More

    ಏಷ್ಯನ್​ ಗೇಮ್ಸ್​ಗೆ ವೀಸಾ ನಿರಾಕರಣೆ; ಚೀನಾ ಪ್ರವಾಸ ರದ್ದು ಮಾಡಿದ ಅನುರಾಗ್​ ಠಾಕೂರ್​

    ನವದೆಹಲಿ: 19ನೇ ಏಷ್ಯನ್​ ಗೇಮ್ಸ್​ ಕ್ರೀಡಾಕೂಟದಲ್ಲಿ ಭಾಗವಹಿಸಬೇಕಿದ್ದ ವುಶು ಅಥ್ಲೀಟ್​ಗಳಿಗೆ ಚೀನಾ ಸರ್ಕಾರ ವೀಸಾ ನಿರಾಕರಿಸಿರುವುದನ್ನು ಭಾರತ ಸರ್ಕಾರ ತೀವ್ರವಾಗಿ ಖಂಡಿಸಿದೆ.

    ಏಷ್ಯನ್​ ಗೇಮ್ಸ್​ ಉದ್ಘಾಟನೆಯಲ್ಲಿ ಭಾಗವಹಿಸಲು ಚೀನಾಕ್ಕೆ ತೆರಳಬೇಕಿದ್ದ ಅನುರಾಗ್​ ಠಾಕೂರ್​ ಅವರು ತಮ್ಮ ಪ್ರವಾಸವನ್ನು ರದ್ದುಗೊಳಿಸಿದ್ದಾರೆ. ಈ ಕುರಿತು ವಿದೇಶಾಂಗ ಇಲಾಖೆ ಪ್ರಕಟಣೆಯೊಂದನ್ನು ಹೊರಡಿಸಿದೆ.

    ಇದನ್ನೂ ಓದಿ: ಕಾವೇರಿ ಜಲವಿವಾದ; ಸ್ಟಾಲಿನ್-ಸೋನಿಯಾರನ್ನು ಮೆಚ್ಚಿಸಲು ಡಿ.ಕೆ. ಶಿವಕುಮಾರ್​ ನೀರು ಬಿಟ್ಟಿದ್ದಾರೆ: ಕೆ.ಎಸ್. ಈಶ್ವರಪ್ಪ

    ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಬರೆದುಕೊಂಡಿರುವ ಕೇಂದ್ರ ಸಚಿವ ಕಿರಣ್​ ರಿಜುಜು, ಹ್ಯಾಂಗ್​ಝೌನಲ್ಲಿ ನಡೆಯುತ್ತಿರುವ 19ನೇ ಏಷ್ಯನ್​ ಗೇಮ್ಸ್​ನಲ್ಲಿ ಭಾಗವಹಿಸ ಬೇಕಾಗಿದ್ದ ಅರುಣಾಚಲಪ್ರದೇಶದ ವುಶು ಅಥ್ಲೀಟ್​ಗಳಿಗೆ ವೀಸಾ ನಿರಾಕರಿಸಿರುವ ಚೀನಾ ಸರ್ಕಾರದ ಕೃತ್ಯವನ್ನು ನಾವು ಬಲವಾಗಿ ಖಂಡಿಸುತ್ತೇವೆ.

    ಚೀನಾದ ನಡವಳಿಕೆ ಏಷ್ಯನ್​ ಗೇಮ್ಸ್​ ನಿಯಮ ಹಾಗೂ ಕ್ರೀಡಾ ಮನೋಭಾವ ಉಲ್ಲಂಘಿಸಿದಂತಾಗುತ್ತದೆ. ಈ ಕ್ರಮವು ಚೀನಾದ ತಾರತಮ್ಯ ಧೋರಣೆಯನ್ನು ಪ್ರದರ್ಶಿಸುತ್ತದೆ. ಅರುಣಾಚಲಪ್ರದೇಶ ಭಾರತದ ಅವಿಭಾಜ್ಯ ಅಂಗವಾಗಿದ್ದು, ಚೀನಾದ ಕ್ರಮಗಳನ್ನು ನಾವು ಬಲವಾಗಿ ಖಂಡಿಸುತ್ತೇವೆ. ಚೀನಾದ ಈ ಕಾನೂನುಬಾಹಿರ ಕ್ರಮದ ವಿರುದ್ಧ ಅಂತರಾಷ್ಟ್ರೀಯ ಒಲಂಪಿಕ್​ ಸಮಿತಿ ಕಠಿಣ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts