ರಸ್ತೆ ಸಮಸ್ಯೆಗೆ ಸ್ಪಂದಿಸಲು ಮನವಿ

jnd june1 raste
Published on

ಜನ್ನಾಡಿ: ಕಳೆದ ಮಳೆಗಾಲದ ಅವಧಿಯಲ್ಲಿ ಹಾರ್ದಳ್ಳಿ-ಮಂಡಳ್ಳಿ ಗ್ರಾಪಂ ವ್ಯಾಪ್ತಿಯ ಜನ್ನಾಡಿಯ ರಾಜ್ಯ ಹೆದ್ದಾರಿಯ ಮೋರಿಯಲ್ಲಿ ನೀರು ಸರಾಗವಾಗಿ ಹರಿದು ಹೋಗದೆ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು. ಇದರ ಪರಿಣಾಮ ರಸ್ತೆಯನ್ನು ಎತ್ತರಿಸಿ ನೂತನ ಮೋರಿ ನಿರ್ಮಿಸುವಂತೆ ಸರ್ಕಾರ ಇಲಾಖೆಗೆ ಸೂಚಿಸಿತ್ತು.

ಈಗ ನಿರ್ಮಾಣಗೊಂಡ ರಸ್ತೆಯ ಪನ್ನಗ ಮೋಟಾರ್ಸ್‌ ಎದುರು ಸರ್ಕಾರಿ ಹಳೇ ಬಾವಿ ಇದ್ದು, ರಸ್ತೆ ಎತ್ತರ ಹೆಚ್ಚಿಸಿದ್ದರಿಂದ ಬಾವಿಯು ರಸ್ತೆಯಿಂದ ಕೆಲವೇ ಅಡಿ ದೂರದಲ್ಲಿ 3 ಅಡಿಗಿಂತಲೂ ತಗ್ಗಿಗೆ ಸರಿದ ಕಾರಣ ಯಾವುದೇ ಆವರಣ ಇಲ್ಲದಿರುವುದರಿಂದ ಸಂಚಾರದ ವೇಗಕ್ಕೆ ನಿಯಂತ್ರಣ ತಪ್ಪಿದಲ್ಲಿ ಬಾವಿಯಲ್ಲಿ ನೇರವಾಗಿ ಬೀಳುವುದು ಖಚಿತ. ಈ ಬಗ್ಗೆ ಮುಂಜಾಗ್ರತಾ ಕ್ರಮ ಕೈಗೊಳ್ಳುವುದು ಸೂಕ್ತ ಎಂಬುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

ಇಲ್ಲಿಯೇ ಸಮೀಪದ ಪಂಚಾಯಿತಿ ವ್ಯಾಪ್ತಿಯ ನಂದ್ಯಾಡಿ ರಸ್ತೆಗೆ ಮಣ್ಣು ಸುರಿದ ಪರಿಣಾಮ ಮಳೆಯಿಂದಾಗಿ ವಾಹನ ಸಂಚಾರಕ್ಕೆ ಸಮಸ್ಯೆ ಎದುರಾಗಿದೆ. ಹಿರಿಯ ನಾಗರಿಕರು ಆರೋಗ್ಯ ತಪಾಸಣೆಗೆ ಹೋಗಲು ಪರದಾಡುತ್ತಿದ್ದು ಪಂಚಾಯಿತಿ, ಇಲಾಖೆ ಗಮನ ಹರಿಸುವಂತೆ ಕೋರಿದ್ದಾರೆ.

ಹೊಸ ರಸ್ತೆಯ ಒಂದು ಭಾಗದಲ್ಲಿ ಚರಂಡಿ ವ್ಯವಸ್ಥೆ ಸರಿಯಾಗಿಲ್ಲದೆ ಮಳೆ ನೀರು ರಸ್ತೆ ಮೇಲೆ ಹರಿಯುತ್ತಿದೆ. ಮತ್ತೊಂದು ಭಾಗದಲ್ಲಿ ನೀರು ಸರಿಯಾಗಿ ಹೋಗದೆ ಮಣ್ಣು ಶೇಖರಣೆಯಾಗುತ್ತಿದೆ. ಇಲಾಖೆ ಮೇಲಿನ ಎಲ್ಲ ಸಮಸ್ಯೆಗೆ ತುರ್ತಾಗಿ ಸ್ಪಂದಿಸಬೇಕಿದೆ.

ವಾರಾಹಿ ಸಬ್ ಕಾಲುವೆ ತಿರುವಿನ ಪಂಚಾಯಿತಿ ವ್ಯಾಪ್ತಿಯ ನಂದ್ಯಾಡಿ ರಸ್ತೆಗೆ ಮಣ್ಣು ಸುರಿದ ಪರಿಣಾಮ ಯಾವುದೇ ವಾಹನ ಒಳಗೆ ಬಾರದ ಪರಿಸ್ಥಿತಿ ನಿರ್ಮಾಣವಾಗಿದೆ. ಅನಾರೋಗ್ಯದಿಂದ ವೈದ್ಯರಲ್ಲಿಗೆ ಹೋಗಲಾಗದೆ ಪರದಾಡುತ್ತಿದ್ದೇವೆ. ಶಿವಾನಂದ ಶಾಸ್ತ್ರಿ, ಹಿರಿಯ ನಾಗರಿಕರು ನಂದ್ಯಾಡಿ-ಜನ್ನಾಡಿ https://www.vijayavani.net/bagarhukum-committee-meeting-in-kundapur https://www.vijayavani.net/a-stress-free-living-environment-is-necessary

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net