ಅನುಷ್ಕಾ ಬೇಬಿ ಬಂಪ್ ಚಿತ್ರಕ್ಕೆ ವಿರಾಟ್ ಕೊಹ್ಲಿ ಪ್ರತಿಕ್ರಿಯೆ ಏನು ಗೊತ್ತೇ?

viratkohli-anushkasharma-babybump
Published on

ಬೆಂಗಳೂರು: ಕಳೆದ ತಿಂಗಳ ಕೊನೆಯಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮ ದಂಪತಿ ಅಪ್ಪ-ಅಮ್ಮನಾಗುತ್ತಿರುವ ವಿಷಯವನ್ನು ಬಹಿರಂಗಪಡಿಸಿ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದರು. ಇದೀಗ ಅನುಷ್ಕಾ ಶರ್ಮ ಇನ್‌ಸ್ಟಾಗ್ರಾಂನಲ್ಲಿ ಮತ್ತೊಮ್ಮೆ ‘ಬೇಬಿ ಬಂಪ್’ ಚಿತ್ರವನ್ನು ಪ್ರಕಟಿಸಿದ್ದು, ಅದಕ್ಕೆ ವಿರಾಟ್ ಕೊಹ್ಲಿ ಹಾಕಿರುವ ಕಾಮೆಂಟ್ ಕೂಡ ಸಾಕಷ್ಟು ಗಮನ ಸೆಳೆದಿದೆ.

ಕಡಲ ಕಿನಾರೆಯಲ್ಲಿ ಬೇಬಿ ಬಂಪ್ ಹಿಡಿದಿರುವ ಚಿತ್ರವನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿರುವ ಅನುಷ್ಕಾ ಶರ್ಮ ಅದರ ಕೆಳಗೆ ಸುಂದರ ಅಡಿಬರಹ ಬರೆದಿದ್ದಾರೆ. ‘ನಿಮ್ಮೊಳಗೆ ಜೀವವೊಂದು ರೂಪುಗೊಳ್ಳುವುದನ್ನು ಅನುಭವಿಸುವುದಕ್ಕಿಂತ ಹೆಚ್ಚು ದಿಟ ಮತ್ತು ವಿನಮ್ರವಾದುದು ಯಾವುದೂ ಇಲ್ಲ. ಇದು ನಿಮ್ಮ ನಿಯಂತ್ರಣದಲ್ಲಿ ಇಲ್ಲದಿದ್ದರೆ ನಿಜಕ್ಕೂ ಅದೇನು?’ ಎಂದು ಅನುಷ್ಕಾ ಶರ್ಮ ಬರೆದುಕೊಂಡಿದ್ದಾರೆ.

ಅನುಷ್ಕಾ ಶರ್ಮ ಭಾನುವಾರ ಮಾಡಿರುವ ಈ ಪೋಸ್ಟ್‌ಗೆ ಕೆಲವೇ ಕ್ಷಣಗಳಲ್ಲಿ ಪ್ರತಿಕ್ರಿಯೆ ನೀಡಿರುವ ವಿರಾಟ್ ಕೊಹ್ಲಿ, ‘ನನ್ನ ಇಡೀ ಜಗತ್ತು ಒಂದೇ ಫ್ರೇಮ್‌ನಲ್ಲಿದೆ’ ಎಂದು ಬರೆದುಕೊಂಡಿದ್ದಾರೆ. ಕೊಹ್ಲಿ ಅವರ ಈ ಕಾಮೆಂಟ್ ಸಾಕಷ್ಟು ಅಭಿಮಾನಿಗಳ ಗಮನ ಸೆಳೆದಿದ್ದು, ಒಂದೇ ಗಂಟೆಯಲ್ಲಿ 60 ಸಾವಿರಕ್ಕೂ ಅಧಿಕ ಲೈಕ್ಸ್‌ಗಳನ್ನು ಪಡೆದುಕೊಂಡಿದೆ. ಅನುಷ್ಕಾ ಪೋಸ್ಟ್ ಕೂಡ ಒಂದೇ ಗಂಟೆಯಲ್ಲಿ ಒಂದೂವರೆ ಲಕ್ಷ ಲೈಕ್ಸ್‌ಗಳ ಸನಿಹ ತಲುಪಿದೆ.

ವಿರಾಟ್ ಕೊಹ್ಲಿ ಅವರೀಗ ಯುಎಇಯಲ್ಲಿ ಆರ್‌ಸಿಬಿ ತಂಡವನ್ನು ಮುನ್ನಡೆಸಲು ಸಿದ್ಧವಾಗುತ್ತಿದ್ದಾರೆ. 2021ರ ಜನವರಿಯಲ್ಲಿ ಮಗುವಿನ ಜನನವಾಗಲಿದೆ ಎಂದು ಕೊಹ್ಲಿ-ಅನುಷ್ಕಾ ದಂಪತಿ ಈಗಾಗಲೆ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net