ಬಜತ್ತೂರು ಸರ್ಕಾರಿ ಶಾಲೆ ಮೇಲ್ದರ್ಜೆಗೆ ಮನವಿ

New Project (1)
Published on

ಉಪ್ಪಿನಂಗಡಿ: ಬಜತ್ತೂರು ಸರ್ಕಾರಿ ಹಿ.ಪ್ರಾ.ಶಾಲೆಯನ್ನು ಕೆಪಿಎಸ್ ಸ್ಕೂಲ್ ಆಗಿ ಪರಿವರ್ತನೆಗೊಳಿಸುವಂತೆ ಬಜತ್ತೂರು ಗ್ರಾಮಸ್ಥರು ಶಾಸಕ ಅಶೋಕ್ ರೈ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.

ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಯು.ಟಿ.ತೌಸೀಫ್, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಮುರಳೀಧರ್ ರೈ ಮಠಂತಬೆಟ್ಟು, ಬ್ಲಾಕ್ ನಿಕಟಪೂರ್ವ ಅಧ್ಯಕ್ಷ ಡಾ.ರಾಜಾರಾಂ ಕೆ.ಬಿ., ಕೆಪಿಸಿಸಿ ಅಲ್ಪಸಂಖ್ಯಾತ ಕಾರ್ಯದರ್ಶಿ ನಝೀರ್ ಮಠ, ಉಪ್ಪಿನಂಗಡಿ ಬ್ಲಾಕ್ ಕಾರ್ಯಾಧ್ಯಕ್ಷ ವಿಕ್ರಂ ರೈ ಕೋಡಿಂಬಾಡಿ, ಬಜತ್ತೂರು ವಲಯ ಕಾಂಗ್ರೆಸ್ ಅಧ್ಯಕ್ಷ ವಿನೋದ್, ಶೇಖರ ಪೂಜಾರಿ ಶಿಬರ್ಲ, ಗೋಪಾಲ ದಡ್ಡು, ಅನಿತಾ ವಳಾಲು, ದೀಪಿಕಾ ಬೆದ್ರೋಡಿ, ವಾಸುದೇವ ವಳಾಲು, ಕೇಶವ ಬೆದ್ರೋಡಿ, ಪುತ್ತುಮೋನು, ಅನಿಲ್ ಪಿಂಟೋ ಬೆದ್ರೋಡಿ, ಸೈನಿ ಪಿಂಟೋ ಬೆದ್ರೋಡಿ, ಮಹೇಂದ್ರ ವರ್ಮ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net