PHOTOS: ಮಣ್ಣಿನ ನಂಟು ಬೆಸೆದುಕೊಂಡ ಅಣ್ಣಾ ಮಲೈ..ಕೃಷಿ ಕಾರ್ಯ, ಪಶು ಸಂಗೋಪನೆಯಲ್ಲಿ ಫುಲ್ ಬ್ಯುಸಿ

Anna Malai
Published on

ಖಡಕ್​ ಐಪಿಎಸ್​ ಅಧಿಕಾರಿ ಎಂದು ಹೆಸರು ಮಾಡಿದ್ದ ಅಣ್ಣಾ ಮಲೈ 2019ರ ಮೇ 28ರಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಅಣ್ಣಾ ಮಲೈ ರಾಜೀನಾಮೆ ಅನೇಕರಲ್ಲಿ ಬೇಸರ ಮೂಡಿಸಿತ್ತು. ಹಾಗೇ ಕುತೂಹಲಕ್ಕೂ ಕಾರಣವಾಗಿತ್ತು.

ಅಷ್ಟೊಳ್ಳೆ ಹುದ್ದೆ ತೊರೆದು ಅವರೆಲ್ಲ ಹೋಗುತ್ತಾರೆ ಎಂಬ ಪ್ರಶ್ನೆ ಎದ್ದಿತ್ತು. ಈ ಮಧ್ಯೆ ಆರ್​ಎಸ್​ಎಸ್​ ಸೇರುತ್ತಾರೆ...ಬಿಜೆಪಿಗೆ ಸೇರ್ಪಡೆಯಾಗುತ್ತಾರೆ. ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ ಎಂಬಿತ್ಯಾದಿ ಸುದ್ದಿಗಳು ಹಬ್ಬಿದ್ದವು. ಹಾಗೇ ಕೆಲವೇ ತಿಂಗಳ ಬಳಿಕ ಅವರು ಸಿನಿಮಾವೊಂದರಲ್ಲಿ ಬಣ್ಣ ಹಚ್ಚುತ್ತಿದ್ದಾರೆ ಎಂದು ತಿಳಿದಿತ್ತು. ಒಟ್ಟಿನಲ್ಲಿ ಅಣ್ಣಾ ಮಲೈ ಮುಂದಿನ ನಡೆಯೇನು ಎಂಬುದು ಇನ್ನೂ ಕುತೂಹಲವಾಗಿಯೇ ಉಳಿದಿದೆ.

ಈ ಮಧ್ಯೆ ಅವರು ತಮ್ಮ ಸ್ವಂತ ಊರಾದ ತಮಿಳುನಾಡಿನ ಕರೂರು ಜಿಲ್ಲೆಯ ತೊಟ್ಟಂಪಟ್ಟಿಯಲ್ಲಿ ಕೃಷಿ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ತಮಿಳು ಮಾಧ್ಯಮವೊಂದು ಅಣ್ಣ ಮಲೈ ಕೃಷಿ, ಪಶು ಸಂಗೋಪನೆಯಂತಹ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆಂದು ವರದಿ ಮಾಡಿದೆ. ಅಲ್ಲದೆ ಅದರ ಫೋಟೋ ಕೂಡ ವೈರಲ್ ಆಗಿದೆ.

ಅವರು ಕುರಿ ಸಾಕಣೆ, ಹೊಲದ ಕೆಲಸ ಮಾಡುತ್ತಿರುವುದಲ್ಲದೆ, ಕೃಷಿಯ ಬಗ್ಗೆ ರೈತರೊಂದಿಗೆ ಚರ್ಚಿಸುತ್ತಿರುವುದನ್ನೂ ಫೋಟೋಗಳ ಮೂಲಕ ತಿಳಿಯಬಹುದು. ಏನಾಗಲಿ ಅಣ್ಣಾ ಮಲೈ ಸುಮ್ಮನೆ ಕೂರದೆ ಮಣ್ಣಿನೊಂದಿಗೆ ನಂಟು ಬೆಸೆಯುತ್ತಿದ್ದಾರೆ...

WhatsApp Image 2020-07-25 at 10.34.44 PM
WhatsApp Image 2020-07-25 at 10.42.14 PM (1)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net