ಕೊಕ್ಕರ್ಣೆ ಸಂಘ ಶೇ.16 ಡಿವಿಡೆಂಡ್ ಘೋಷಣೆ

society
ಕೊಕ್ಕರ್ಣೆ ಸಿಂಡಿಕೇಟ್ ರೈತರ ಸೇವಾ ಸಹಕಾರಿ ಸಂಘದ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಸಂಘದ ಕಾರ್ಯವ್ಯಾಪ್ತಿಯ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅತ್ಯಧಿಕ ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
Published on

ಕೊಕ್ಕರ್ಣೆ: ಸಂಘ ವರದಿ ವರ್ಷದಲ್ಲಿ ಒಟ್ಟು 936 ಕೋಟಿ ರೂ. ವ್ಯವಹಾರ ನಡೆಸಿದ್ದು, 152.21 ಕೋಟಿ ರೂ. ಠೇವಣಿ ಸಂಗ್ರಹಿಸಿ, 135.25 ಕೋಟಿ ರೂ. ಹೊರಬಾಕಿ ಸಾಲ ಹೊಂದಿದ್ದು, ಶೇ.97.18 ವಸೂಲಾತಿ ಮಾಡಿದೆ. 1.65 ಕೋಟಿ ರೂ. ನಿವ್ವಳ ಲಾಭ ಗಳಿಸಿ, ಗಣನೀಯ ಸಾಧನೆ ಮಾಡಿ ಸದಸ್ಯರಿಗೆ ಶೇ.16 ಪಾಲು ಮುನಾಫೆ ನೀಡಲಾಗಿದೆ ಎಂದು ಸಂಘದ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ ಹೇಳಿದರು.

ಕೆಂಜೂರಿನಲ್ಲಿ ಕೊಕ್ಕರ್ಣೆ ಸಿಂಡಿಕೇಟ್ ರೈತರ ಸೇವಾ ಸಹಕಾರಿ ಸಂಘದ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಘದ ನಿರ್ದೇಶಕ ಪ್ರತಾಪ್ ಹೆಗ್ಡೆ ಮಾರಾಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಆಡಳಿತ ನಿರ್ದೇಶಕ(ಪ್ರಭಾರ) ಅಭಿಷೇಕ್ ವರದಿ ವಾಚಿಸಿ ಲೆಕ್ಕಪತ್ರ ಮಂಡಿಸಿದರು. ಸಂಘದ ನಿರ್ದೇಶಕ ಕೆ.ಉದಯ ಶೆಟ್ಟಿ ಸ್ವಾಗತಿಸಿ, ಸಿಬ್ಬಂದಿ ಶಿಶಿರ್ ಕಾರ್ಯಕ್ರಮ ನಿರೂಪಿಸಿದರು.

ಹಿಲಿಯಾಣ ಶಾಖೆ ಶಾಖಾ ವ್ಯವಸ್ಥಾಪಕ ಶಂಕರ ಪೂಜಾರಿ ವಂದಿಸಿದರು. ಸಂಘದ ಉಪಾಧ್ಯಕ್ಷ ಪ್ರವೀಣ್ ಶೆಟ್ಟಿ ವಂಡಾರು, ನಿರ್ದೇಶಕರಾದ ಶುಭಕರ ಶೆಟ್ಟಿ ವಂಡಾರು ಕಕ್ಕುಂಜೆ, ಪ್ರಸನ್ನ ಶೆಟ್ಟಿ ಹಳ್ಳಿ, ಪ್ರತಾಪ ಹೆಗ್ಡೆ ಮಾರಾಳಿ, ಮಂಜುನಾಥ ಹೆಗ್ಡೆ ಆವರ್ಸೆ, ದಯಾನಂದ ನಾಯ್ಕ ತಡಾಲು, ರವಿ ಪೂಜಾರಿ ಸಂತೆಕಟ್ಟೆ, ಮನೋಜ್ ಕುಮಾರ್ ಬಿ.ಶೆಟ್ಟಿ ಕಳ್ತೂರು, ಡಾ.ಸುನೀತಾ ಡಿ.ಶೆಟ್ಟಿ ಕೆಂಜೂರು, ಹೇಮಾವತಿ ಶೆಟ್ಟಿ ಮಾರಾಳಿ, ಕಮಲಾ ಯಾನೆ ಶಾರದಾ ನಾಲ್ಕೂರು ಉಪಸ್ಥಿತರಿದ್ದರು.

ಸನ್ಮಾನ

ಸಂಘದ ಕಾರ್ಯವ್ಯಾಪ್ತಿಯ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net