

2023-24 ನೇ ಸಾಲಿನ ಕೇಂದ್ರ ಪುರಸ್ಕೃತ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ ಸೂಕ್ಷ್ಮ ನೀರಾವರಿ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುತ್ತಿದ್ದು ಸಂಬAಧಿಸಿದ ತಾಲ್ಲೂಕಿನ ತೋಟಗಾರಿಕೆ ಕಛೇರಿಯನ್ನು ಸಂಪರ್ಕಿಸಿ ಅರ್ಜಿ ಸಲ್ಲಿಸಬಹುದಾಗಿದೆ.
ಹನಿ ನೀರಾವರಿ ಮತ್ತು ತುಂತುರು ನೀರಾವರಿ ಅಳವಡಿಸಿದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ವರ್ಗದ ರೈತರಿಗೆ (ಖಆ ಸಂಖ್ಯೆ ಇರುವ ಜಾತಿ ಪ್ರಮಾಣ ಪತ್ರವನ್ನು ಸಲ್ಲಿಸುವುದು ಕಡ್ಡಾಯ) ಗರಿಷ್ಠ ಎರಡು ಎಕರೆ ಪ್ರದೇಶದವರೆಗೆ ಶೇ. 90ರಷ್ಟು ಸಹಾಯ ದಿನ ಹಾಗೂ ಇತರೆ ರೈತರಿಗೆ ಗರಿಷ್ಠ ಎರಡು ಎಕರೆ ಪ್ರದೇಶದವರೆಗೆ ಶೇ. 75 ರಷ್ಟು ಸಹಾಯಧನ ಹಾಗೂ ಎಲ್ಲಾ ವರ್ಗದ ರೈತರಿಗೆ ಭಾರತ ಸರ್ಕಾರದ ಮಾರ್ಗ ಸೂಚಿ ಅನ್ವಯ ಎರಡು ಎಕರೆ ಮೇಲ್ಪಟ್ಟು ಗರಿಷ್ಠ ಐದು ಎಕರೆ ಪ್ರದೇಶದವರೆಗೆ ಶೇ. 45 ರಷ್ಟು ಸಹಾಯಧನ ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಹಾಗೂ ಅರ್ಜಿ ಮತ್ತು ದಾಖಲಾತಿಗಳ ವಿವರಗಳಿಗಾಗಿ ಮೈಸೂರು ಜಿಲ್ಲಾ ಪಂಚಾಯತ್, ಮೈಸೂರು ತಾಲ್ಲೂಕು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ದೂ.ಸಂ: 0821-2430450, ಹೆಚ್.ಡಿ.ಕೋಟೆ ತಾಲ್ಲೂಕು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ದೂ.ಸಂ:08228-255261, ಹುಣಸೂರು ತಾಲ್ಲೂಕು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ದೂ.ಸಂ: 08222-252447, ಕೆ. ಆರ್ ನಗರ ತಾಲ್ಲೂಕು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ದೂ.ಸಂ: 08223-262791, ನಂಜನಗೂಡು ತಾಲ್ಲೂಕು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ದೂ.ಸಂ: 08221-226201, ಪಿರಿಯಾಪಟ್ಟಣ ತಾಲ್ಲೂಕು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ದೂ.ಸಂ: 08223-273535, ಟಿ. ನರಸೀಪುರ ತಾಲ್ಲೂಕು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ದೂ.ಸಂ: 08227-260086 ಅನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಪಂಚಾಯತ್‌ನ ತೋಟಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.