More

    ಮುಸ್ಲಿಂ ವಿರೋಧಿ ಹೇಳಿಕೆ; ಸಂಸದ ರಮೇಶ್​ ಬಿಧೂರಿ ವಿರುದ್ಧ ಶೋಕಾಸ್​ ನೋಟಿಸ್ ಜಾರಿ ಮಾಡಿದ ಬಿಜೆಪಿ

    ನವದೆಹಲಿ: ಸಂಸತ್​ ಅಧಿವೇಶನದ ವೇಳೆ ಬಿಎಸ್​ಪಿ ಸದಸ್ಯ ಕುನ್ವರ್​ ಡ್ಯಾನಿಶ್​ ಅಲಿ ವಿರುದ್ಧ ಕೋಮು ಹೇಳಿಕೆ ನೀಡಿರುವ ಬಿಜೆಪಿ ಸಂಸದ ರಮೇಶ್​ ಬಿಧೂರಿ ವಿಪಕ್ಷ ಹಾಗೂ ಸ್ವಪಕ್ಷೀಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇತ್ತ ತಮ್ಮ ಹೇಳಿಕೆಗೆ ವಿವರಣೆ ನೀಡುವಂತೆ ಬಿಜೆಪಿ ಶೋಕಾಸ್​ ನೋಟಿಸ್​ ಜಾರಿ ಮಾಡಿದೆ.

    ಗುರುವಾರ ಚಂದ್ರಯಾನ-3ರ ಮೇಲಿನ ಚರ್ಚೆ ನಡೆಯುತ್ತಿದ್ದ ವೇಳೆ ಮಾತನಾಡಿದ್ದ ರಮೇಶ್​ ಬಿಧೂರಿ ಬಿಎಸ್​ಪಿ ಸಂಸದ ಕುನ್ವರ್​ ಡ್ಯಾನಿಶ್​ ಅಲಿ ವಿರುದ್ಧ ಅವಹೇಳನಕಾರಿ ಪದಗಳನ್ನು ಬಳಸಿದ್ದರು. ಇವರ ಹೇಳಿಕೆ ಸಾಕಷ್ಟು ಖಂಡನೆಗೆ ಗುರಿಯಾಗಿತ್ತು ಮತ್ತು ಬಿಜೆಪಿ ಸದಸ್ಯನ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂಬ ಆಗ್ರಹ ಕೇಳಿ ಬಂದಿತ್ತು.

    ಸಂಸದ ರಮೇಶ್​ ವಿರುದ್ಧ ವ್ಯಾಪಕ ದೂರು ಹಾಗೂ ಆಕ್ರೋಶ ವ್ಯಕ್ತವಾದ ಹಿನ್ನೆಲಯಲ್ಲಿ ಅವರ ವಿರುದ್ಧ ಕ್ರಮಕ್ಕೆ ಮುಂದಾಗಿರುವ ಬಿಜೆಪಿ ತಾವು ನೀಡಿರುವ ಹೇಳಿಕೆಗೆ ವಿವರಣೆ ನೀಡುವಂತೆ ಶೋಕಾಸ್​ ನೋಟಿಸ್​ ಜಾರಿ ಮಾಡಿದೆ. ಒಂದು ವೇಳೆ ಸರಿಯಾದ ಸಮಯಕ್ಕೆ ಉತ್ತರಿಸಿದಿದ್ದಲ್ಲಿ ಕಠಿಣ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದೆ.

    ಇದನ್ನೂ ಓದಿ: ಬಹುಕೋಟಿ ವಂಚನೆ ಪ್ರಕರಣ; ಚಂದ್ರಬಾಬು ನಾಯ್ಡುಗೆ ಸದ್ಯಕ್ಕಿಲ್ಲ ರಿಲೀಫ್​

    ಈ ಕುರಿತು ಲೋಕಸಬೆ ಸ್ಪೀಕರ್​ ಓಂ ಬಿರ್ಲಾಗೆ ಪತ್ರ ಬರೆದಿರುವ ಸಂಸದ ಡ್ಯಾನಿಶ್​ ಅಲಿ ನೂತನ ಸಂಸತ್​​ ಭವನದಲ್ಲಿ ನಿಮ್ಮ ಅಧ್ಯಕ್ಷತೆಯಲ್ಲಿ ನಡೆದ ಅಧಿವೇಶನದಲ್ಲಿ ಚುನಾಯಿತ ಜನಪ್ರತಿನಿಧಿಯೊಬ್ಬನಿಗೆ ಈ ರೀತಿಯ ಮಾತುಗಳನ್ನಾಡಿರುವುದು ತುಂಬಾ ನೋವಾಗಿದೆ. ಇದಕ್ಕೆ ಸಂಬಂಧಿಸಿದಂತೆ ನೀವು ಕಠಿಣ ಕ್ರಮ ತೆಗೆದುಕೊಳ್ಳಬೇಕು.

    ಚುನಾಯಿತ ಜನಪ್ರತಿನಿಧಿಯಾಗಿ ನನ್ನಗೆ ಈ ರೀತಿಯ ಪರಿಸ್ಥಿತಿ ಇರಬೇಕಾದರೆ ಇನ್ನೂ ಸಾಮಾನ್ಯರ ಕಥೆಯೇನು. ಈ ಸಂಬಂಧ ಲೋಕಸಭೆಯ್ ಅಧ್ಯಕ್ಷರಾದ ನೀವು ವಿಚಾರಣೆ ನಡೆಸಿ ನನಗೆ ನ್ಯಾಯ ಕೊಡಿಸುತ್ತೀರಾ ಎಂಬ ವಿಶ್ವಾಸವಿದೆ ಎಂದು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts