More

    7 ವರ್ಷಗಳ ಬಳಿಕ ಕ್ರಿಕೆಟ್‌ಗೆ ಮರಳಿದ ಶ್ರೀಶಾಂತ್‌ಗೆ ಗೆಲುವಿನ ಸ್ವಾಗತ ನೀಡಿದ ಕೇರಳ

    ಮುಂಬೈ: 2013ರ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ 7 ವರ್ಷಗಳ ನಿಷೇಧ ಶಿಕ್ಷೆ ಅನುಭವಿಸಿ ದೇಶೀಯ ಕ್ರಿಕೆಟ್ ಟೂರ್ನಿಯ ಮೂಲಕ ಮರಳಿ ಕಣಕ್ಕಿಳಿರುವ ಟೀಮ್ ಇಂಡಿಯಾದ ಮಾಜಿ ವೇಗಿ ಎಸ್. ಶ್ರೀಶಾಂತ್‌ಗೆ ಸೋಮವಾರ ಗೆಲುವಿನ ಸ್ವಾಗತ ದೊರೆತಿದೆ. ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯಲ್ಲಿ ಶ್ರೀಶಾಂತ್ ಅವರನ್ನು ಒಳಗೊಂಡ ಕೇರಳ ತಂಡ ಪುದುಚೇರಿ ವಿರುದ್ಧದ ಪಂದ್ಯದಲ್ಲಿ 6 ವಿಕೆಟ್‌ಗಳಿಂದ ಗೆದ್ದು ಶುಭಾರಂಭ ಕಂಡಿದೆ.

    ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪುದುಚೇರಿ ತಂಡ 6 ವಿಕೆಟ್‌ಗೆ 138 ರನ್ ದಾಖಲಿಸಿತು. ಪ್ರತಿಯಾಗಿ ಕೇರಳ ತಂಡ 18.2 ಓವರ್‌ಗಳಲ್ಲಿ 4 ವಿಕೆಟ್‌ಗೆ 139 ರನ್ ಗಳಿಸಿ ಜಯಿಸಿತು. ಕೇರಳ ಪರ ಆಡುತ್ತಿರುವ ಕನ್ನಡಿಗ ರಾಬಿನ್ ಉತ್ತಪ್ಪ 12 ಎಸೆತಗಳಲ್ಲಿ 21 ರನ್ ಕೊಡುಗೆ ನೀಡಿದರೆ, ಐಪಿಎಲ್ ತಾರೆ ಹಾಗೂ ನಾಯಕ ಸಂಜು ಸ್ಯಾಮ್ಸನ್ 32 ರನ್‌ಗಳ ಉಪಯುಕ್ತ ಕಾಣಿಕೆ ಸಲ್ಲಿಸಿದರು.

    ಇದನ್ನೂ ಓದಿ: ಭಾರತ-ಇಂಗ್ಲೆಂಡ್ ಕ್ರಿಕೆಟ್ ಸರಣಿಗೂ ಪ್ರೇಕ್ಷಕರಿಗೆ ಪ್ರವೇಶವಿಲ್ಲ?

    ಇದಕ್ಕೂ ಮೊದಲು ಬೌಲಿಂಗ್ ಮಾಡಿದ ವೇಗಿ ಎಸ್. ಶ್ರೀಶಾಂತ್ 4 ಓವರ್‌ಗಳ ಕೋಟಾದಲ್ಲಿ 29 ರನ್ ನೀಡಿ 1 ವಿಕೆಟ್ ಕಬಳಿಸಿದರು. ಪಂದ್ಯದ 4ನೇ ಓವರ್‌ನಲ್ಲಿ ಆರಂಭಿಕ ಬಿದ್ ಅಹ್ಮದ್ (10) ಅವರನ್ನು ಬೌಲ್ಡ್ ಮಾಡುವ ಮೂಲಕ ಶ್ರೀಶಾಂತ್ ಪುನರಾಗಮನದ ಬಳಿಕ ಮೊದಲ ವಿಕೆಟ್ ಸಂಭ್ರಮ ಆಚರಿಸಿದರು.

    37 ವರ್ಷದ ಶ್ರೀಶಾಂತ್ ಮೇಲಿನ ನಿಷೇಧ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಮುಕ್ತಾಯಗೊಂಡಿತ್ತು. ಆ ಬಳಿಕ ದೇಶೀಯ ಕ್ರಿಕೆಟ್ ಮೂಲಕ ಅವರು ಮರಳಿ ಕಣಕ್ಕಿಳಿಯಲು ಸಿದ್ಧತೆ ಆರಂಭಿಸಿದ್ದರು. ಮುಂಬರುವ ಐಪಿಎಲ್ ಟೂರ್ನಿ ಮಾತ್ರವಲ್ಲದೆ, 2023ರ ಏಕದಿನ ವಿಶ್ವಕಪ್‌ನಲ್ಲಿ ಭಾರತ ಪರ ಆಡುವ ಕನಸನ್ನೂ ಅವರು ಇಟ್ಟುಕೊಂಡಿದ್ದಾರೆ.

    VIDEO | ಸಿಡ್ನಿ ಟೆಸ್ಟ್​ ಪಂದ್ಯದ ಡ್ರಿಂಕ್ಸ್ ಬ್ರೇಕ್​ನಲ್ಲಿ ದುರ್ಬುದ್ಧಿ ತೋರಿ ಸಿಕ್ಕಿಬಿದ್ದ ಸ್ಟೀವನ್​ ಸ್ಮಿತ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts