More

    ಮಾಧ್ಯಮ ಚರ್ಚೆಯಲ್ಲಿ ಭಯೋತ್ಪಾದಕರು; ಸುದ್ದಿ ವಾಹಿನಿಗಳಿಗೆ ಎಚ್ಚರಿಕೆ ನೀಡಿದ ಕೇಂದ್ರ ಸರ್ಕಾರ

    ನವದೆಹಲಿ: ಗಂಭೀರ ಅಪರಾಧ ಪ್ರಕರಣಗಳು, ಭಯೋತ್ಪಾದನೆ, ನಿಷೇಧಿತ ಸಂಘಟನೆಗಳಲ್ಲಿ ಗುರುತಿಸಿಕೊಂಡಿರುವವರಿಗೆ ಮಾಧ್ಯಮಗಳಲ್ಲಿ ಯಾವುದೇ ತರಹದ ಅವಕಾಶಗಳನ್ನು ನೀಡಬಾರದೆಂದು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.

    ಈ ಕುರಿತು ಪ್ರಕಟಣೆಯನ್ನು ಹೊರಡಿಸಿರುವ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಸರ್ಕಾರಕ್ಕೆ ಬೇಕಾಗಿರುವ ಮೋಸ್ಟ್​ ವಾಂಟೆಡ್​ ವ್ಯಕ್ತಿಗಳನ್ನು ಮಾಧ್ಯಮಗಳಲ್ಲಿನ ಚರ್ಚೆಗೆ ಆಹ್ವಾನಿಸಿರುವ ವಿಚಾರ ಬೆಳಕಿಗೆ ಬಂದ ನಂತರ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ.

    Order Copy

    ಇದನ್ನೂ ಓದಿ: ಸೌಭಾಗ್ಯದಾತೆ ಜ್ಯೇಷ್ಠಾಗೌರಿ ಅರ್ಥಾತ್ ಎಳೆಯಷ್ಟಮಿ ಆಚರಣೆ ಹೇಗೆ?

    ಗಂಭೀರ ಅಪರಾಧ ಪ್ರಕರಣಗಳು, ಭಯೋತ್ಪಾದನೆ, ನಿಷೇಧಿತ ಸಂಘಟನೆಗಳಲ್ಲಿ ಗುರುತಿಸಿಕೊಂಡು ವಿದೇಶಗಳಲ್ಲಿ ತಲೆಮಾರಿಸಿಕೊಂಡಿರುವ ವ್ಯಕ್ತಿಯನ್ನು ಸುದ್ದಿವಾಹಿನಿ ಒಂದರ ಕಾರ್ಯಕ್ರಮದ ಚರ್ಚೆಗೆ ಆಹ್ವಾನಿಸಿರುವ ವಿಚಾರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯದ ಗಮನಕ್ಕೆ ಬಂದಿದೆ.

    ಚರ್ಚೆಗೆ ಆಹ್ವಾನಿಸಲ್ಪಟ್ಟಿದ್ದ ವ್ಯಕ್ತಿಯೂ ಭಾರತದ ಸಾರ್ವಭೌಮತೆ, ಸಮಗ್ರತೆ, ಭದ್ರತೆ, ಅನ್ಯ ರಾಷ್ಟ್ರದೊಂದಿಗೆ ದೇಶದ ಸಂಬಂಧವನ್ನು ಮತ್ತು ಕಾನೂನು ಸುವ್ಯಸ್ಥೆಗೆ ಧಕ್ಕೆ ಉಂಟು ಮಾಡುವಂತಹ ಹೇಳಿಕೆಗಳನ್ನು ನೀಡಿದ್ದಾನೆ. ಸರ್ಕಾರವು ಪತಿಕ್ರಾ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯುತ್ತದೆ ಮತ್ತು ಈ ವಿಚಾರವು ಕೇಬಲ್​ ಟೆಲಿವಿಷನ್​ ನೆಟ್​ವರ್ಕ್​​ (ನಿಯಂತ್ರಣ) ಕಾಯ್ದೆಯಡಿ ನಿಗದಿಪಡಿಸಲಾಗಿರುವ ನಿಬಂಧನೆಗಳಿಗೆ ಬದ್ದವಾಗಿರಬೇಕು ಎಂದು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts