ಆವರಣಗೋಡೆ ಕಾಮಗಾರಿ ತಡೆಗೆ ಪಿಡಿಒಗೆ ಮನವಿ

gan-3
Published on

ಗಂಗೊಳ್ಳಿ: ಗುಜ್ಜಾಡಿ ಗ್ರಾಮದ ಕಂಚುಗೋಡು ಸನ್ಯಾಸಿಬಲೆ ಎಂಬಲ್ಲಿ ಸಮುದ್ರ ಕಿನಾರೆಗೆ ಹೊಂದಿಕೊಂಡ ಖಾಸಗಿ ಮಾಲೀಕತ್ವದ ಜಾಗದಲ್ಲಿ ಆವರಣಗೋಡೆ ಕಾಮಗಾರಿ ನಡೆಯುತ್ತಿದ್ದು, ಈ ಜಾಗಕ್ಕೆ ಹೊಂದಿಕೊಂಡು ಸರ್ಕಾರಿ ಜಾಗವಿರುವುದರಿಂದ ಸರ್ಕಾರಿ ಜಾಗದ ಗಡಿ ಗುರುತು ಆಗುವ ತನಕ ಆವರಣಗೋಡೆ ಕಾಮಗಾರಿ ತಡೆ ಹಿಡಿಯಬೇಕೆಂದು ಕಂಚುಗೋಡು ಸನ್ಯಾಸಿಬಲೆ ಸಾರ್ವಜನಿಕರು ಗುಜ್ಜಾಡಿ ಗ್ರಾಪಂ ಪಿಡಿಒಗೆ ಮನವಿ ಸಲ್ಲಿಸಿದರು.

ಸ್ಥಳೀಯರಾದ ಹರೀಶ ಕೊಡ್ಪಾಡಿ, ಮಂಜುನಾಥ, ಗುಜ್ಜಾಡಿ ಗ್ರಾಪಂ ಸದಸ್ಯರಾದ ಜನಾರ್ದನ ಪೂಜಾರಿ, ಶೇಖರ ದೇವಾಡಿಗ, ಗ್ರಾಪಂ ಮಾಜಿ ಸದಸ್ಯರಾದ ವಿ.ಕೆ.ಸುರೇಶ ಖಾರ್ವಿ, ದೇವದಾಸ ನಾಯಕವಾಡಿ, ಜಿ.ಪುರುಷೋತ್ತಮ ಆರ್ಕಾಟಿ, ತಾಪಂ ಮಾಜಿ ಸದಸ್ಯ ಸುರೇಂದ್ರ ಖಾರ್ವಿ, ಗಂಗೊಳ್ಳಿ ಗ್ರಾಪಂ ಸದಸ್ಯ ಗುರು ಖಾರ್ವಿ, ಸತೀಶ ಆರ್ಕಾಟಿ, ಶಂಕರ ಖಾರ್ವಿ, ಕೃಷ್ಣ ಪಟೇಲ್, ನಾಗೇಶ ಪಟೇಲ್, ಹರೀಶ ಖಾರ್ವಿ, ರವಿ ಖಾರ್ವಿ, ಸತೀಶ್ ಪಟೇಲ್, ವಿನೋದ ಪಿ., ದಾಮು ಶರತ್, ನಿತಿನ್ ಖಾರ್ವಿ, ಸಂದೀಪ ಖಾರ್ವಿ ಮೊದಲಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net