

ಕಡಬ: ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಗಣೇಶ್ ಉದನಡ್ಕ ಅಧ್ಯಕ್ಷತೆಯಲ್ಲಿ ಚಾರ್ವಾಕ ಶ್ರೀ ಕಪಿಲೇಶ್ವರ ದೇವಸ್ಥಾನದಲ್ಲಿ ನಡೆಯಿತು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶೋಕ್ ಗೌಡ ವರದಿ ವಾಚಿಸಿ, ಸಂಘವು 60,00,033 ರೂ. ನಿವ್ವಳ ಲಾಭ ಗಳಿಸಿದ್ದು, ಶೇ.6 ಡಿವಿಡೆಂಡ್ ನೀಡುವುದಾಗಿ ಘೋಷಿಸಿದರು.
ಮಾಜಿ ಅಧ್ಯಕ್ಷ ಧರ್ಮೇಂದ್ರ ಗೌಡ ಕಟ್ಟತ್ತಾರು ಪ್ರಸ್ತಾಪಿಸಿದರು. ಅಧ್ಯಕ್ಷ ಗಣೇಶ್ ಉದನಡ್ಕ ಮಾಹಿತಿ ನೀಡಿದರು.
ಚಾರ್ವಾಕ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕ ಗೋಪಾಲಕೃಷ್ಣ ಬಾರೆಂಗಳ ಮಾತನಾಡಿ, ಸಂಘದ ಕೃಷಿಕ ಸದಸ್ಯರಿಗೆ ನೀಡುವ ಬೆಳೆಸಾಲ ಮಿತಿ 3 ಲಕ್ಷ ರೂ. ಆಗಿದ್ದು, ಅರ್ಹ ಸದಸ್ಯರು ಅಪೇಕ್ಷೆಪಟ್ಟ ಸಂದರ್ಭ 2 ಲಕ್ಷ ರೂ. ಹೆಚ್ಚುವರಿ ಬೆಳೆ ಸಾಲ ಮಂಜೂರು ಮಾಡಿದ ಆಡಳಿತ ಮಂಡಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಚಾರ್ವಾಕ ಹಾಲು ಉತ್ಪಾದಕರ ಸಹಕಾರ ಸಂಘದ ಮಾಜಿ ಅಧ್ಯಕ್ಷ ಧನಂಜಯ ಕೇನಾಜೆ, ಸಂಘದ ಮಾಜಿ ಅಧ್ಯಕ್ಷ ಆನಂದ ಗೌಡ ಮೇಲ್ಮನೆ, ಕಾಣಿಯೂರು ಗ್ರಾ.ಪಂ ಸದಸ್ಯ ಲೋಕಯ್ಯ ಪರವ, ರಾಧಾಕೃಷ್ಣ ಪೈಕ ಮಾತನಾಡಿದರು.
ಸಂಘದ ಉಪಾಧ್ಯಕ್ಷ ಬಾಲಕೃಷ್ಣ ಗೌಡ ಇಡ್ಯಡ್ಕ, ನಿರ್ದೇಶಕರಾದ ಅನಂತ ಕುಮಾರ್ ಬೈಲಂಗಡಿ, ವಿಶ್ವನಾಥ ದೇವಿನಗರ, ಪರಮೇಶ್ವರ ಅನಿಲ, ಸುಂದರ ದೇವಸ್ಯ, ದಿವಾಕರ ಮರಕ್ಕಡ, ಲೋಕೇಶ ಗೌಡ ಆತಾಜೆ, ರಮೇಶ್ ಉಪ್ಪಡ್ಕ, ರತ್ನಾವತಿ ಮುದುವ, ವೀಣಾ ಅಂಬುಲ, ಶೀಲಾವತಿ ಮುಗಂಜ ಉಪಸ್ಥಿತರಿದ್ದರು.
ಭವತ್ ಎ.ಎಸ್ ಬಜೆಟ್ ವರದಿ ವಾಚಿಸಿದರು. ಸಂಘದ ಅಧ್ಯಕ್ಷ ಗಣೇಶ್ ಉದನಡ್ಕ ಸ್ವಾಗತಿಸಿದರು. ಅಶೋಕ್ ಗೌಡ ವಂದಿಸಿದರು. ಸಹಾಯಕ ಕಾರ್ಯನಿರ್ವಹಣಾಧಿಕಾರಿ ವಾಣಿ ತಿಳುವಳಿಕೆ ಪತ್ರ ವಾಚಿಸಿದರು.
25 ಹಿರಿಯ ಸದಸ್ಯರನ್ನು ಗೌರವಿಸಲಾಯಿತು. ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿಕಟಪೂರ್ವ ಅಧ್ಯಕ್ಷ ಆನಂದ ಗೌಡ ಮೇಲ್ಮನೆ, ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಅಶೋಕ್ ಗೌಡ ಅವರನ್ನು ಸನ್ಮಾನಿಸಲಾಯಿತು.