More

    ಮಿಲ್ಕಿ ಬ್ಯೂಟಿ ತಮನ್ನಾ ಸಿನಿಮಾ ಏಪ್ರಿಲ್​ಗೆ ರಿಲೀಸ್? ಇದು ಅಂತಿಂತ ಕಥೆಯಲ್ಲ!

    ತಮಿಳುನಾಡು: ತಮಿಳು ಮತ್ತು ತೆಲುಗು ಚಿತ್ರರಂಗದ ಮಿಲ್ಕಿ ಬ್ಯೂಟಿ, ಕಾವಾಲಾ ಬೆಡಗಿ, ನಟಿ ತಮನ್ನಾ ಭಾಟೀಯಾ ಅಭಿನಯದ ಹಾಗೂ ಸುಂದರ್​ ನಿರ್ದೇಶನದ ಬಹುನಿರೀಕ್ಷಿತ ಹಾರರ್, ಥ್ರಿಲ್ಲರ್​ ‘ಅರಮನೈ 4’ ಸಿನಿಮಾ ಇದೇ ಏಪ್ರಿಲ್​ನಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರ ತಯಾರಕರು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಇದು ‘ಅರಮನೈ’ ಚಿತ್ರದ ಮುಂದುವರಿದ ಭಾಗವಾಗಿದೆ.

    ಇದನ್ನೂ ಓದಿ: ಮಾ.೨೮ ರಿಂದ ಕೊಡಗು ಜಿಲ್ಲೆಯಾದ್ಯಂತ ಜಾಗೃತಿ ಕಾರ್ಯಕ್ರಮ: ವರ್ಣಿತ್ ನೇಗಿ

    ಕಳೆದ ವರ್ಷದಿಂದ ಟ್ರೆಂಡಿಂಗ್​ನಲ್ಲಿರುವ ತಮನ್ನಾ, ಬ್ಯಾಕ್ ಟು ಬ್ಯಾಕ್ ಸಿನಿಮಾ ಮತ್ತು ವೆಬ್​ ಸಿರೀಸ್​ಗಳಲ್ಲಿ ಅಭಿನಯಿಸುವ ಮೂಲಕ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಇದೀಗ ಮಿಲ್ಕಿ ಬ್ಯೂಟಿ ನಟಿಸಿರುವ ಒಡೆಲಾ-2 ಮತ್ತು ಹಾರರ್​ ಜಾನರ್​ ಒಳಗೊಂಡ ಅರಮನೈ 4 ಸೇರಿದಂತೆ ಹಲವಾರು ಪ್ರಾಜೆಕ್ಟ್​ಗಳು ರಿಲೀಸ್​ಗೆ ಸಾಲುಗಟ್ಟಿ ನಿಂತಿವೆ.

    ಇನ್ನು ಈ ಸಿನಿಮಾದ ಬಗ್ಗೆ ಎಕ್ಸ್​ನಲ್ಲಿ (ಈ ಹಿಂದಿನ ಟ್ವಿಟರ್​) ಮಾಹಿತಿ ಹಂಚಿಕೊಂಡ ತಮನ್ನಾ, “ಅರಮನೈ 4 ಸಿನಿಮಾ ಇದೇ ಏಪ್ರಿಲ್‌ 4ರಂದು ಬಿಡುಗಡೆಯಾಗಲಿದೆ. ಈ ಬೇಸಿಗೆಯಲ್ಲಿ ನಗು ಮತ್ತು ಸಾಕಷ್ಟು ಚಳಿ ಹಾಗೇ ರೋಮಾಂಚನ ಸ್ವೀಕರಿಸಲು ನೀವು ಸಿದ್ಧರಿದ್ದೀರಾ?” ಎಂದು ಚಿತ್ರದ ಮೊದಲ ಪೋಸ್ಟರ್​ ಹಂಚಿಕೊಂಡಿದ್ದಾರೆ.

    ಇದನ್ನೂ ಓದಿ: ಅಧ್ಯಾತ್ಮಿಕ ಸದ್ಗುರು ಜಗ್ಗಿ ವಾಸುದೇವ್ ಆರೋಗ್ಯದಲ್ಲಿ ಚೇತರಿಕೆ, ಆಸ್ಪತ್ರೆಯಿಂದ ಬಿಡುಗಡೆ

    ಚಿತ್ರದಲ್ಲಿ ಸಂತೋಷ್ ಪ್ರತಾಪ್, ತಮನ್ನಾ ಭಾಟೀಯಾ, ರಾಶಿ ಖನ್ನಾ, ಸುಂದರ್​, ಸಂತಾನಂ, ಗರುಡ ರಾಮ್​, ಯೋಗಿ ಬಾಬು, ಕೋವೈ ಸರಳಾ, ರಾಜೇಂದ್ರನ್, ಗಣೇಶ್​, ವಿಟಿವಿ ಗಣೇಶ್, ಸಿಂಗಂಪಲ್ಲಿ ಮುಂತಾದವರ ತಾರಾಗಣವಿದೆ,(ಏಜೆನ್ಸೀಸ್).

    ಅದೊಂದು ಪಾತ್ರ ನಾನು ಒಪ್ಪಬಾರದಿತ್ತು! ಆ ತಪ್ಪಿಂದ ನನ್ನ ಆಸೆಯೇ ನುಚ್ಚುನೂರಾಯ್ತು: ನಟಿ ಅರ್ಚನಾ

    ಬಾಳೆಹಣ್ಣಿನ ವಿಷಯದಲ್ಲಿ ಈ ತಪ್ಪನ್ನು ಮಾಡಲೇಬೇಡಿ! ಇಲ್ಲಿದೆ ಉಪಯುಕ್ತ ಮಾಹಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts