‘ಅನ್ವಿತಾ’ ಚಲನಚಿತ್ರದ ಪೋಸ್ಟರ್ ಬಿಡುಗಡೆ

15Jaggu5
ಉತ್ತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಡಾ. ಶಂಕರರಾವ್ ಸುಗತೆ ಅವರು ‘ಅನ್ವಿತಾ’ ಚಲನಚಿತ್ರದ ಪೋಸ್ಟರ್ ಬಿಡುಗಡೆಗೊಳಿಸಿದರು. ನಿರ್ದೇಶಕ ಸಂತೋಷ ಸುತಾರ, ವಕೀಲೆ ಅಶ್ವಿನಿ ಜ್ಯೋತಿಬಾ, ಸ್ವಾತಿ ಸುತಾರ ಇತರರಿದ್ದಾರೆ.
Published on

ಬೆಳಗಾವಿ: ಬೆಳಗಾವಿಯ ಚಲನಚಿತ್ರ ನಿರ್ಮಾಣ ಸಂಸ್ಥೆ ಅಸ್ಮಿತಾ ಕ್ರಿಯೇಷನ್ಸ್‌ನಿಂದ ನಿರ್ಮಾಣವಾಗುತ್ತಿರುವ ಕನ್ನಡ, ಮರಾಠಿ ಭಾಷೆಯ ‘ಅನ್ವಿತಾ’ ಚಲನಚಿತ್ರದ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ನಗರದ ಖಾಸಗಿ ಹೋಟೆಲ್ಭಾನುವಾರ ಜರುಗಿತು. ಉತ್ತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಡಾ. ಶಂಕರರಾವ್ ಸುಗತೆ ಪೋಸ್ಟರ್ ಬಿಡುಗಡೆ ಮಾಡಿದರು.

ಡಾ. ಶಂಕರರಾವ್ ಸುಗತೆ ಮಾತನಾಡಿ, ಉದಯೋನ್ಮುಖ ಕಲಾವಿದರು ಮಂಡಳಿಯಲ್ಲಿ ಹೆಸರು ನೋಂದಣಿ ಮಾಡಿಸಿದರೆ, ಸರ್ಕಾರದಿಂದ ಲಭ್ಯವಿರುವ ಸೌಲಭ್ಯ ಕಲ್ಪಿಸುತ್ತೇನೆ ಎಂದರು.

ನಿರ್ದೇಶಕ ಸಂತೋಷ ಸುತಾರ ಮಾತನಾಡಿ, ಅತ್ಯಾಚಾರ, ವ್ಯಸನಗಳಿಗೆ ಕಡಿವಾಣ ಹಾಕಲು ಹಾಗೂ ಕಾಮ ಪ್ರಚೋದಕ ಪ್ರವೃತ್ತಿಯನ್ನು ಶಾಶ್ವತವಾಗಿ ತೊಲಗಿಸುವ ನೀತಿ ಕತೆಯನ್ನು ಚಿತ್ರ ಹೊಂದಿದೆ. ಮರಾಠಿಯಲ್ಲಿ ತೆರೆಕಂಡ ‘ದಡಪನ’ ಚಲನಚಿತ್ರವನ್ನು ಕನ್ನಡ ಭಾಷೆಯಲ್ಲಿ ಬಿಡುಗಡೆ ಮಾಡುತ್ತಿದ್ದೇವೆ ಎಂದು ತಿಳಿಸಿದರು. ವಕೀಲೆ ಅಶ್ವಿನಿ ಜ್ಯೋತಿಬಾ ನಾವಗೇಕರ ದಡಪನ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿದರು.

ಅಸ್ಮಿತಾ ಕ್ರಿಯೇಷನ್ ಸಂಸ್ಥಾಪಕ ರಾಜೇಶ್ ಗಣಪತಿ ಲೋಹಾರ, ಚಿತ್ರನಟ ಶಶಿಕಾಂತ ನಾಯಿಕ, ನಟಿ ನಿಧಿ ರಾಹುಲ್, ಕಲಾವಿದರಾದ ಮಹದೇವ ಹೊಂಗೆಕರ, ಸಂಕಲನಕಾರ ಪ್ರಶಾಂತ ಶೇಬಣ್ಣವರ, ಗಾಯಕರಾದ ಸಾಗರ ಚಂದಗಡಕರ, ಸ್ವಾತಿ ಸುತಾರ, ಕಾಜಲ್ ಧಾಮನೇಕರ, ತೇಜಸ್ವಿನಿ
ಎಸ್.ಕೆ. ಹಾಗೂ ಪ್ರವೀಣ ಸುತಾರ, ಸುರೇಶ ಮೋನೆ, ಅಂತೋನಿ ಡಿಸಿಲ್ವಾ ಇತರರು ಇದ್ದರು.

ಆಡಿಷನ್‌ಗೆ ಸಂಪರ್ಕಿಸಿ

ಬೆಳಗಾವಿ ರಾಮತೀರ್ಥ ನಗರದ ವರ್ಚಸ್ ಎಂಟರ್‌ಟೇನ್‌ಮೆಂಟ್ ಸ್ಟುಡಿಯೋದಲ್ಲಿ ಅಕ್ಟೋಬರ್ 5 ಮತ್ತು 6ರಂದು ಅನ್ವಿತಾ ಚಲನಚಿತ್ರದ ಆಡಿಷನ್ ನಡೆಯಲಿದೆ. ಕಲಾವಿದರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಚಿತ್ರದ ನಿರ್ದೇಶಕ ಸಂತೋಷ ಸುತಾರ ತಿಳಿಸಿದ್ದಾರೆ. ಮಾಹಿತಿಗೆ ಮೊ.7619391426ಗೆ ಸಂಪರ್ಕಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net