More

    VIDEO | ಸಿಡ್ನಿ ಟೆಸ್ಟ್​ ಪಂದ್ಯದ ಡ್ರಿಂಕ್ಸ್ ಬ್ರೇಕ್​ನಲ್ಲಿ ದುರ್ಬುದ್ಧಿ ತೋರಿ ಸಿಕ್ಕಿಬಿದ್ದ ಸ್ಟೀವನ್​ ಸ್ಮಿತ್​

    ಸಿಡ್ನಿ: ಕುಖ್ಯಾತ ಚೆಂಡು ವಿರೂಪ ಪ್ರಕರಣದ ಬಳಿಕ ಸ್ಟೀವನ್ ಸ್ಮಿತ್ ಸಿಡ್ನಿಯಲ್ಲಿ ಸೋಮವಾರ ಮತ್ತೊಮ್ಮೆ ಕ್ರಿಕೆಟ್ ಪ್ರೇಮಿಗಳ ಪಾಲಿಗೆ ಖಳನಾಯಕನಾಗಿ ಕಂಡರು. 2018ರ ಚೆಂಡು ವಿರೂಪ ಪ್ರಕರಣದಲ್ಲಿ ಒಂದು ವರ್ಷ ನಿಷೇಧ ಶಿಕ್ಷೆ ಅನುಭವಿಸಿ ಕ್ರಿಕೆಟ್‌ಗೆ ಮರಳಿರುವ ಸ್ಮಿತ್, ಮತ್ತೆ ಅಂಥದ್ದೇ ದುರ್ಬುದ್ಧಿ ತೋರಿರುವುದು ಕ್ರಿಕೆಟ್ ವಲಯದಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದೆ.

    ಪ್ರವಾಸಿ ಭಾರತ ತಂಡದ ವಿರುದ್ಧದ 3ನೇ ಟೆಸ್ಟ್ ಪಂದ್ಯದ ಅಂತಿಮ ದಿನದ ಭೋಜನ ವಿರಾಮದ ಬಳಿಕ ಡ್ರಿಂಕ್ಸ್ ಬ್ರೇಕ್ ವೇಳೆ ಪಿಚ್‌ನಲ್ಲಿ ಎಡಗೈ ಶಾಡೋ ಬ್ಯಾಟಿಂಗ್ ಮಾಡುವ ರೀತಿಯಲ್ಲಿ ನಿಂತ ಸ್ಮಿತ್, ಕಾಲಿನಿಂದ ಉಜ್ಜಿ ರಿಷಭ್ ಪಂತ್ ಅವರ ಬ್ಯಾಟಿಂಗ್ ಗಾರ್ಡ್‌ಅನ್ನು ಅಳಿಸಿಹಾಕಿದರು. ಇದರಿಂದಾಗಿ ಪಂತ್ ಮತ್ತೊಮ್ಮೆ ಬ್ಯಾಟಿಂಗ್ ಗಾರ್ಡ್ ಪಡೆದುಕೊಳ್ಳಬೇಕಾಯಿತು. ಆ ವೇಳೆ ಪೂಜಾರ ಜತೆಗೆ ಭರ್ಜರಿ ಜತೆಯಾಟವಾಡುತ್ತಿದ್ದ ಪಂತ್ ಏಕಾಗ್ರತೆಗೆ ಭಂಗ ತರುವುದು ಇದರ ಪ್ರಮುಖ ಉದ್ದೇಶವಾಗಿತ್ತು. ಸ್ಟಂಪ್ ಕ್ಯಾಮರಾದಲ್ಲಿ ಸೆರೆಯಾದ ಸ್ಮಿತ್ ಅವರ ಈ ಕಳ್ಳಾಟದ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರತೀಯರಿಂದ ಸ್ಮಿತ್ ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ.

    ಇದನ್ನೂ ಓದಿ: ಗಂಡು ಮಗುವಿಗೆ ಜನ್ಮ ನೀಡಿದ ಕುಸ್ತಿ ತಾರೆ ಬಬಿತಾ ಪೋಗಟ್

    2019ರ ಏಕದಿನ ವಿಶ್ವಕಪ್‌ನಲ್ಲಿ ಭಾರತದ ಪ್ರೇಕ್ಷಕರು ಸ್ಮಿತ್ ವಿರುದ್ಧ ನಿಂದನೆ ಮಾಡಿದಾಗ ನಾಯಕ ವಿರಾಟ್ ಕೊಹ್ಲಿ ಆ ರೀತಿ ವರ್ತಿಸದಂತೆ ಸೂಚಿಸಿ, ಆಸೀಸ್ ಆಟಗಾರನ ಪರ ನಿಂತಿದ್ದರು. ಈ ಮೂಲಕ ಸ್ಮಿತ್ ತಪ್ಪು ಪುನರಾವರ್ತನೆ ಮಾಡುವುದಿಲ್ಲ, ತಪ್ಪಿನಿಂದ ಅವರು ಈಗ ಪಾಠ ಕಲಿತಿದ್ದಾರೆ ಎಂಬ ಸಂದೇಶಗಳನ್ನು ರವಾನಿಸಿದ್ದರು. ಆದರೆ ಸ್ಮಿತ್ ಸಿಡ್ನಿಯಲ್ಲಿ ತೋರಿದ ವರ್ತನೆ, ಮತ್ತೆ ಕ್ರಿಕೆಟ್ ವಲಯದಲ್ಲಿ ಕಟು ಟೀಕೆಗಳನ್ನು ಎದುರಿಸಿದೆ. ‘ಕಳ್ಳ ಯಾವತ್ತಿದ್ದರೂ ಕಳ್ಳನೇ’ ಎಂಬ ಕಟು ಮಾತುಗಳನ್ನೂ ಸ್ಮಿತ್ ಎದುರಿಸಿದ್ದಾರೆ.

    ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಕೂಡ ಸ್ಮಿತ್ ಅವರನ್ನು ದೂರಿದ್ದು, ಆಸ್ಟ್ರೇಲಿಯನ್ನರು ಎಲ್ಲ ರೀತಿಯ ಪ್ರಯತ್ನಗಳನ್ನೂ ನಡೆಸಿದರೂ ಗೆಲ್ಲಲಿಲ್ಲ ಎಂದಿದ್ದಾರೆ. ಸ್ಮಿತ್ ಕದ್ದು ಮುಚ್ಚಿ ಬಂದು ಪಿಚ್‌ಗೆ ಉಜ್ಜಿರುವಾಗ ಕ್ಯಾಮರಾದಲ್ಲಿ ಅವರ ಮುಖ ಸೆರೆಯಾಗಿಲ್ಲ. ಆದರೆ ಅವರ ಜೆರ್ಸಿ ನಂ. 49 ಕಂಡು ಬಂದಿದೆ. ಇದರಿಂದ ಆಸೀಸ್ ಮಾಜಿ ನಾಯಕನೇ ಈ ರೀತಿಯ ಕ್ರೀಡಾಸ್ಫೂರ್ತಿ ರಹಿತ ವರ್ತನೆ ತೋರಿರುವುದು ಸ್ಪಷ್ಟವಾಗಿದೆ.

    ಸ್ಲೆಡ್ಜಿಂಗ್ ಮಾಡಿ ಟ್ರೋಲ್ ಆದ ಆಸ್ಟ್ರೇಲಿಯಾ ನಾಯಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts