ಲಸಿಕೆಯಿಂದ ಪ್ರಾಣರಕ್ಷಣೆ : ಅಪೋಲೋ ಜೆಎಂಡಿ ಡಾ. ಸಂಗೀತ ರೆಡ್ಡಿ

sangita
Published on

ನವದೆಹಲಿ : ಭಾರತದಲ್ಲಿ 269 ವೈದ್ಯರು ಕರೊನಾ ಎರಡನೇ ಅಲೆಯ ಸಂದರ್ಭದಲ್ಲಿ ಸಾವಪ್ಪಿದ್ದಾರೆ ಎಂದು ನಿನ್ನೆ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್​(ಐಎಂಎ) ಹೇಳಿತ್ತು. ಅತ್ಯಧಿಕ ಸಂಖ್ಯೆಯಲ್ಲಿ, 78 ವೈದ್ಯರ ಸಾವು ಸಂಭವಿಸಿರುವುದು ಬಿಹಾರದಲ್ಲಾದರೆ, ಉತ್ತರ ಪ್ರದೇಶದಲ್ಲಿ 37 ಮತ್ತು ದೆಹಲಿಯಲ್ಲಿ 29 ವೈದ್ಯರು ಕರೊನಾಗೆ ಬಲಿಯಾಗಿದ್ದಾರೆ ಎಂದು ಐಎಂಎ ತಿಳಿಸಿತ್ತು.

ಇದಕ್ಕೆ ಪ್ರತಿಕ್ರಿಯಿಸಿರುವ ಅಪೋಲೋ ಹಾಸ್ಪಿಟಲ್ಸ್​ ಗುಂಪಿನ ಜಂಟಿ ಕಾರ್ಯನಿರ್ವಾಹಕ ನಿರ್ದೇಶಕಿ (ಜೆಎಂಡಿ) ಡಾ. ಸಂಗೀತಾ ರೆಡ್ಡಿ ಅವರು, ವೈದ್ಯರು, ದಾದಿಯರು ಮತ್ತು ಇತರ ಆರೋಗ್ಯ ಕಾರ್ಯಕರ್ತರು ಕರೊನಾ ಲಸಿಕೆ ಪಡೆಯುವ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದ್ದಾರೆ.

ದೆಹಲಿಯ ಅಪೋಲೋ ಆಸ್ಪತ್ರೆಗಳಲ್ಲಿ ಎರಡೂ ಡೋಸ್​ ಕರೊನಾ ಲಸಿಕೆ ಪಡೆದ 3,600 ವೈದ್ಯರು, ನರ್ಸ್​ಗಳು ಮತ್ತು ಆರೋಗ್ಯ ಸೇವಾಕರ್ತರಲ್ಲಿ ಕೇವಲ ಶೇ 2.6 ರಷ್ಟು ಮಂದಿಗೆ ಕರೊನಾ ಸೋಂಕು ತಗುಲಿತು. ಅವರೆಲ್ಲರಿಗೂ ಮೆದು ರೋಗಲಕ್ಷಣಗಳು ಕಾಣಿಸಿಕೊಂಡಿದ್ದು, ಒಂದೂ ಸಾವು ಸಂಭವಿಸಿಲ್ಲ ಎಂದು ಡಾ. ರೆಡ್ಡಿ ತಿಳಿಸಿದ್ದಾರೆ. ಲಸಿಕೆ ಪಡೆಯುವುದು ಮತ್ತು ಸುರಕ್ಷತೆಯ ಪ್ರೊಟೋಕಾಲ್​ಗಳನ್ನು ಪಾಲಿಸುವುದು ಪ್ರಾಣಗಳನ್ನು ಉಳಿಸುತ್ತದೆ ಎಂದಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net