ಕಿರು ಕೈಗಾರಿಕಾ ಸಂಘದ ಜಿಲ್ಲಾ ಘಟಕ ಮಹಾಸಭೆ : ಪದಾಧಿಕಾರಿಗಳ ಆಯ್ಕೆ

kaigarika camp 7
ರಾಜಾರಾಮ ಎಸ್.ಪೆರ್ಲ
Published on

ಕಾಸರಗೋಡು: ಕೇರಳ ರಾಜ್ಯ ಕಿರು ಕೈಗಾರಿಕಾ ಸಂಘದ ಕಾಸರಗೋಡು ಜಿಲ್ಲಾ ಘಟಕ ವಾರ್ಷಿಕ ಮಹಾಸಭೆ ವಿದ್ಯಾನಗರದ ಸಿಡ್ಕೋ ಇಂಡಸ್ಟ್ರಿಯಲ್ ಎಸ್ಟೇಟ್‌ನಲ್ಲಿ ಜರುಗಿತು.

ಸಂಘಟನೆ ಅಧ್ಯಕ್ಷ ಎ.ನಿಸಾರ್ ಅಹಮ್ಮದ್ ಸಮಾರಂಭ ಉದ್ಘಾಟಿಸಿದರು. ಜಿಲ್ಲಾ ಕೈಗಾರಿಕಾ ಕೇಂದ್ರದ ಮಹಾ ಪ್ರಬಂಧಕ ಕೆ.ಸಜಿತ್ ಕುಮಾರ್ ಮುಖ್ಯ ಅತಿಥಿಯಾಗಿದ್ದರು. ಸಂಘಟನೆ ಜಿಲ್ಲಾ ಉಪಾಧ್ಯಕ್ಷ ಮುಜೀಬ್ ಅಹಮ್ಮದ್, ಕಾರ್ಯದರ್ಶಿ ಕೆ.ವಿ.ಸುಗತನ್, ಕೋಶಾಧಿಕಾರಿ ಅಶ್ರಫ್ ಮಧೂರು, ಜತೆಕಾರ್ಯದರ್ಶಿ ಮಹಮ್ಮದಾಲಿ, ಮಾಜಿ ಅಧ್ಯಕ್ಷ ಕೆ.ಜನಾರ್ದನನ್, ಕೆ.ಜಿ.ಇಮಾನ್ಯುವೆಲ್, ಕೆ. ರವೀಂದ್ರನ್, ಅಹಮ್ಮದಾಲಿ, ಕೆ.ಟಿ.ಸುಭಾಷ್‌ನಾರಾಯಣನ್, ಬಿಂದು ಸಿ, ಪಿ.ವಿ.ರವೀಂದ್ರನ್ ಮೊದಲಾದವರು ಪಾಲ್ಗೊಂಡಿದ್ದರು. ಕೈಗಾರಿಕೋದ್ಯಮಿಗಳ ಶೈಕ್ಷಣಿಕ ಸಾಧಕ ಮಕ್ಕಳನ್ನು ಅಭಿನಂದಿಸಲಾಯಿತು. ಉದ್ಯಮ ರಂಗದಲ್ಲಿ ರಾಜ್ಯಮಟ್ಟದಲ್ಲಿ ಗುರುತಿಸಲ್ಪಟ್ಟಿರುವ ಮುರಳೀಕೃಷ್ಣ ಹಾಗೂ ಉದಯನ್ ಕುಂಡಂಗುಯಿ ಅವರನ್ನು ಗೌರವಿಸಲಾಯಿತು.

ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ರಾಜಾರಾಮ ಎಸ್.ಪೆರ್ಲ ಅಧ್ಯಕ್ಷ, ಕೆ.ವಿ.ಸುಗತನ್ ಉಪಾಧ್ಯಕ್ಷ, ಮುಜೀಬ್ ಅಹಮ್ಮದ್ ಪ್ರಧಾನ ಕಾರ್ಯದರ್ಶಿ, ಅಶ್ರಫ್ ಮಧೂರು ಕೋಶಾಧಿಕಾರಿ ಹಾಗೂ ಪ್ರಜೀಶ್ ಅವರನ್ನು ಜತೆಕಾರ್ಯದರ್ಶಿಯನ್ನಾಗಿ ಆಯ್ಕೆ ಮಾಡಲಾಯಿತು. ಕಾರ್ಯಕ್ರಮದ ಅಂಗವಾಗಿ ಕೈಗಾರಿಕೋದ್ಯಮಿಗಳಿಗಾಗಿ ತರಬೇತಿ ಶಿಬಿರ ಆಯೋಜಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net