ಹೆಚ್ಚಾಗುತ್ತಿದೆಯಾ ಪೊಲೀಸರ ಆತ್ಮಹತ್ಯೆ?; ಸರ್ವಿಸ್​ ರಿವಾಲ್ವರ್​​ನಿಂದ ಶೂಟ್​ ಮಾಡ್ಕೊಂಡ ಕಾನ್​ಸ್ಟೆಬಲ್​!

death
ಸಾಂದರ್ಭಿಕ ಚಿತ್ರ
Published on

ನವದೆಹಲಿ: ದೇಶದಲ್ಲಿ ಒಬ್ಬರ ಹಿಂದೊಬ್ಬರಂತೆ ಪೊಲೀಸರ ಆತ್ಮಹತ್ಯೆ ನಡೆಯುತ್ತಿದ್ದು, ಇಂದು ಮತ್ತೊಬ್ಬ ಪೊಲೀಸ್ ಸಾವಿಗೆ ಮೊರೆ ಹೋಗಿದ್ದಾರೆ. ಈತ ಸರ್ವಿಸ್​ ರಿವಾಲ್ವರ್​​ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ದೆಹಲಿಯ ವಾಯವ್ಯ ಜಿಲ್ಲೆಯಲ್ಲಿ ಈ ಪ್ರಕರಣ ನಡೆದಿದೆ. ಪ್ರಶಾಂತ್ ವಿಹಾರ್ ಪೊಲೀಸ್ ಠಾಣೆಯ ಅಮನ್​ದೀಪ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡ ಪೊಲೀಸ್ ಕಾನ್​ಸ್ಟೆಬಲ್​. ಪೆಟ್ರೋಲ್ ಪಂಪ್ ಪ್ರದೇಶದ ಗೋಡೆ ಪಕ್ಕ ನಿಲ್ಲಿಸಿದ್ದ ಕಾರೊಳಗೆ ಶವ ಇರುವುದನ್ನು ಕಂಡ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದರು.

ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದ ಪೊಲೀಸರಿಗೆ ಸ್ಯಾಂಟ್ರೊ ಕಾರಿನ ಡ್ರೈವರ್​ ಸೀಟ್​ನಲ್ಲಿ ವಾಸನೆ ಬರುತ್ತಿದ್ದ ಶವ ಕಂಡು ಬಂದಿತ್ತು. ಬಳಿಕ ತನಿಖೆಗಿಳಿದಾಗ ಅದು ಪೊಲೀಸ್ ಕಾನ್​ಸ್ಟೆಬಲ್ ಮೃತದೇಹ ಎಂಬುದು ತಿಳಿಯಿತು.

ಆತ್ಮಹತ್ಯೆ ಮಾಡಿಕೊಂಡಿದ್ದ ಪೊಲೀಸ್ ರಜೆಯಲ್ಲಿದ್ದು, ಆತನ ಮನೆಯವರಿಗೆ ಮಾಹಿತಿ ತಿಳಿಸಲಾಗಿದೆ. ಶವವನ್ನು ಮರಣೋತ್ತರ ಪರೀಕ್ಷೆ ಕಳುಹಿಸಲಾಗಿದ್ದು, ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಅಲ್ಲದೆ ಡೆತ್​ನೋಟ್​ನಂಥ ಯಾವುದೇ ಮಾಹಿತಿ ಲಭಿಸಿಲ್ಲ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net