Anupam Kher replaces Gandhi: 500 ರೂ. ನೋಟುಗಳಲ್ಲಿ ಗಾಂಧಿ ಬದಲಾಗಿ ನಟ ಅನುಪಮ್ ಖೇರ್ ಚಿತ್ರ! 1.30 ಕೋಟಿ ರೂ. ಮೌಲ್ಯದ ಹಣ ಪ್ರಿಂಟ್​​

500
Published on

ನಮ್ಮ ದೇಶದ ಕರೆನ್ಸಿ ನೋಟುಗಳಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಭಾವಚಿತ್ರವಿದೆ. ಆದರೆ ಇಬ್ಬರು ಕಳ್ಳರು ಬಾಲಿವುಡ್ ನ ಖ್ಯಾತ ನಟ ಅನುಪಮ್ ಖೇರ್ ಅವರ ಫೋಟೋ ಇರುವ 500 ರೂಪಾಯಿಯ ನಕಲಿ ನೋಟುಗಳನ್ನು ಮುದ್ರಿಸಿದ್ದಾರೆ. 1.30 ಕೋಟಿ ಮೌಲ್ಯದ ಈ ನಕಲಿ ನೋಟುಗಳನ್ನು ಗುಜರಾತ್‌ನ ಅಹಮದಾಬಾದ್‌ನ ಚಿನ್ನದ ವ್ಯಾಪಾರಿಗೆ ನೀಡಿದ್ದಾರೆ.

ಮುಂಬೈ:  ನಕಲಿ ಕರೆನ್ಸಿ ನೋಟುಗಳು ಪ್ರಿಂಟ್​​ ಆಗುವುದು ಹೊಸ ವಿಷಯವಲ್ಲ, ಆದರೆ ನೀವು ಎಂದಾದರೂ ನಟ ಅನುಪಮ್ ಖೇರ್ ( Anupam Kher )   ಅವರ ಚಿತ್ರವಿರುವ 500 ರೂಪಾಯಿ ನೋಟುಗಳನ್ನು ನೋಡಿದ್ದೀರಾ? ಆದರೆ ಈಗ ಗಾಂಧಿ ( Gandhi ) ಅವರ ಬದಲಾಗಿ ನಟ ಅನುಪಮ್​ ಖೇರ್​ ಅವರ ಫೋಟೋ  ( Anupam Kher replaces Gandhi ) ಇರುವ ನೋಡುಗಳು ವೈರಲ್​ ಆಗುತ್ತಿವೆ.

500 ರೂ. ನೋಟಿನಲ್ಲಿ ಗಾಂಧಿ ಫೋಟೋ ಬದಲಾಗಿ ನಟ ಅನುಪಮ್ ಖೇರ್ ಅವರ ಚಿತ್ರ:  Anupam Kher replaces Gandhi

ಇಬ್ಬರು ಕಳ್ಳರು ಚಿನ್ನದ ವ್ಯಾಪಾರಿ ಮೆಹುಲ್ ಠಕ್ಕರ್ ಅವರಿಂದ 2,100 ಗ್ರಾಂ ಚಿನ್ನವನ್ನು 1.60 ಕೋಟಿ ರೂ. ಗೆ ಖರೀದಿ ಮಾಡಿದ್ದಾರೆ. ಮೊದಲ ಕಂತಿನಲ್ಲಿ 1.30 ಕೋಟಿ ಹಾಗೂ ಎರಡನೇ ಕಂತಿನಲ್ಲಿ 30 ಲಕ್ಷ ನೀಡುವುದಾಗಿ ಭರವಸೆ ನೀಡಿದರು. ಈ ಒಪ್ಪಂದದ ಭಾಗವಾಗಿ, ಆ ಇಬ್ಬರು ಕಳ್ಳರು ಅನುಪಮ್ ಖೇರ್ ಅವರ ಫೋಟೋದೊಂದಿಗೆ ರೂ.500 ನಕಲಿ ನೋಟುಗಳನ್ನು ಮುದ್ರಿಸಿದ್ದಾರೆ. ಅವರು ರೂ.1.30 ಕೋಟಿ ಮೌಲ್ಯದ ನಕಲಿ ನೋಟುಗಳನ್ನು ತಂದು ಚಿನ್ನದ ವ್ಯಾಪಾರಿ ಮೆಹುಲ್ ಠಕ್ಕರ್ ಬಳಿ ಕೆಲಸ ಮಾಡುವ ಉದ್ಯೋಗಿಗೆ (ಭರತ್ ಜೋಶಿ) ನೀಡಿದರು. ಇನ್ನುಳಿದ 30 ಲಕ್ಷ ರೂಪಾಯಿಯನ್ನು ಶೀಘ್ರದಲ್ಲೇ ನೀಡುವುದಾಗಿ ತಿಳಿಸಿದರು.

ಇಬ್ಬರು ಹುಡ್ಗರು ಚಿನ್ನದ ವ್ಯಾಪಾರಿ ಮೆಹುಲ್ ಠಕ್ಕರ್‌ಗೆ ಒಟ್ಟು 26 ಕಟ್ಟುಗಳ 500 ರೂಪಾಯಿ ನಕಲಿ ನೋಟುಗಳನ್ನು ನೀಡಿದರು. ಮೆಹುಲ್ ಠಕ್ಕರ್ ತನ್ನ ಉದ್ಯೋಗಿ ಭರತ್ ಜೋಶಿಗೆ ನಕಲಿ ನೋಟುಗಳ ಬಂಡಲ್‌ಗಳನ್ನು ಎಣಿಸಲು ಕೇಳಿದ್ದಾನೆ.  ಬಳಿಕ ಭರತ್ ಜೋಶಿ ಅವರು ನೋಟುಗಳನ್ನು ಕರೆನ್ಸಿ ಎಣಿಕೆ ಯಂತ್ರದಲ್ಲಿ ಹಾಕಿ ಎಣಿಕೆ ಮಾಡಲಿಲ್ಲ. ಏಕೆ ಎಂದು ಪರಿಶೀಲಿಸಿದಾಗ ನೋಟುಗಳಲ್ಲಿ ಅನುಪಮ್ ಖೇರ್ ಅವರ ಫೋಟೋ ಪತ್ತೆಯಾಗಿದೆ.

ನಂತರ ನಕಲಿ ನೋಟುಗಳನ್ನು ಪತ್ತೆ ಮಾಡಿದ ಮೆಹುಲ್ ಠಕ್ಕರ್ ಮತ್ತು ಭರತ್ ಜೋಶಿ ಅಹಮದಾಬಾದ್‌ನ ನವರಂಗ್‌ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಸೆಪ್ಟೆಂಬರ್ 24 ರಂದು ನಡೆದ ವಂಚನೆಯು ಪ್ರಸ್ತುತ ತನಿಖೆಯಲ್ಲಿದೆ.

ಮೆಹುಲ್ ಠಕ್ಕರ್ ಅವರ ಕಚೇರಿಯ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ, ಪೊಲೀಸರು ಇಬ್ಬರು ಆರೋಪಿಗಳನ್ನು ಗುರುತಿಸಿದ್ದಾರೆ ಮತ್ತು ಅವರನ್ನು ಹಿಡಿಯಲು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net