

ಬೆಂಗಳೂರು: ಬೆಂಗಳೂರು ನಗರ ವಿಶ್ವವಿದ್ಯಾಲಯವು ಸೆಂಟ್ರಲ್ ಕಾಲೇಜು ಕ್ಯಾಂಪಸ್ ಮತ್ತು ಮಲ್ಲೇಶ್ವರದ ಮಹಿಳಾ ಮಹಾವಿದ್ಯಾಲಯ ಕಾಲೇಜಿನಲ್ಲಿ ಲಭ್ಯವಿರುವ ವಿವಿಧ ಪದವಿ ಕೋರ್ಸುಗಳ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಿದೆ.
ಬಿಸಿಎ-ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಮತ್ತು ಮೆಷಿನ್ ಲರ್ನಿಂಗ್, ಡೇಟಾ ಸೈನ್ಸ್, ಬಿಎಸ್ಸಿ-ಗಣಕ ವಿಜ್ಞಾನ, ಗಣಿತ ಶಾಸ್ತ್ರ, ಸಂಖ್ಯಾಶಾಸ್ತ್ರ, ಫ್ಯಾಷನ್ ಅಂಡ್ ಅಪ್ಯಾರಲ್ ಡಿಸೈನ್, ಬಿಬಿಎ-ಬಿಜಿನೆಸ್ ಅನಾಲಿಟಿಕ್ಸ್, ಬಿ.ಕಾಂ-ಫೈನಾನ್ಸ್ ಮತ್ತು ಅಕೌಂಟಿಂಗ್, ಫೈನಾನ್‌ಷಿಯಲ್ ಟೆಕ್ನಾಲಜಿ, ಬಿಎ- ಆಂಗ್ಲ, ಫ್ರೆಂಚ್, ಇತಿಹಾಸ,ಅರ್ಥಶಾಸ್ತ್ರ, ಪತ್ರಿಕೋದ್ಯಮ(ಯಾವುದೇ ಮೂರು ವಿಷಯಗಳು) ಕೋರ್ಸುಗಳು ವಿವಿ ಕ್ಯಾಂಪಸ್‌ನಲ್ಲಿ ಲಭ್ಯವಿದೆ.
ಮಹಿಳಾ ಕಾಲೇಜಿನಲ್ಲಿ ಕನ್ನಡ, ಇಂಗ್ಲೀಷ್, ಫ್ರೆಂಚ್, ಜರ್ಮನ್, ಸಂಸ್ಕೃತ ಮತ್ತು ಹಿಂದಿ ಭಾಷಾ ವಿಷಯಗಳು, ಬಿಸಿಎ, ಬಿಬಿಎ, ಬಿ.ಕಾಂ ಸಾಮಾನ್ಯ, ವಿವಿಧ ಬಿಎಸ್ಸಿ, ಬಿಎ ಕೋರ್ಸುಗಳು ಪ್ರವೇಶಕ್ಕೆ ಲಭ್ಯವಿದೆ. ಆಸಕ್ತ ವಿದ್ಯಾರ್ಥಿಗಳು ವಿವಿಯ ವೆಬ್‌ಸೈಟ್ http://www.bcu.ac.in ಮೂಲಕ ಅಥವಾ ನೇರವಾಗಿ ಉನ್ನತ ಶಿಕ್ಷಣ ಇಲಾಖೆಯ https://uucms.karnataka.gov.in ಮೂಲಕ ನೋಂದಣಿ ಮಾಡಿ ಅರ್ಜಿ ಸಲ್ಲಿಸಬಹುದು ಎಂದು ವಿವಿ ಪ್ರಕಟಣೆ ತಿಳಿಸಿದೆ.