More

    ಎರಡು ಹಂತಗಳಲ್ಲಿ ರಣಜಿ; ಐಪಿಎಲ್‌ಗೆ ಮುನ್ನ ಲೀಗ್, ನಂತರ ನಾಕೌಟ್?

    ಮುಂಬೈ: ಕರೊನಾ ಹಾವಳಿಯಿಂದಾಗಿ ಈ ಬಾರಿ ದೇಶೀಯ ಕ್ರಿಕೆಟ್ ಋತು ವಿಳಂಬವಾಗಿ ಆರಂಭಗೊಂಡಿರುವ ನಡುವೆಯೂ ಪ್ರತಿಷ್ಠಿತ ರಣಜಿ ಟ್ರೋಫಿಯನ್ನು ಆಡಿಸಲು ಪಣ ತೊಟ್ಟಿರುವ ಬಿಸಿಸಿಐ, ಮುಂದಿನ ತಿಂಗಳಿನಿಂದ 2 ಹಂತಗಳಲ್ಲಿ ಟೂರ್ನಿ ಆಯೋಜಿಸಲು ಚಿಂತನೆ ನಡೆಸಿದೆ. ಜನವರಿ 17ರಂದು ವರ್ಚುವಲ್ ಮೂಲಕ ನಡೆಯಲಿರುವ ಬಿಸಿಸಿಐ ಅಪೆಕ್ಸ್ ಕೌನ್ಸಿಲ್ ಸಭೆಯಲ್ಲಿ ಈ ಬಗ್ಗೆ ಮಹತ್ವದ ನಿರ್ಧಾರ ತೆಗೆದುಕೊಳ್ಳುವ ನಿರೀಕ್ಷೆ ಇದೆ.

    ಹಾಲಿ ನಡೆಯುತ್ತಿರುವ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯ ಬಯೋ-ಬಬಲ್ ಮಾದರಿಯಲ್ಲೇ ರಣಜಿ ಟ್ರೋಫಿಯನ್ನೂ ಆಯೋಜಿಸಲು ಬಿಸಿಸಿಐ ಯೋಜನೆ ರೂಪಿಸಿದೆ. ಏಪ್ರಿಲ್-ಮೇನಲ್ಲಿ ನಡೆಯಲಿರುವ 14ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಮುನ್ನ ಫೆಬ್ರವರಿ-ಮಾರ್ಚ್‌ನಲ್ಲಿ 2 ತಿಂಗಳ ಕಾಲ ರಣಜಿ ಟ್ರೋಫಿ ಲೀಗ್ ಪಂದ್ಯಗಳನ್ನು ಆಯೋಜಿಸಿದರೆ, ಐಪಿಎಲ್ ಬಳಿಕ ನಾಕೌಟ್ ಪಂದ್ಯಗಳನ್ನು ನಡೆಸುವುದು ಬಿಸಿಸಿಐ ಯೋಜನೆಯಾಗಿದೆ. ಈ ಮೂಲಕ 1934ರಿಂದ ಪ್ರತಿವರ್ಷವೂ ನಡೆಯುತ್ತ ಬಂದಿರುವ ರಣಜಿ ಟ್ರೋಫಿ ಈ ವರ್ಷವೂ ರದ್ದಾಗದಂತೆ ನೋಡಿಕೊಳ್ಳುವುದು ಗುರಿಯಾಗಿದೆ.

    ಇದನ್ನೂ ಓದಿ: ಬ್ರಿಸ್ಬೇನ್ ಟೆಸ್ಟ್‌ಗೆ ಮಳೆ ಭೀತಿ, ಸರಣಿ ಡ್ರಾಗೊಂಡರೆ ಭಾರತಕ್ಕೆ ಟ್ರೋಫಿ! 

    ರಣಜಿ ಟ್ರೋಫಿ ಫೆಬ್ರವರಿಯಲ್ಲೇ ಆರಂಭಗೊಳ್ಳುವ ಸಾಧ್ಯತೆ ಶೇ. 90ರಷ್ಟಿದೆ. ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯ ಗುಂಪುಗಳ ಮಾದರಿಯಲ್ಲೇ ಪಂದ್ಯಗಳು ನಡೆಯಲಿವೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

    7 ಅಜೆಂಡಾಗಳ ಬಿಸಿಸಿಐ ಸಭೆ
    ಭಾನುವಾರದ ಬಿಸಿಸಿಐ ಅಪೆಕ್ಸ್ ಕೌನ್ಸಿಲ್ ಸಭೆ ರಣಜಿ ಟ್ರೋಫಿ ಆಯೋಜನೆ ಜತೆಗೆ ಒಟ್ಟು 7 ಅಜೆಂಡಾಗಳನ್ನು ಹೊಂದಿದೆ. 2023-31ರ ಐಸಿಸಿ ಎಫ್​ಟಿಪಿ ವೇಳಾಪಟ್ಟಿ ಬಗ್ಗೆ ಚರ್ಚೆ ನಡೆಯಲಿದ್ದು, 2022ರಲ್ಲಿ ತಂಡಗಳ ಸಂಖ್ಯೆ 10ಕ್ಕೆ ಏರಲಿರುವುದರಿಂದ ಐಪಿಎಲ್‌ಗೆ ಹೆಚ್ಚಿನ ಅವಧಿಯನ್ನು ಕೇಳುವ ನಿರೀಕ್ಷೆ ಇದೆ. ಟಿ20 ವಿಶ್ವಕಪ್‌ನ ತೆರಿಗೆ ವಿನಾಯಿತಿ ಬಗ್ಗೆಯೂ ಮತ್ತೊಮ್ಮೆ ಚರ್ಚೆ ನಡೆಯಲಿದೆ. ಬೆಂಗಳೂರಿನಲ್ಲಿ ನಿರ್ಮಾಣ ಹಂತದಲ್ಲಿರುವ ಹೊಸ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಕಟ್ಟಡದ ಬಗ್ಗೆಯೂ ಚರ್ಚೆ ನಡೆಯಲಿದೆ.

    ಕೇಂದ್ರ ಸಚಿವರ ಕ್ರಿಕೆಟ್ ಅಜ್ಞಾನಕ್ಕೆ ಎರಡೇ ಪದಗಳಲ್ಲಿ ಟಾಂಗ್ ಕೊಟ್ಟ ಹನುಮ ವಿಹಾರಿ!

    ಮದುವೆಯಿಂದ ಮಗುವಿನ ಜನನದವರೆಗೆ ವಿರಾಟ್ ಕೊಹ್ಲಿ ಬಾಳಿನಲ್ಲಿದೆ 11ರ ನಂಟು!

    ಬ್ರಿಸ್ಬೇನ್‌ನಲ್ಲಿ ಟೆಸ್ಟ್​ನಲ್ಲಿ ನೆಟ್ ಬೌಲರ್ ವಾಷಿಂಗ್ಟನ್ ಸುಂದರ್ ಕಣಕ್ಕೆ?

    ಮಗುವಿನ ಫೋಟೋ ತೆಗೆಯದಂತೆ ವಿರುಷ್ಕಾ ದಂಪತಿ ಮನವಿ ಮಾಡಿದ್ಯಾಕೆ..?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts