ಅಫ್ಘಾನಿಸ್ತಾನದಲ್ಲಿ ಮತ್ತೆ ಕಂಪಿಸಿದ ಭೂಮಿ: 4.9 ತೀವ್ರತೆ ದಾಖಲು

Untitled design - 2025-09-05T154029.225
Published on

ಅಪಘಾನಿಸ್ತಾನದಲ್ಲಿ ಶುಕ್ರವಾರದಂದು (ಸೆ.5) ರಿಕ್ಟರ್ ಮಾಪಕದಲ್ಲಿ 4.9 ತೀವ್ರತೆಯ ಮತ್ತೊಂದು ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ತಿಳಿಸಿದೆ.

ಪೂರ್ವ ಪ್ರದೇಶದಲ್ಲಿ ಸರಣಿ ಮಾರಕ ಭೂಕಂಪಗಳು ಸಂಭವಿಸಿದ ಕೆಲವೇ ದಿನಗಳ ನಂತರ ಮತ್ತೆ ಭೂಕಂಪನವಾಗಿದೆ.

2,000ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು, 3,000ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಗುರುವಾರದಂದು ಕನಿಷ್ಠ ಎರಡು ಭೂಕಂಪಗಳು ಅಫ್ಘಾನಿಸ್ತಾನವನ್ನು ಅಪ್ಪಳಿಸಿವೆ.

ಭೂಗೋಳಶಾಸ್ತ್ರದ ನಿಖರತೆ ಪ್ರಕಾರ, 34.57 ಉತ್ತರ, ಉದ್ದ: 70.42 ಪೂರ್ವ, 120 ಕಿ.ಮೀ ಆಳದಲ್ಲಿ ವಿಪತ್ತು ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರವು ತಮ್ಮ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿದೆ.

ಗುರುವಾರ ತಡರಾತ್ರಿ ಈ ಪ್ರದೇಶದಲ್ಲಿ 5.8 ಮತ್ತು 4.1 ತೀವ್ರತೆಯ ಎರಡು ಭೂಕಂಪಗಳು ಸಂಭವಿಸಿದ ನಂತರ ಇತ್ತೀಚಿನ ಭೂಕಂಪನ ಚಟುವಟಿಕೆಗಳು ಸಂಭವಿಸಿವೆ ಎಂದು ಎನ್‌ಸಿಎಸ್ ತಿಳಿಸಿದೆ. 24 ಗಂಟೆಗಳ ಒಳಗೆ ವರದಿಯಾದ ಮೂರನೇ ಭೂಕಂಪ ಇದಾಗಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net