ಸೌತ್ ಸಿನಿಮಾದ ಆಡಿಷನ್ ವೇಳೆ ಖ್ಯಾತ ನಟಿಗೂ ಕಾಸ್ಟಿಂಗ್ ಕೌಚ್ ಅನುಭವ! ಹೋಟೆಲ್​​​​​ಗೆ ಕರೆದು ನಿರ್ಮಾಪಕರ ಜೊತೆ ಸಹಕರಿಸಿ ಎಂದಿದ್ದರಂತೆ ನಿರ್ದೇಶಕ

ankitha new
Published on

ಮುಂಬೈ: ಸಣ್ಣ ಪರದೆಯಿಂದ ಬಾಲಿವುಡ್​​​​​ಗೆ ಕಾಲಿಟ್ಟ ನಟಿ ಅಂಕಿತಾ ಲೋಖಂಡೆ ಇತ್ತೀಚೆಗೆ 'ಬಿಗ್ ಬಾಸ್ 17' ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಈ ಕಾರ್ಯಕ್ರಮದ ವಿಜೇತರಾಗಲು ಸಾಧ್ಯವಾಗದಿದ್ದರೂ ಅತ್ಯಂತ ಜನಪ್ರಿಯ ಸ್ಪರ್ಧಿಯಾದರು. ಕಾರ್ಯಕ್ರಮದಿಂದ ಹೊರಬಂದ ನಂತರವೂ ಅವರು ಆಗಾಗ್ಗೆ ಒಂದಲ್ಲಾ ಒಂದು ಕಾರಣಕ್ಕೆ ಸುದ್ದಿಯಾಗುತ್ತಿದ್ದಾರೆ. ಅಂದಹಾಗೆ ಇತ್ತೀಚೆಗೆ ಸಂದರ್ಶನದ ವೇಳೆ ಅಂಕಿತಾ ಶಾಕಿಂಗ್ ಮಾಹಿತಿ ಬಹಿರಂಗಪಡಿಸಿದ್ದು, ಎಲ್ಲೆಡೆ ಸಂಚಲನ ಮೂಡಿಸಿದೆ.

ಈ ಸಂದರ್ಶನದಲ್ಲಿ ಅಂಕಿತಾ ತನ್ನ ವೃತ್ತಿಜೀವನದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. 19 ನೇ ವಯಸ್ಸಿನಲ್ಲಿಯೇ ಕಾಸ್ಟಿಂಗ್ ಕೌಚ್​​​ಗೆ ಬಲಿಯಾಗಬೇಕಾಯಿತು ಎಂದು ಅವರು ಹೇಳಿದ್ದಾರೆ. ಈ ವೇಳೆ ನಟಿ ತನಗೆ ಬಲೆ ಬೀಸಿದ್ದ ನಿರ್ಮಾಪಕನ ಬಗ್ಗೆಯೂ ಬಿಚ್ಚಿಟ್ಟಿದ್ದಾರೆ.

'ನಾನು ಸೌತ್ ಚಿತ್ರವೊಂದಕ್ಕೆ ಆಡಿಷನ್ ನೀಡಿದ್ದೆ. ಇದಾದ ನಂತರ ನೀವು ಆಯ್ಕೆಯಾಗಿದ್ದೀರಿ, ಸಹಿ ಮಾಡಲು ಬನ್ನಿ ಎಂದು ಕರೆ ಬಂತು. ಇದನ್ನು ಕೇಳಿ ನನಗೆ ತುಂಬಾ ಸಂತೋಷವಾಯಿತು. ಆದ್ದರಿಂದ ನಾನು ಸಹಿ ಮಾಡಿ ಹಿಂತಿರುಗುತ್ತೇನೆಂದು ನನ್ನ ತಾಯಿಗೆ ಹೇಳಿದೆ. ಇಷ್ಟು ಸುಲಭವಾಗಿ ಹೇಗೆ ಆಯ್ಕೆಯಾದೆ ಎಂಬ ಅನುಮಾನ ನನಗೂ ಇತ್ತು? ಆದರೆ ನನ್ನ ಅದೃಷ್ಟ ಅಷ್ಟು ಚೆನ್ನಾಗಿರಲಿಲ್ಲ ಎಂಬುದು ನಂತರ ತಿಳಿಯಿತು' ಎಂದು ತಿಳಿಸಿದ್ದಾರೆ.

ಅಂಕಿತಾ ಅವರು ಹೋಟೆಲ್ ತಲುಪಿದಾಗ ಆಗಿದ್ದೇ ಬೇರೆ. 'ನಾನು ಹೋಟೆಲ್‌ಗೆ ಹೋದೆ. ಅವರು ನನ್ನನ್ನು ಮಾತ್ರ ಒಳಗೆ ಕರೆದರು. ನೀವು ರಾಜಿ ಮಾಡಿಕೊಳ್ಳಬೇಕು. ನಿರ್ಮಾಪಕರ ಜೊತೆ ಮಲಗಬೇಕು' ಎಂದರು.

ಇದನ್ನು ಕೇಳಿದ ಅಂಕಿತಾ, 'ನಿಮ್ಮ ನಿರ್ಮಾಪಕರಿಗೆ ಪ್ರತಿಭೆ ಬೇಡ, ಅವರ ಜೊತೆ ಮಲಗುವ ಹುಡುಗಿ ಬೇಕು, ನಾನು ಹಾಗಲ್ಲ' ಎಂದು ಅಲ್ಲಿಂದ ಹೊರಟು ಹೋದರು.

ಈ ಘಟನೆ ನಡೆದಾಗ ಅಂಕಿತಾಗೆ ಕೇವಲ 19 ವರ್ಷವಾಗಿದ್ದು, ಕಾಸ್ಟಿಂಗ್ ಕೌಚ್ ಬಗ್ಗೆ ಅಂಕಿತಾ ಬಹಿರಂಗಪಡಿಸಿರುವ ವಿಷಯ ಎಲ್ಲರನ್ನೂ ಬೆಚ್ಚಿಬೀಳಿಸಿದೆ.

'ಪವಿತ್ರಾ ರಿಶ್ತಾ' ಮೂಲಕ ಜನಪ್ರಿಯತೆ

ಈ ಘಟನೆಯ ನಂತರ ತನಗೆ 'ಪವಿತ್ರಾ ರಿಶ್ತಾ' ಆಫರ್ ಸಿಕ್ಕಿತು ಎಂದು ಅಂಕಿತಾ ಹೇಳಿದ್ದಾರೆ. ಆ ನಂತರ ಅಂಕಿತಾ ಟಿವಿ ಉದ್ಯಮದಲ್ಲಿ ಮಾತ್ರ ಕೆಲಸ ಮಾಡಬೇಕೆಂದು ನಿರ್ಧರಿಸಿದ್ದರು. ಹಾಗಾಗಿ ಚಿತ್ರರಂಗದ ಯಾರೊಬ್ಬರೂ ಅವರಿಗೆ ಇಂತಹ ಪ್ರಶ್ನೆಗಳನ್ನು ಕೇಳುವ ಪ್ರಮೇಯ ಬರಲಿಲ್ಲ. ‘ಪವಿತ್ರ ರಿಶ್ತಾ’ದಿಂದ ಅಂಕಿತಾ ಕೂಡ ಸಾಕಷ್ಟು ಜನಪ್ರಿಯತೆ ಗಳಿಸಿದರು. ಈ ಧಾರಾವಾಹಿಯ ಹೊರತಾಗಿ ಅವರು ಅನೇಕ ಪ್ರದರ್ಶನಗಳು ಮತ್ತು ಚಲನಚಿತ್ರಗಳ ಭಾಗವಾದರು. ಇಂದು ಅಂಕಿತಾ ಕಿರುತೆರೆಯಲ್ಲಿ ಚಿರಪರಿಚಿತ ಹೆಸರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net