More

    ಭಾರತ-ಇಂಗ್ಲೆಂಡ್ ಕ್ರಿಕೆಟ್ ಸರಣಿಗೂ ಪ್ರೇಕ್ಷಕರಿಗೆ ಪ್ರವೇಶವಿಲ್ಲ?

    ನವದೆಹಲಿ: ಮುಂದಿನ ತಿಂಗಳು ಪ್ರವಾಸಿ ಇಂಗ್ಲೆಂಡ್ ವಿರುದ್ಧದ ಸರಣಿಯ ಮೂಲಕ ಭಾರತದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಪುನರಾರಂಭ ಕಾಣಲಿದ್ದು, ಇದನ್ನು ಸವಿಯಲು ಕ್ರಿಕೆಟ್ ಪ್ರೇಮಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಆದರೆ ಈ ಪಂದ್ಯಗಳನ್ನೂ ಬರೀ ಟಿವಿಯಲ್ಲಿ ನೋಡಬೇಕಾಗಿದ್ದು, ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಗಳನ್ನು ಆನಂದಿಸಲು ಇನ್ನಷ್ಟು ಸಮಯ ಕಾಯಬೇಕಾಗುತ್ತದೆ ಎನ್ನಲಾಗಿದೆ.

    ಈಗಾಗಲೆ ಐಪಿಎಲ್ 13ನೇ ಆವೃತ್ತಿಯನ್ನು ಪ್ರೇಕ್ಷಕರಿಲ್ಲದೆ ಆಯೋಜಿಸಿರುವ ಬಿಸಿಸಿಐ, ದೇಶೀಯ ಕ್ರಿಕೆಟ್‌ಗೂ ಪ್ರೇಕ್ಷಕರಿಗೆ ಪ್ರವೇಶ ನಿರಾಕರಿಸಿದೆ. ಭಾರತ-ಇಂಗ್ಲೆಂಡ್ ನಡುವಿನ 4 ಪಂದ್ಯಗಳ ಟೆಸ್ಟ್ ಸರಣಿ, 3 ಏಕದಿನ ಮತ್ತು 5 ಟಿ20 ಪಂದ್ಯಗಳಿಗೂ ಪ್ರೇಕ್ಷಕರಿಗೆ ಪ್ರವೇಶ ನೀಡಲು ಬಿಸಿಸಿಐ ಒಲವು ಹೊಂದಿಲ್ಲ ಎನ್ನಲಾಗಿದೆ.

    ಇದನ್ನೂ ಓದಿ: ಟೀಮ್ ಇಂಡಿಯಾ ಕೋಚ್ ರವಿಶಾಸ್ತ್ರಿ ಕ್ರಿಕೆಟ್ ಬದುಕಿನ ಪುಸ್ತಕದಲ್ಲಿ ಏನೇನು ಬರೆಯುತ್ತಿದ್ದಾರೆ ಗೊತ್ತೇ?

    ಕರೊನಾ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿರುವ ನಡುವೆ ಈಗಾಗಲೆ ಭಾರತದಲ್ಲಿ ಸಿನಿಮಾ ಮಂದಿರಗಳಿಗೆ ಶೇ. 50 ಪ್ರೇಕ್ಷಕರಿಗೆ ಪ್ರವೇಶ ಕಲ್ಪಿಸಲಾಗಿದ್ದು, ಕ್ರೀಡಾಕೂಟಗಳಿಗೂ ಶೇ. 50 ಪ್ರೇಕ್ಷಕರ ಪ್ರವೇಶಕ್ಕೆ ಕೇಂದ್ರ ಕ್ರೀಡಾ ಸಚಿವಾಲಯ ಅನುಮತಿ ನೀಡಿದೆ. ಆದರೆ ಬಿಸಿಸಿಐ, ಪ್ರೇಕ್ಷಕರಿಗೆ ಪ್ರವೇಶ ನೀಡುವ ಮೂಲಕ ಯಾವುದೇ ತೊಂದರೆ ಎದುರಾಗುವ ಅಪಾಯಕ್ಕೆ ಕೈಹಾಕಲು ಸಿದ್ಧವಾಗಿಲ್ಲ. ಹೀಗಾಗಿ ಸಣ್ಣ ಪ್ರಮಾಣದ ಪ್ರೇಕ್ಷಕರಿಗೂ ಕ್ರೀಡಾಂಗಣದೊಳಗೆ ಪ್ರವೇಶ ನೀಡಲು ಬಿಸಿಸಿಐ ಸಿದ್ಧವಿಲ್ಲ ಎನ್ನಲಾಗಿದೆ.

    ಬ್ರಿಸ್ಬೇನ್ ಟೆಸ್ಟ್‌ಗೆ ಬಿಸಿಸಿಐ ಷರತ್ತುಬದ್ಧ ಒಪ್ಪಿಗೆ
    ಬಾರ್ಡರ್-ಗಾವಸ್ಕರ್ ಟ್ರೋಫಿಯ ಅಂತಿಮ ಟೆಸ್ಟ್ ಪಂದ್ಯವನ್ನು ಬ್ರಿಸ್ಬೇನ್‌ನಲ್ಲಿ ಆಡಲು ಬಿಸಿಸಿಐ ಷರತ್ತುಬದ್ಧ ಒಪ್ಪಿಗೆ ನೀಡಿದೆ. ಇದರನ್ವಯ ಬ್ರಿಸ್ಬೇನ್‌ನಲ್ಲಿ ಭಾರತ ತಂಡ ಉಳಿದುಕೊಳ್ಳುವ ಹೋಟೆಲ್‌ನಲ್ಲಿ ಆಟಗಾರರು ಸ್ವತಂತ್ರವಾಗಿ ಓಡಾಡಲು ಅವಕಾಶ ನೀಡಬೇಕೆಂದು ಈಗಾಗಲೆ ಕೇಳಿಕೊಳ್ಳಲಾಗಿದೆ. ಇದಲ್ಲದೆ ಬ್ರಿಸ್ಬೇನ್ ಟೆಸ್ಟ್ ಪಂದ್ಯ ಮುಗಿದ ಮರುದಿನವೇ ಭಾರತ ತಂಡಕ್ಕೆ ತವರಿಗೆ ಪ್ರಯಾಣಿಸಲು ಅವಕಾಶ ಮಾಡಿಕೊಡಬೇಕೆಂದು ಬಿಸಿಸಿಐ, ಕ್ರಿಕೆಟ್ ಆಸ್ಟ್ರೇಲಿಯಾಕ್ಕೆ (ಸಿಎ) ಮನವಿ ಸಲ್ಲಿಸಿದೆ. ಭಾರತ ತಂಡ ಆಸೀಸ್‌ನಿಂದ ಮರಳುವುದು ವಿಳಂಬವಾದರೆ, ಫೆಬ್ರವರಿ 5ರಂದು ತವರಿನಲ್ಲಿ ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ ಸರಣಿಗೆ ತೊಂದರೆಯಾಗಲಿದೆ ಎಂಬ ಬಗ್ಗೆ ಬಿಸಿಸಿಐ ಎಚ್ಚರಿಕೆ ವಹಿಸಿದೆ. ಇಂಗ್ಲೆಂಡ್ ಸರಣಿಗೆ ಪೂರ್ವಭಾವಿಯಾಗಿ ಭಾರತ ತಂಡದ ಆಟಗಾರರು ತವರಿನಲ್ಲೂ ಕೆಲದಿನಗಳ ಕ್ವಾರಂಟೈನ್‌ಗೆ ಒಳಗಾಗಬೇಕಾಗಿರುವುದು ಇದಕ್ಕೆ ಕಾರಣವಾಗಿದೆ.

    609 ದಿನಗಳ ಬಳಿಕ ಕಣಕ್ಕಿಳಿದ ಮಿಸ್ಟರ್ ಐಪಿಎಲ್ ಖ್ಯಾತಿಯ ಸುರೇಶ್ ರೈನಾ..!

    ಸಹ ಆಟಗಾರನನ್ನು ನಿಂದಿಸಿದ ಐಪಿಎಲ್ ಸ್ಟಾರ್ ಆಲ್ರೌಂಡರ್ ಕೃನಾಲ್ ಪಾಂಡ್ಯ

    ದೇಶೀಯ ಟಿ20 ಕ್ರಿಕೆಟ್ ಹಬ್ಬಕ್ಕೆ ಈ ಐಪಿಎಲ್ ತಾರೆಯರೇ ಆಕರ್ಷಣೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts