ಸಂಸ್ಕಾರಯುತ ವಿದ್ಯೆಯಿಂದ ಜೀವನದಲ್ಲಿ ಯಶಸ್ಸು : ಅರವಿಂದ ಬೋಳಾರ್ ಹೇಳಿಕೆ

New Project (56)
Published on

ಹಳೆಯಂಗಡಿ: ವಿದ್ಯೆಯೊಂದಿಗೆ ಉತ್ತಮ ಸಂಸ್ಕಾರ ಬೆಳೆಸಿಕೊಂಡರೆ ವ್ಯಕ್ತಿ ಜೀವನದಲ್ಲಿ ಯಶಸ್ಸು ಸಾಧಿಸಬಹುದು ಎಂದು ತುಳು ರಂಗಭೂಮಿ ಮತ್ತು ಚಲನಚಿತ್ರ ನಟ ಅರವಿಂದ ಬೋಳಾರ್ ಹೇಳಿದರು.

ಹಳೆಯಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು.

ಪ್ರಾಂಶುಪಾಲ ಡಾ.ಕಿರಣ್ ಎಂ. ಅಧ್ಯಕ್ಷತೆ ವಹಿಸಿದ್ದರು. ಉಡುಪಿ ತೆಂಕನಿಡಿಯೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಪ್ರಾಧ್ಯಾಪಕ ಡಾ.ವಿಷ್ಣುಮೂರ್ತಿ ಪ್ರಭು, ಪ್ರಾಧ್ಯಾಪಕ ಡಾ.ಅಜಯ ಸಂಯೋಜನಾಧಿಕಾರಿ ಡಾ.ಲೋಕೇಶ್, ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಡಾ.ಜಗದೀಶ್, ಉಪನ್ಯಾಸಕರಾದ ಫೆಲಿಟ ಮೋನಿಸ್, ಜ್ಯೋತಿ ರೈ ಕುಂಚಾರಿಯ ಕೆ.ಪೂರ್ಣಿಮಾ ಎಂ. ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net