

ಕಿನ್ನಿಗೋಳಿ: ಯಕ್ಷಗಾನ ತಾಳಮದ್ದಳೆಯಿಂದ ಸಮಾಜದಲ್ಲಿ ಧಾರ್ಮಿಕ ಪ್ರಜ್ಞೆ, ಧರ್ಮ ಜಾಗೃತಿ ಮೂಡಿಸಲು ಸಾಧ್ಯ ಎಂದು ಕಸಾಪದ ಮಾಜಿ ರಾಜ್ಯಾಧ್ಯಕ್ಷ ಡಾ.ಧರ್ಮದರ್ಶಿ ಹರಿಕೃಷ್ಣ ಪುನರೂರು ಹೇಳಿದರು.
ಕಿನ್ನಿಗೋಳಿ ಯಕ್ಷಲಹರಿ, ಯುಗಪುರುಷ ಸಹಯೋಗದೊಂದಿಗೆ ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಮಕರ ಸಂಕ್ರಾತಿ ಪ್ರಯುಕ್ತ ನಡೆದ ತಾಳಮದ್ದಳೆ ಹಾಗೂ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಯಕ್ಷಲಹರಿ ವತಿಯಿಂದ ಯಕ್ಷಕವಿ ಅಂಡಾಲ ದೇವಿಪ್ರಸಾದ್ ಶೆಟ್ಟಿ ಅವರನ್ನು ಗೌರವಿಸಲಾಯಿತು. ಕಟೀಲು ದೇವಸ್ಥಾನದ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ ಆಶೀರ್ವಚನ ನೀಡಿದರು. ಮೂಲ್ಕಿ ಬಂಟರ ಸಂದ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ಉಪಾಧ್ಯಕ್ಷ ವಿನಯ ಆಚಾರ್ ಹೊಸಬೆಟ್ಟು, ಉಮೇಶ್ ನೀಲಾವರ, ವೇದವ್ಯಾಸ ರಾವ್ ಕುತ್ತೆತ್ತೂರು, ಶ್ರೀವತ್ಸ, ಸುಧಾಕರ, ಅಶ್ವಥ್ ರಾವ್, ಆಕಾಶ್ ರಾವ್ ಮತ್ತಿತರರಿದ್ದರು.
ಯುಗಪುರುಷದ ಭುವನಾಭಿರಾಮ ಉಡುಪ ಪ್ರಸ್ತಾವನೆಗೈದರು. ಯುಕ್ಷಲಹರಿ ಅಧ್ಯಕ್ಷ ರುನಾಥ ಕಾಮತ್ ಕೆಂಚನಕೆರೆ ಸ್ವಾಗತಿಸಿದರು. ಕಾರ್ಯದರ್ಶಿ ವಸಂತ ದೇವಾಡಿಗ ನಿರೂಪಿಸಿದರು. ಉಪಾಧ್ಯಕ್ಷ ಪಶುಪತಿ ಶಾಸ್ತ್ರಿ ವಂದಿಸಿದರು. ಕಾರ್ಯಕ್ರಮದ ಅಂಗವಾಗಿ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ‘ವಿಶ್ವಾಮಿತ್ರ-ಮೇನಕಾ - ಅಂಗದ ಸಂಧಾನ’ ತಾಳಮದ್ದಳೆ ನಡೆಯಿತು.