ಎಂಬ ನಿರ್ಧಾರವನ್ನು ಆತುರವಾಗಿ ತೆಗೆದುಕೊಂಡ ನಿರ್ಧಾರವಲ್ಲ ಎಂದು ಅರ್ಬಾಜ್​ ಹೇಳಿದರು.

    ವಯಸ್ಸಿನ ಅಂತರದ ಬಗ್ಗೆ ನಮಗೆ ತಿಳಿದಿರಲಿಲ್ಲ ಅಥವಾ ನಾವು ಅದನ್ನು ಪರಸ್ಪರ ಮರೆಮಾಡಿದ್ದೇವೆ ಎಂದರ್ಥವಲ್ಲ. ಒಂದು ಹುಡುಗಿಯಾಗಿ ಆಕೆ ಏನು ಮಾಡುತ್ತಿದ್ದಾಳೆ ಎಂಬುದನ್ನು ಅವಳು ತಿಳಿದಿದ್ದಳು ಮತ್ತು ಒಬ್ಬ ಪುರುಷನಾಗಿ ನಾನು ಏನು ಮಾಡುತ್ತಿದ್ದೇನೆಂದು ನನಗೂ ತಿಳಿದಿತ್ತು. ಒಂದೇ ವಯಸ್ಸಿನ ಇಬ್ಬರು ಒಟ್ಟಿಗೆ ಇರಬಹುದು ಮತ್ತು ಒಂದು ವರ್ಷದಲ್ಲಿ ಪ್ರತ್ಯೇಕವಾಗಿರಬಹುದು. ಹಾಗಾದರೆ ಸಂಬಂಧಗಳನ್ನು ಮುಂದುವರಿಸುವ ಏಕೈಕ ಅಂಶವೆಂದರೆ ಅದು ವಯಸ್ಸೇ? ಆತ್ಮಾವಲೋಕನ ಮಾಡಿಕೊಳ್ಳಿ. ವಾಸ್ತವವಾಗಿ ಮದುವೆಗಳ ನಡುವೆ ದೊಡ್ಡ ವಯಸ್ಸಿನ ಅಂತರವನ್ನು ನೀವು ನೋಡಿದಾಗಲೆಲ್ಲ ಅವರು ಹೆಚ್ಚಿನ ಯಶಸ್ಸಿನ ಪ್ರಮಾಣವನ್ನು ಹೊಂದಿದ್ದಾರೆ ಎಂದು ಅರ್ಬಾಜ್​ ಸಮರ್ಥನೆ ನೀಡಿದರು.

    ನಾವು ಜೀವನದಲ್ಲಿ ಏನನ್ನು ಹುಡುಕುತ್ತಿದ್ದೇವೋ ಅದು ಹೊಂದಿಕೆಯಾಗುತ್ತದೆ. ನಾವು ಪ್ರತಿಯೊಬ್ಬರಿಗೂ ಒಂದೇ ರೀತಿಯ ಬದ್ಧತೆ, ಪ್ರೀತಿ ಮತ್ತು ಗೌರವವನ್ನು ನೀಡಲು ಸಿದ್ಧರಿದ್ದೇವೆ. ಅದರಾಚೆಗೆ ಯಾವುದೇ ಮ್ಯಾಟರ್​ ಆಗುವುದಿಲ್ಲ ಎಂದು ಅರ್ಬಾಜ್​ ಟ್ರೋಲ್​ಗಳಿಗೆ ಖಡಕ್​ ತಿರುಗೇಟು ನೀಡಿದರು.

    ಡಿಸೆಂಬರ್​ 24ರ ರಾತ್ರಿ ಮುಂಬೈನಲ್ಲಿರುವ ಸಹೋದರಿ ಅರ್ಪಿತಾ ಖಾನ್​ ಶರ್ಮಾ ಅವರ ಮನೆಯಲ್ಲಿ ಮದುವೆ ಸಮಾರಂಭ ತುಂಬಾ ಸರಳವಾಗಿ ನಡೆಯಿತು. ಕುಟುಂಬ ಸದಸ್ಯರು ಮತ್ತು ಆಪ್ತ ಸ್ನೇಹಿತರ ನಡುವೆ ಅರ್ಬಾಜ್​ ಮತ್ತು ಶುರಾ ಖಾನ್ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಅರ್ಬಾಜ್​ ಪಾಲಕರಾದ ಸಲೀಂ ಖಾನ್​ ಮತ್ತು ಸುಶಿಲಾ ಚರಕ ಹಾಗೂ ಸಹೋದರ ಸಲ್ಮಾನ್​ ಖಾನ್​ ಕೂಡ ಉಪಸ್ಥಿತರಿದ್ದರು. ಅಲ್ವಿರಾ ಖಾನ್ ಅಗ್ನಿಹೋತ್ರಿ, ಪತಿ ಅತುಲ್ ಅಗ್ನಿಹೋತ್ರಿ, ಸಲ್ಮಾನ್ ಖಾನ್ ಅವರ ರೂಮರ್ಡ್​ ಗರ್ಲ್​ಫ್ರೆಂಡ್​ ಯುಲಿಯಾ ವಂಟೂರ್, ರವಿನಾ ಟಂಡನ್​ ಮತ್ತು ಅವರ ಪುತ್ರಿ ರಾಶಾ ಕೂಡ ವಿವಾಹ ಸಮಾರಂಭಕ್ಕೆ ಸಾಕ್ಷಿಯಾದರು.

    ಹೊಸ ಸಿನಿಮಾ ‘ಪಟ್ನಾ ಶುಕ್ಲಾ’ ಸೆಟ್‌ನಲ್ಲಿ ಅರ್ಬಾಜ್ ಖಾನ್ ಮತ್ತು ಶುರಾ ಖಾನ್ ಭೇಟಿಯಾದರು. ಅರ್ಬಾಜ್​ ಅವರು ಈ ಹಿಂದೆ ನಟಿ ಮಲೈಕಾ ಅರೋರಾ ಅವರನ್ನು ಮದುವೆಯಾಗಿದ್ದರು. 2016ರ ಮಾರ್ಚ್​ ತಿಂಗಳಲ್ಲಿ ಇಬ್ಬರು ಬೇರೆ ಬೇರೆಯಾಗುತ್ತಿರುವುದಾಗಿ ಘೋಷಿಸಿದರು. 1998ರಲ್ಲಿ ನಡೆದ ಇಬ್ಬರ ವಿವಾಹ 19 ವರ್ಷಗಳ ನಂತರ 2017, ಮೇ 11ರಂದು ಅಧಿಕೃತವಾಗಿ ಡಿವೋರ್ಸ್​ ಆದರು. ಮಲೈಕಾಳೊಂದಿಗೆ ಸಂಬಂಧ ಮುರಿದುಬಿದ್ದ ನಂತರ, ಅರ್ಬಾಜ್ ತನ್ನ ನಟಿ ಮತ್ತು ರೂಪದರ್ಶಿ ಜಾರ್ಜಿಯಾ ಆಂಡ್ರಿಯಾ ಅವರೊಂದಿಗೆ ದೀರ್ಘಕಾಲದಿಂದ ಡೇಟಿಂಗ್ ಮಾಡುತ್ತಿದ್ದರು. ಆದರೆ ಇಬ್ಬರೂ ಬೇರ್ಪಟ್ಟರು. ಇದಾದ ನಂತರ ಒಂಟಿಯಾಗಿದ್ದ ಅರ್ಬಾಜ್ ಅವರು ಇದೀಗ ಮತ್ತೆ ಮದುವೆ ಆಗುತ್ತಿದ್ದಾರೆ ಎನ್ನಲಾಗಿದೆ.

    ಮತ್ತೊಂದೆಡೆ ಶುರಾ ಖಾನ್​ ಬಗ್ಗೆ ಹೇಳುವುದಾದರೆ, ಬಾಲಿವುಡ್ ಮೇಕಪ್ ಕಲಾವಿದೆಯಾಗಿರುವ ಶುರಾ, ನಟಿ ರವೀನಾ ಟಂಡನ್ ಮತ್ತು ಅವರ ಮಗಳು ರಾಶಾ ಥಡಾನಿ ಅವರೊಂದಿಗೆ ನಿಕಟ ಸಂಬಂಧ ಹೊಂದಿದ್ದಾರೆ. ಅರ್ಬಾಜ್​ ಮತ್ತು ಶುರಾ ನಡುವೆ 22 ವರ್ಷಗಳ ಅಂತರವಿದೆ. (ಏಜೆನ್ಸೀಸ್​)

    ತನಗಿಂತ 22 ವರ್ಷ ಕಿರಿಯ ಯುವತಿಯನ್ನು ವರಿಸಿದ ಅರ್ಬಾಜ್​ ಖಾನ್​! ಶುಭಕೋರಿದ ಪುತ್ರ ಅರ್ಹಾನ್​

    ಅಪ್ಪನ ಮದ್ವೆಯಲ್ಲಿ ಹಾಡು ಹೇಳಿ, ಕುಣಿದು ಕುಪ್ಪಳಿಸಿದ ಪುತ್ರ! ಸಹೋದರ ಸಲ್ಮಾನ್​ ಖಾನ್ ಸಖತ್​ ಸ್ಟೆಪ್ಸ್​​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts