More

    ಸಾನಿಯಾ ಮಿರ್ಜಾ ಸಾಧನೆಯ ಹಾದಿಯಲ್ಲಿ ಅಂಕಿತಾ ರೈನಾ

    ಮೆಲ್ಬೋರ್ನ್: ಭಾರತದ ಅಗ್ರ ಶ್ರೇಯಾಂಕಿತ ಸಿಂಗಲ್ಸ್ ಆಟಗಾರ್ತಿ ಅಂಕಿತಾ ರೈನಾ ವರ್ಷದ ಮೊದಲ ಗ್ರಾಂಡ್ ಸ್ಲಾಂ ಟೆನಿಸ್ ಟೂರ್ನಿ ಆಸ್ಟ್ರೇಲಿಯನ್ ಓಪನ್‌ನ ಪ್ರಧಾನ ಸುತ್ತು ಪ್ರವೇಶಿಸುವ ಸನಿಹದಲ್ಲಿದ್ದಾರೆ. ವಿಶ್ವ ನಂ. 180 ಅಂಕಿತಾ, ಅರ್ಹತಾ ಸುತ್ತಿನಲ್ಲಿ 3ನೇ ಹಾಗೂ ಅಂತಿಮ ಹಂತಕ್ಕೇರಿದ್ದಾರೆ.

    ಅಂಕಿತಾ ರೈನಾ ಇನ್ನೊಂದು ಪಂದ್ಯ ಗೆದ್ದರೆ ಅವರು ಗ್ರಾಂಡ್ ಸ್ಲಾಂ ಪ್ರಧಾನ ಸುತ್ತಿಗೇರಿದ ಭಾರತದ ಮೂರನೇ ಆಟಗಾರ್ತಿ ಎಂಬ ಇತಿಹಾಸ ಬರೆಯಲಿದ್ದಾರೆ. ನಿರುಪಮಾ ವೈದ್ಯನಾಥನ್ ಮತ್ತು ಸಾನಿಯಾ ಮಿರ್ಜಾ ಈ ಮುನ್ನ ಪ್ರಧಾನ ಸುತ್ತಿನಲ್ಲಿ ಆಡಿರುವ ಇಬ್ಬರು ಭಾರತೀಯರಾಗಿದ್ದಾರೆ.

    ಇದನ್ನೂ ಓದಿ: ನಿರ್ಣಾಯಕ ಬ್ರಿಸ್ಬೇನ್ ಟೆಸ್ಟ್‌ಗೆ ಆಯ್ಕೆ ಗೊಂದಲದಲ್ಲಿ ಟೀಮ್ ಇಂಡಿಯಾ

    ದುಬೈನಲ್ಲಿ ನಡೆಯುತ್ತಿರುವ ಮಹಿಳಾ ಸಿಂಗಲ್ಸ್ ಅರ್ಹತಾ ಸುತ್ತಿನ 2ನೇ ಪಂದ್ಯದಲ್ಲಿ 28 ವರ್ಷದ ಅಂಕಿತಾ ವಿಶ್ವ ನಂ. 118 ಉಕ್ರೇನ್ ಆಟಗಾರ್ತಿ ಕ್ಯಾಟರಿನಾ ಜವಟ್‌ಸ್ಕಾ ವಿರುದ್ಧ 6-2, 2-6, 6-3ರಿಂದ ಹೋರಾಟಯುತ ಗೆಲುವು ದಾಖಲಿಸಿದರು. ಸೆರ್ಬಿಯಾದ ಒಲ್ಗಾ ಡೇನಿಲೊವಿಕ್ ವಿರುದ್ಧ ಗುಜರಾತ್ ಆಟಗಾರ್ತಿ ಅಂಕಿತಾ ಅಂತಿಮ ಸುತ್ತಿನ ಪಂದ್ಯ ಆಡಲಿದ್ದಾರೆ. ಈ ವರ್ಷ 3 ವಾರ ವಿಳಂಬಗೊಂಡಿರುವ ಆಸ್ಟ್ರೇಲಿಯನ್ ಓಪನ್ ಫೆಬ್ರವರಿ 8ರಿಂದ ಮೆಲ್ಬೋರ್ನ್‌ನಲ್ಲಿ ನಡೆಯಲಿದೆ.

    ನಿರುಪಮಾ 1998ರಲ್ಲಿ ಆಸ್ಟ್ರೇಲಿಯನ್ ಓಪನ್‌ನಲ್ಲಿ 2ನೇ ಸುತ್ತಿಗೇರಿ ಇತಿಹಾಸ ಬರೆದಿದ್ದರೆ, ಸಾನಿಯಾ ಮಿರ್ಜಾ 2005ರಿಂದ 2012ರವರೆಗೆ ವಿವಿಧ ಗ್ರಾಂಡ್ ಸ್ಲಾಂ ಟೂರ್ನಿಗಳ ಸಿಂಗಲ್ಸ್ ವಿಭಾಗದಲ್ಲಿ ಆಡಿದ್ದರು.

    ಮದುವೆಯಿಂದ ಮಗುವಿನ ಜನನದವರೆಗೆ ವಿರಾಟ್ ಕೊಹ್ಲಿ ಬಾಳಿನಲ್ಲಿದೆ 11ರ ನಂಟು!

    7 ವರ್ಷಗಳ ಬಳಿಕ ಕ್ರಿಕೆಟ್‌ಗೆ ಮರಳಿದ ಶ್ರೀಶಾಂತ್‌ಗೆ ಗೆಲುವಿನ ಸ್ವಾಗತ ನೀಡಿದ ಕೇರಳ

    ಟೀಮ್ ಇಂಡಿಯಾಗೆ ಹೆಚ್ಚಿದ ಗಾಯದ ಸಮಸ್ಯೆ, ಅಂತಿಮ ಟೆಸ್ಟ್‌ನಿಂದ ಜಡೇಜಾ, ವಿಹಾರಿ ಔಟ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts