ವಿವಾಹದ 3ನೇ ವಾರ್ಷಿಕೋತ್ಸವಕ್ಕೆ ವಿಶೇಷ ಸಂದೇಶ ಹಂಚಿಕೊಂಡ ವಿರೂಷ್ಕಾ

Virushka web
Published on

ಬೆಂಗಳೂರು: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮ ದಂಪತಿಗೆ ಶುಕ್ರವಾರ 3ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮದ ದಿನ. ಮುಂದಿನ ವರ್ಷಾರಂಭದಲ್ಲಿ ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿರುವ ದಂಪತಿಗೆ ಈ ಸಲದ ವಾರ್ಷಿಕೋತ್ಸವ ವಿಶೇಷವಾದುದು. ಆದರೆ ಈ ಬಾರಿ ದಂಪತಿ ದೂರದೂರವಿದ್ದು ವಿವಾಹ ವಾರ್ಷಿಕೋತ್ಸವವನ್ನು ಆಚರಿಸಬೇಕಾಗಿದೆ. ಗರ್ಭಿಣಿ ಅನುಷ್ಕಾ ತವರಿನಲ್ಲೇ ಉಳಿದುಕೊಂಡಿದ್ದರೆ, ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದಾರೆ. ಆದರೂ ವಿಶೇಷ ಸಂದೇಶಗಳ ಮೂಲಕ ದಂಪತಿ 3ನೇ ವಿವಾಹ ವಾರ್ಷಿಕೋತ್ಸವವನ್ನು ಸಾಮಾಜಿಕ ಜಾಲತಾಣದಲ್ಲಿ ಸಂಭ್ರಮಿಸಿದ್ದಾರೆ.

‘3 ವರ್ಷ ಮತ್ತು ಜತೆಯಾಗಿರಲು ಇಡೀ ಜೀವಮಾನವೇ ಇದೆ’ ಎಂದು ವಿರಾಟ್ ಕೊಹ್ಲಿ ಬರೆದುಕೊಂಡಿದ್ದಾರೆ. ಜತೆಗೆ ವಿವಾಹದ ಕಪ್ಪು-ಬಿಳುಪು ಚಿತ್ರವನ್ನೂ ಪ್ರಕಟಿಸಿದ್ದಾರೆ. 2017ರ ಡಿಸೆಂಬರ್ 11ರಂದು ಇಟಲಿಯಲ್ಲಿ ‘ವಿರೂಷ್ಕಾ’ ಖ್ಯಾತಿಯ ಕೊಹ್ಲಿ-ಅನುಷ್ಕಾ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿತ್ತು.

‘ನಮಗೆ 3 ವರ್ಷಗಳು ಮತ್ತು ಶೀಘ್ರದಲ್ಲೇ ನಾವು ಮೂವರಾಗುತ್ತಿದ್ದೇವೆ. ಮಿಸ್ ಯೂ’ ಎಂದು ಅನುಷ್ಕಾ ಶರ್ಮ ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಜತೆಗೆ ವಿರಾಟ್ ಕೊಹ್ಲಿ ಅವರನ್ನು ಅಪ್ಪಿಕೊಂಡಿರುವ ಚಿತ್ರವನ್ನೂ ಪ್ರಕಟಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net