23ರಂದು ಎಡನೀರು ಮಠದಲ್ಲಿ ಆರಾಧನೆ

edaneer
Published on

ಕಾಸರಗೋಡು: ಎಡನೀರು ಬ್ರಹ್ಮೈಕ್ಯ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ಅವರ ಚತುರ್ಥ ವಾರ್ಷಿಕ ಆರಾಧನಾ ಮಹೋತ್ಸವ ಆಗಸ್ಟ್ 23ರಂದು ಶ್ರೀಮಠದಲ್ಲಿ ನಡೆಯಲಿದೆ. ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಕಾರ್ಯಕ್ರಮ ಜರುಗಲಿದೆ.

ಬೆಳಗ್ಗೆ 8.30ಕ್ಕೆ ಧ್ವಜಾರೋಹಣ, 8.30ಕ್ಕೆ ಭಜನೆ, 10ಕ್ಕೆ ಭಕ್ತಿ ಸಂಗೀತ, ಮಧ್ಯಾಹ್ನ 12.15ಕ್ಕೆ ವೃಂದಾವನ ಪೂಜೆ ನಡೆಯುವುದು. 2.15ಕ್ಕೆ ಆರಾಧನೋತ್ಸವ ಮಹಾಸಭೆಯಲ್ಲಿ ಹೊರನಾಡು ಶ್ರೀ ಅನ್ನಪೂರ್ಣೇಶ್ವರೀ ದೇವಸ್ಥಾನದ ಧರ್ಮದರ್ಶಿ ಭೀಮೇಶ್ವರ ಜೋಷಿ ಅಧ್ಯಕ್ಷತೆ ವಹಿಸುವರು. ಬೆಂಗಳೂರಿನ ಜ್ಯೋತಿಷಿ ಬಿ.ಎಸ್.ದ್ವಾರಕಾನಾಥ್ ಗುರುಸ್ಮರಣೆ ಮತ್ತು ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ಸ್ಮತಿ ಗೌರವ ಪ್ರದಾನ ಮಾಡುವರು. ಕರ್ನಾಟಕ ಮಾನವ ಹಕ್ಕು ಆಯೋಗ ಅಧ್ಯಕ್ಷ ಡಾ.ಟಿ.ಶ್ಯಾಮ ಭಟ್ ಗೌರವ ಉಪಸ್ಥಿತರಿರುವರು. ಶ್ರೀಮಠದ ಪ್ರಬಂಧಕ ರಾಜೇಂದ್ರ ಕಲ್ಲೂರಾಯ ಅಭಿನಂದನಾ ಭಾಷಣ ಮಾಡುವರು. ಸಂಜೆ 4ರಿಂದ ಸಂಪಾಜೆ ಡಾ.ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ ವತಿಯಿಂದ ಯಕ್ಷಗಾನ ಬಯಲಾಟ ಜರುಗಲಿರುವುದು ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net