More

    ಕಾವೇರಿ ಜಲವಿವಾದ; ಸ್ಟಾಲಿನ್-ಸೋನಿಯಾರನ್ನು ಮೆಚ್ಚಿಸಲು ಡಿ.ಕೆ. ಶಿವಕುಮಾರ್​ ನೀರು ಬಿಟ್ಟಿದ್ದಾರೆ: ಕೆ.ಎಸ್. ಈಶ್ವರಪ್ಪ

    ಶಿವಮೊಗ್ಗ: ಕರ್ನಾಟಕ-ತಮಿಳುನಾಡು ನಡುವಿನ ಕಾವೇರಿ ನದಿ ನೀದು ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಸಮಸ್ಯೆ ಉಲ್ಬಣಕ್ಕೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​ ಅವರೇ ಹೊಣೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಆರೋಪಿಸಿದ್ದಾರೆ.

    ಶಿವಮೊಗ್ಗದಲ್ಲಿ ಈ ಕುರಿತು ಮಾತನಾಡಿದ ಮಾಜಿ ಸಚಿವ ಈಶ್ವರಪ್ಪ, ಇಂಡಿಯಾ ಮೈತ್ರಿಕೂಟವನ್ನು ತೃಪ್ತಿಪಡಿಸಲು ಕದ್ದು ಮುಚ್ಚಿ ತಮಿಳುನಾಡಿಗೆ ನೀರು ಹರಿಸಲಾಗಿದೆ ಎಂದು ಕಿಡಿಕಾರಿದ್ದಾರೆ.

    ರಾಜಕೀಯ ಸ್ವಾರ್ಥ ಮುಖ್ಯವಾಗಿದೆ

    ತಮಿಳುನಾಡಿಗೆ ನೀರು ಹರಿಸುವ ಮುನ್ನ ಇವರು ಸರ್ವಪಕ್ಷ ಸಭೆ ಕರೆಯಬೇಕಿತ್ತು. ಆದರೆ, ಅದ್ಯಾವುದನ್ನು ಮಾಡದೆ ಮುಟ್ಟಾಳತನದ ಕೆಲಸ ಮಾಡಿದ್ದಾರೆ. ಇವರು ತಮಿಳುನಾಡಿಗೆ ನೀರು ಹರಿಸುವ ಮುನ್ನ ರೈತರ ಹಾಗೂ ಬೆಳೆಗಳ ಪರಿಸ್ಥಿತಿ, ವಸ್ತುಸ್ಥಿತಿಯನ್ನು ಅವಲೋಕಿಸಿ ಆ ನಂತರ ಮುಂದಿನ ಕ್ರಮ ಕೈಗೊಳ್ಳಬೇಕಿತ್ತು.

    ಹಿಂದೆ ಬಂಗಾರಪ್ಪನವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಇದೇ ರೀತಿಯ ಪರಿಸ್ಥಿತಿ ಎದುರಾಗಿತ್ತು. ಆಗ ಅವರು ಸರ್ವಪಕ್ಷ ಸಭೆ ಕರೆದು ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಹರಿಸುವುದಿಲ್ಲವೆಂದು ಸುಗ್ರೀವಾಜ್ಞೆ ಹೊರಡಿಸಿದ್ದರು. ಆದರೆ, ಡಿಸಿಎಂ ಡಿ.ಕೆ. ಶಿವಕುಮಾರ್​ ಅವರು ಇದ್ಯಾವುದನ್ನು ಮಾಡದೆ ಸೋನಿಯಾ ಗಾಂಧಿ ಹಾಗೂ ಸ್ಟಾಲಿನ್​ ಅವರನ್ನು ಮೆಚ್ಚಿಸಲು ತಮಿಳುನಾಡಿಗೆ ನೀರು ಹರಿಸಿದ್ದಾರೆ.

    DK Eshwarappa

    ಈ ಸರ್ಕಾರಕ್ಕೆ ರಾಜ್ಯದ ರೈತರ ಹಿತಕ್ಕಿಂತ ರಾಜಕೀಯ ಸ್ವಾರ್ಥ ಮುಖ್ಯವಾಗಿದೆ. ರಾಜ್ಯದ ವಸ್ತುಸ್ಥಿತಿ ಗಮನಿಸದೇ ಕಾವೇರಿ ನೀರು ಹರಿಸಿದ್ದಾರೆ. ರೈತರ ಆಕ್ರೋಶದ ಕಟ್ಟೆ ಯಾವಾಗ ಒಡೆಯುತ್ತದೋ ಗೊತ್ತಿಲ್ಲ. ಕೂಡಲೇ ಮುಖ್ಯಮಂತ್ರಿಗಳು ಡಿ.ಕೆ. ಶಿವಕುಮಾರ್​ ಅವರ ರಾಜೀನಾಮೆಯನ್ನು ಪಡೆಯಬೇಕು ಎಂದು ಆಗ್ರಹಿಸಿದ್ದಾರೆ.

    ಇದನ್ನೂ ಓದಿ: ಕಾವೇರಿ ಜಲವಿವಾದ; ರಾಜ್ಯ ಸರ್ಕಾರ ಸರಿಯಾಗಿ ವಾದ ಮಂಡಿಸದೆ ಇರುವುದು ನಮಗೆ ಹಿನ್ನಡೆಯಾಗಿದೆ: ಮಾಜಿ ಸಿಎಂ ಬಿಎಸ್​ವೈ

    ಏಕವಚನದಲ್ಲಿ ವಾಗ್ದಾಳಿ

    ಈಶ್ವರಪ್ಪರ ಸೆಟ್ಲಮೆಂಟ್ ಆಗಿದೆ ಎಂಬ ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯಿಸಿದ ಕೆಎಸ್​ಈ, ಅದು ಶಿವಕುಮಾರ ಅಲ್ಲದೇ ಅವನ ವಂಶದ ಯಾರಿಂದಲೂ ಸಾಧ್ಯವಿಲ್ಲ. ನನ್ನ ಸೆಟ್ಲಮೆಂಟ್​ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ರಾಜಕೀಯ ನಿಂತ ನೀರಲ್ಲ ಸೈಕಲ್​ ಚಕ್ರದ ತರಹ ತಿರುಗುತ್ತಿರುತ್ತದೆ. ನಾನು ಡಿಸಿಎಂ ಆಗಿದ್ದ ಸಮಯದಲ್ಲಿ ಅವನು ಜೈಲಿನಲ್ಲಿದ್ದ. ಈಗ ಬೇಲ್​ ಮೇಲೆ ಇದ್ದಾನೆ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.

    ನಾನು ಈಗಾಗಲೇ ಒಮ್ಮೆ ಡಿಸಿಎಂ ಆಗಿದ್ದವನು. ನೀನು ನೆನ್ನೆ ಮೊನ್ನೆ ಉಪಮುಖ್ಯಮಂತ್ರಿಯಾಗಿದ್ದೀಯಾ. ಕಾಂಗ್ರೆಸ್​ನಲ್ಲಿ ಗುಂಪುಗಾರಿಕೆ ಹೆಚ್ಚುತ್ತಿದ್ದು, ಡಿಸಿಎಂ ಸ್ಥಾನಕ್ಕೂ ಪೈಪೋಟಿ ಶುರುವಾಗಿದೆ. ರಾಜಕೀಯದಲ್ಲಿ ಸ್ಥಾನಮಾನ ನಿಂತ ನೀರಲ್ಲ.. ಅದು ತಿರುಗ್ತಾ ಇರುತ್ತದೆ ಎಂದು ಹೇಳಿದ್ದಾರೆ.

    ನೀನು ಜೈಲಿನಿಂದ ಇತ್ತೀಚಿಗಷ್ಟೇ ಬಂದಿರೋದು. ಅದು ಪಾಕಿಸ್ತಾನದ ಯುದ್ಧದಲ್ಲಿ ಗೆದ್ದ ರೀತಿ ಮೆರವಣಿಗೆ ಮಾಡಿಕೊಂಡು ಕರೆದುಕೊಂಡು ಬಂದ್ರು. ನೀವು ಏನು ಸಾಧನೆ ಮಾಡಿದ್ರಿ ಎಂದು ನಿಮ್ಮ ಸ್ನೇಹಿತರೆಲ್ಲಾ ಮೆರವಣಿಗೆ ಮಾಡಿಕೊಂಡು ಕರೆದುಕೊಂಡು ಬಂದ್ರಲ್ಲಾ ನಿಮ್ಮಗೆ ನಾಚಿಕೆಯಾಗಲ್ವ. ಅವರು ಈ ರೀತಿಯ ಪದಗಳನ್ನು ಬಳಸುತ್ತಾ ಹೋಗಲಿ ರಾಜ್ಯದ ಜನರು ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್​. ಈಶ್ವರಪ್ಪ ಡಿಸಿಎಂ ಡಿ.ಕೆ. ಶಿವಕುಮಾರ್​ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts