

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ
ಪಲಿವಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅವರಾಲುನಲ್ಲಿ ಪ್ರಾರ್ಥನಾ ಮಂದಿರ ನಿರ್ಮಿಸಲು ಸಾರ್ವಜನಿಕರ ವಿರೋಧವಿದ್ದರೂ ಗ್ರಾಮ ಪಂಚಾಯಿತಿ ಪರವಾನಗಿ ನೀಡಿರುವುದನ್ನು ಮರು ಪರಿಶೀಲಿಸುವಂತೆ ಅಲ್ಲಿನ ಗ್ರಾಮಸ್ಥರು ಹಿಂದು ಸಂಟನೆಗಳೊಂದಿಗೆ ಮಂಗಳವಾರ ಪಿಡಿಒಗೆ ಮನವಿ ಸಲ್ಲಿಸಿದರು.
ಈಗ ನಿರ್ಮಿಸಲು ಉದ್ದೇಶಿಸಿರುವ ಪ್ರಾರ್ಥನಾ ಮಂದಿರದಿಂದ 250 ಮೀಟರ್ ದೂರದಲ್ಲಿ ಬಬ್ಬುಸ್ವಾಮಿ ದೈವಸ್ಥಾನ ಇದ್ದು, ಇಲ್ಲಿ ತಂಬಿಲ, ಕೋಲ, ಸಂಕ್ರಮಣ ಪೂಜೆ ಇತ್ಯಾದಿ ಧಾರ್ಮಿಕ ಕಾರ್ಯಕ್ರಮ ನಡೆಯುತ್ತದೆ. ಸಮೀಪದಲ್ಲೇ ಇನ್ನೊಂದು ಧರ್ಮದ ಪ್ರಾರ್ಥನಾ ಮಂದಿರ ನಿರ್ವಾಣಗೊಂಡರೆ ಕ್ಷೇತ್ರದ ಧಾರ್ಮಿಕ ಆಚರಣೆಗಳಿಗೆ ಅಡ್ಡಿಯಾಗಲಿದೆ ಎಂದು ಸ್ಥಳೀಯರು ದೂರಿದ್ದಾರೆ.
2021ರಿಂದಲೂ ಅಲ್ಲಿ ಪ್ರಾರ್ಥನಾ ಮಂದಿರ ನಿರ್ವಾಣಕ್ಕೆ ಅವಕಾಶ ನೀಡದಂತೆ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿ ಗ್ರಾಪಂಗೆ 3 ಬಾರಿ ಹಾಗೂ ಜಿಲ್ಲಾಧಿಕಾರಿಗೆ ಒಂದು ಬಾರಿ ಮನವಿ ಸಲ್ಲಿಸಿದ್ದರು. ಇದೀಗ ಗ್ರಾಪಂ ಏಕಾಏಕಿ ಪರವಾನಗಿ ನೀಡಿರುವುದು ಹಿಂದು ಸಂಟನೆ ಹಾಗೂ ಗ್ರಾಮಸ್ಥರ ಕೆಂಗಣ್ಣಿಗೆ ಗುರಿಯಾಗಿದೆ. ಪರವಾನಗಿ ಮರುಪರಿಶೀಲಿಸಿ ಸವಾಜದ ಸ್ವಸ್ಥ್ಯ ಕಾಪಾಡುವಂತೆ ಸಂಟನೆಗಳು ಪಿಡಿಒ ಅವರನ್ನು ಒತ್ತಾಯಿಸಿದರು.
ಪಿಡಿಒ ಶಶಿಧರ್ ಪ್ರತಿಕ್ರಿಯಿಸಿ ಗ್ರಾಮಸ್ಥರ ವಿರೋಧ ಪರಿಗಣಿಸಿ ಪರವಾನಗಿ ನೀಡಿರುವುದನ್ನು ಸಾವಾನ್ಯ ಸಭೆಯಲ್ಲಿ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದರು.