More

    ಕೇಂದ್ರ ಸಚಿವರ ಕ್ರಿಕೆಟ್ ಅಜ್ಞಾನಕ್ಕೆ ಎರಡೇ ಪದಗಳಲ್ಲಿ ಟಾಂಗ್ ಕೊಟ್ಟ ಹನುಮ ವಿಹಾರಿ!

    ನವದೆಹಲಿ: ಆಸ್ಟ್ರೇಲಿಯಾ ವಿರುದ್ಧದ ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಹನುಮ ವಿಹಾರಿ ಸ್ಪಿನ್ನರ್ ಆರ್. ಅಶ್ವಿನ್ ಜತೆಗೂಡಿ ತಾಳ್ಮೆಯ ಬ್ಯಾಟಿಂಗ್ ಪ್ರದರ್ಶನ ನೀಡುವ ಮೂಲಕ ಭಾರತ ತಂಡಕ್ಕೆ ಐತಿಹಾಸಿಕ ಡ್ರಾ ಸಾಧನೆ ಮಾಡಲು ನೆರವಾಗಿದ್ದರು. ಇದರ ಬೆನ್ನಲ್ಲೇ ಹನುಮ ವಿಹಾರಿ ಅವರ ಆಟಕ್ಕೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗಿತ್ತು. ಆದರೆ ಒಬ್ಬ ವ್ಯಕ್ತಿ ಮಾತ್ರ ಹನುಮ ವಿಹಾರಿ ಆಟವನ್ನು ಕಟುವಾಗಿ ಟೀಕಿಸಿದ್ದರು! ಅವರೇ ಕೇಂದ್ರ ಸಚಿವ ಬಾಬುಲ್ ಸುಪ್ರಿಯೋ. ಇದಕ್ಕೆ ಈಗ ಹನುಮ ವಿಹಾರಿ ಅವರು ಸಾಮಾಜಿಕ ಜಾಲತಾಣದಲ್ಲಿ ಕೇವಲ ಎರಡೇ ಪದಗಳಲ್ಲಿ ಟಾಂಗ್ ನೀಡುವ ಮೂಲಕ ಮತ್ತೊಮ್ಮೆ ಕ್ರಿಕೆಟ್ ಪ್ರೇಮಿಗಳ ಮನಗೆದ್ದಿದ್ದಾರೆ.

    ‘109 ಎಸೆತಗಳನ್ನು ಎದುರಿಸಿ ಕೇವಲ 7 ರನ್! ಈ ಮೂಲಕ ಹನುಮ ಬಿಹಾರಿ ಭಾರತದ ಗೆಲುವಿನ ಸಾಧ್ಯತೆಯನ್ನು ಕೊಲ್ಲುತ್ತಿರುವುದು ಮಾತ್ರವಲ್ಲದೆ, ಕ್ರಿಕೆಟ್ ಅನ್ನೂ ಕೊಲೆ ಮಾಡುತ್ತಿದ್ದಾರೆ ಎಂದು ಹೇಳಬೇಕಾಗುತ್ತದೆ. ಗೆಲುವಿನ ಅವಕಾಶ ತೆರೆದಿಡದಿರುವುದು ಕ್ರಿಮಿನಲ್ ಅಪರಾಧ’ ಎಂದು ಪಶ್ಚಿಮ ಬಂಗಾಳದ ಬಿಜೆಪಿ ಸಂಸದ ಬಾಬುಲ್ ಸುಪ್ರಿಯೊ ಸೋಮವಾರ ಸಿಡ್ನಿ ಟೆಸ್ಟ್ ಪಂದ್ಯದ ಅಂತಿಮ ದಿನದಾಟ ನಡೆಯುತ್ತಿದ್ದ ವೇಳೆ ಟ್ವೀಟಿಸಿದ್ದರು. ಜತೆಗೆ ವಿಶೇಷ ಸೂಚನೆ ರೂಪದಲ್ಲಿ, ‘ನನಗೆ ಕ್ರಿಕೆಟ್ ಬಗ್ಗೆ ಏನೂ ಗೊತ್ತಿಲ್ಲ ಎಂಬುದು ನನಗೆ ತಿಳಿದಿದೆ’ ಎಂದು ಬರೆದುಕೊಂಡಿದ್ದರು.

    ಇದನ್ನೂ ಓದಿ: ಐಪಿಎಲ್ ಹರಾಜಿಗೆ ಮುನ್ನ ಆರ್‌ಸಿಬಿ ತಂಡದಿಂದ ಯಾರು ಔಟ್, ಯಾರು ಸೇಫ್​?

    ಟೆಸ್ಟ್ ಕ್ರಿಕೆಟ್‌ನಲ್ಲಿ ತಾಳೆಯ ಆಟಕ್ಕೆ ಇರುವ ಮಹತ್ವ ಅರಿಯದ ಮತ್ತು ಟಿ20 ಕ್ರಿಕೆಟ್ ಕಾಲದಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲೂ ಸ್ಟ್ರೈಕ್‌ರೇಟ್ ಬಯಸುವ ಕ್ರಿಕೆಟ್ ಅಜ್ಞಾನದಿಂದಾಗಿ ಬಾಬುಲ್ ಸುಪ್ರಿಯೊ ಸೋಮವಾರ ಮತ್ತು ಮಂಗಳವಾರ ಕ್ರಿಕೆಟ್ ಪ್ರೇಮಿಗಳಿಂದ ಭಾರಿ ಟೀಕೆಗೆ ಗುರಿಯಾಗಿದ್ದರು. ಇದರ ಬೆನ್ನಲ್ಲೇ ಬುಧವಾರ, ಹನುಮ ವಿಹಾರಿ ಕೂಡ ಸುಪ್ರಿಯೊ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿದ್ದು, ‘*ಹನುಮ ವಿಹಾರಿ’ ಎಂದು ಪ್ರತಿಟ್ವೀಟ್ ಮಾಡಿದ್ದಾರೆ. ಈ ಮೂಲಕ ಸುಪ್ರಿಯೊ ತಮ್ಮ ಟ್ವೀಟ್‌ನಲ್ಲಿ ಹನುಮ ಬಿಹಾರಿ ಎಂದು ತಪ್ಪಾಗಿ ತಮ್ಮ ಹೆಸರು ಬರೆದಿದ್ದನ್ನು ತಿದ್ದಿದ್ದರು. ಅವರ ಈ ಚುಟುಕು ಪ್ರತಿಕ್ರಿಯೆಯ ಟಾಂಗ್ ಟ್ವಿಟರ್‌ನಲ್ಲಿ ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ ಗಳಿಸಿದ್ದು, ಅವರದೇ ಹೆಸರಿನ ಎರಡೇ ಪದಗಳ ಈ ಟ್ವೀಟ್​ ಭಾರಿ ವೈರಲ್​ ಆಗಿದೆ. ಇದು ಈ ದಶಕದ ಟ್ವೀಟ್ ಎಂದೂ ಬಣ್ಣಿಸಲಾಗುತ್ತಿದೆ. ಇನ್ನು ಕೆಲವರು ಹನುಮ ವಿಹಾರಿ ಆಟಕ್ಕಿಂತ ಅವರ ಈ ಟ್ವೀಟ್ ಬಳಿಕ ನಾವು ಅವರ ಅಭಿಮಾನಿಗಳಾಗಿದ್ದೇವೆ ಎಂದು ಹೇಳಿಕೊಂಡಿದ್ದಾರೆ.

    ಸಿಡ್ನಿ ಟೆಸ್ಟ್ ಉಳಿಸುವಲ್ಲಿ ಹನುಮ ವಿಹಾರಿಗೆ ಸಾಥ್ ನೀಡಿದ್ದ ಆರ್. ಅಶ್ವಿನ್ ಕೂಡ ವಿಹಾರಿ ಟ್ವೀಟ್‌ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ‘ಆರ್‌ಒಎಫ್​ಎಲ್ ಮ್ಯಾಕ್!!’ ಎಂದು ಪ್ರತಿಕ್ರಿಯಿಸಿದ್ದಾರೆ. ‘ನಗೆಯನ್ನು ತಡೆಯಾಗದೆ ನೆಲದ ಮೇಲೆ ಉರುಳಾಡಿದೆ’ ಎಂಬುದು ಅವರ ಟ್ವೀಟ್‌ನ ಭಾವಾರ್ಥವಾಗಿದೆ. ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಕೂಡ ಹನುಮ ವಿಹಾರಿ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿದ್ದು, ‘ಅಪ್ನಾ ವಿಹಾರಿ, ಸಬ್ ಪರ್ ಭಾರಿ’ ಎಂದು ಬರೆದು, ಬಾಬುಲ್ ಸುಪ್ರಿಯೊ-ಹನುಮ ವಿಹಾರಿ ಟ್ವೀಟ್‌ಗಳ ಸ್ಕ್ರೀನ್‌ಶಾಟ್ ಪ್ರಕಟಿಸಿದ್ದಾರೆ.

    ಈ ನಡುವೆ ಬಾಬುಲ್ ಸುಪ್ರಿಯೊ ಅವರ ಕ್ರಿಕೆಟ್ ಅಜ್ಞಾನ ನಿಜವಾಗಿದ್ದರೂ, ಅವರ ಅಕ್ಷರ ಬಳಕೆಯಲ್ಲಿ ಯಾವುದೇ ತಪ್ಪಿಲ್ಲ ಎನ್ನಲಾಗುತ್ತಿದೆ. ಯಾಕೆಂದರೆ ಅವರು ಬಂಗಾಳಿಯಾಗಿದ್ದು, ಬಂಗಾಳಿಗಳು ‘ವ’ ಅಕ್ಷರವನ್ನು ‘ಬ’ ಎಂದೇ ಪ್ರಯೋಗಿಸುತ್ತಾರೆ. ಹೀಗಾಗಿ ‘ಪ್ರಣಬ್’, ‘ಬಿವೇಕಾನಂದ’ ಹೆಸರುಗಳಂತೆ ವಿಹಾರಿಯನ್ನು ‘ಬಿಹಾರಿ’ ಎಂದು ಬರೆದಿದ್ದಾರೆ ಎಂದು ಸಮರ್ಥಿಸಲಾಗಿದೆ.

    ಬ್ರಿಸ್ಬೇನ್ ಟೆಸ್ಟ್‌ಗೆ ಮಳೆ ಭೀತಿ, ಸರಣಿ ಡ್ರಾಗೊಂಡರೆ ಭಾರತಕ್ಕೆ ಟ್ರೋಫಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts