

ಶತಕದ ಸಂಭ್ರಮ
ನಾಗಭೂಷಣ ರಾಯರ ಸ್ವಾತಂತ್ರ್ಯ ಹೋರಾಟ ಶುರುವಾದದ್ದು ಹೈಸ್ಕೂಲಿನ ದಿನಗಳಲ್ಲಿ, ಅಲ್ಲಿ ಇಲ್ಲಿ ಪೋಸ್ಟರ್ ಹಚ್ಚುವುದು, ಸ್ನೇಹಿತರನ್ನು, ವಿದ್ಯಾರ್ಥಿಗಳನ್ನು ಹುರಿದುಂಬಿಸುವುದು, ಶಾಲೆಯಲ್ಲಿ ಸ್ಟ್ರೈಕ್ ಮಾಡುವುದು, ಜನರಿಗೆ ಸ್ವತಂತ್ರ ಭಾರತದ ತಿಳಿವಳಿಕೆ ಕೊಡುವುದು... 1942ರಲ್ಲಿ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಊರು, ಕೇರಿ ಸುತ್ತಿ ‘ಭಾರತ್ ಬಚಾವೋ’ ಘೊಷಣೆಯನ್ನೂ ಕೂಗಿದರು.
ಶಿವಮೊಗ್ಗದ ಜೈಲಿನಲ್ಲಿ 6 ತಿಂಗಳುಗಳ ಕಾಲ ವಾಸ. ಜೈಲಿನಲ್ಲಿಯೂ ಸುಮ್ಮನೆ ಕೂಳಿತುಕೊಳ್ಳಲಿಲ್ಲ, ಚರಕದಿಂದ ನೂಲು ತೆಗೆಯುವುದನ್ನು ಕಲಿತು ಜೈಲಿನಿಂದ ಹೊರಬರುತ್ತಿದ್ದಂತೆ ಖಾದಿ ಪ್ರಚಾರ ಶುರು ಮಾಡಿದರು, ಮನೆಗೆ ಚರಕವನ್ನೂ ತಂದರು. ಖ್ಯಾತ ಲೇಖಕ ಗೊರೂರು ರಾಮಸ್ವಾಮಿ ಅಯ್ಯಂಗಾರ ಜೈಲಿನಲ್ಲಿ ಇವರ ರೂಮ್ ಮೇಟ್ ಆಗಿದ್ದರು. 1947 ಆಗಸ್ಟ್ 15ರಂದು ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿತು, ಮೈಸೂರು ಸಂಸ್ಥಾನ ಸ್ವತಂತ್ರ ಭಾರತಕ್ಕೆ ಸೇರುವಾಗ ಮತ್ತೆ ಹೋರಾಟ ಭುಗಿಲೆದ್ದಿತು, ಆಗಲೂ ರಾಯರು ಹೋರಾಟಕ್ಕೆ ಇಳಿದರು, ಮತ್ತೆ ಜೈಲಿಗೆ ಹೋಗಬೇಕಾಗಿ ಬಂತು. ರಾಜಕೀಯದಲ್ಲೂ ಆಸಕ್ತಿ ಇದ್ದ ರಾಯರು ಆಗಿನ ಸೋಶಿಯಲಿಸ್ಟ್ ಪಕ್ಷದ ಸಕ್ರಿಯ ಸದಸ್ಯರಾದರು. ಊರಿನಲ್ಲಿ ಯಾರಿಗೇ ಅನ್ಯಾಯವಾದರೂ ಅವರ ಪರವಾಗಿ ಕೋರ್ಟಿನಲ್ಲಿ ವಾದಿಸುತ್ತಿದ್ದರು. ಆಚಾರ್ಯ ವಿನೋಭಾ ಭಾವೆಯವರ ‘ಭೂದಾನ ಚಳವಳಿ’ಯಿಂದ ಪ್ರೇರಿತರಾಗಿ, ಎರಡೆಕರೆ ಜಮೀನನ್ನು ದಾನ ಮಾಡಿದರು. ರಾಜ್ಯಪಾಲರಾಗಿದ್ದ ಹನ್ಸರಾಜ್ ಭಾರದ್ವಾಜರು ಇವರನ್ನು 2013ರಲ್ಲಿ ರಾಜಭವನದಲ್ಲಿ ಸತ್ಕರಿಸಿದರು. 1972 ಆಗಸ್ಟ್ 15, ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ ಬೆಳ್ಳಿ ಹಬ್ಬದ ಸಂಭ್ರಮ, ಬೆಂಗಳೂರಿನಲ್ಲಿ ನಡೆದ ಸಮಾರಂಭವೊಂದರಲ್ಲಿ ತಾಮ್ರ ಪತ್ರವನ್ನಿತ್ತು ಗೌರವಿಸಲಾಯಿತು. (ಮಾಹಿತಿ- ಗೀತಾ ಕುಂದಾಪುರ)ಕುಟುಂಬದ ಐವರ ಜೈಲುವಾಸ
ಸ್ವಾತಂತ್ರ್ಯ ಬಂದ ನಂತರದಲ್ಲಿ ದೇಶ ನಡೆಯುತ್ತಿರುವುದನ್ನು ಕಂಡರೆ ಬೇಸರವಾಗುತ್ತದೆ. ಯಾವ ಪಕ್ಷದ ಮೇಲೆಯೂ ವಿಶ್ವಾಸ ಇಡುವಂತಿಲ್ಲ. ಯುವಕರ ಸಂಘಟನೆ ಪರಿಣಾಮಕಾರಿಯಾಗಿ ಆಗುತ್ತಿಲ್ಲ ಎಂಬ ಬೇಸರವಿದೆ’.
-ಎನ್. ಆರ್. ಮಠದ್ಕ್ವಿಟ್ ಇಂಡಿಯಾದಿಂದ ಆರಂಭ
| ಡಾ. ಎಸ್.ಎನ್. ಸುಬ್ಬರಾವ್, ಸ್ವಾತಂತ್ರ್ಯ ಹೋರಾಟಗಾರಚಳವಳಿಗಾರರಿಗೆ ನೆರವು
‘ನನ್ನದೇ ಸ್ನೇಹಿತರ ಗುಂಪು ಕಟ್ಟಿಕೊಂಡು ತಂದೆಗೆ ಗೊತ್ತಾಗದಂತೆ ಚಳವಳಿಗಳಲ್ಲಿ ಪಾಲ್ಗೊಂಡು ಬ್ರಿಟಿಷರ ದೂರವಾಣಿ ಸಂಪರ್ಕ ಲೈನ್ ಕತ್ತರಿಸುತ್ತಿದ್ದೆವು. ಚಳವಳಿ ತೀವ್ರ ಸ್ವರೂಪ ಪಡೆದಾಗ ಇಗರ್ಜಿಗಳಿಂದ ಗರ್ನಲ್ಗಳನ್ನು ಕದ್ದು, ಚಳವಳಿಗಾರರಿಗೆ ಪೊಲೀಸರ, ಸೈನ್ಯದ ಬರುವಿಕೆ ಸೂಚನೆ ಕೊಡುವುದು ಹಾಗೂ ಸೇತುವೆಗಳ ಕಲ್ಲು ತೆಗೆದು ಗರ್ನಲ್ಗಳನ್ನು ಇಟ್ಟು ಸಿಡಿಸುವುದು ಸೇರಿ ಹಲವು ಕೆಲಸ ಮಾಡಿದ್ದೆ. ಈ ವಿಚಾರ ಊರು ತುಂಬ ಹಬ್ಬಿ ತಂದೆ ಮತ್ತು ಬ್ರಿಟಿಷರ ಗಮನಕ್ಕೆ ಬಂದಾಗ ಊರು ಬಿಟ್ಟು ಮೂರ್ನಾಲ್ಕು ದಿನ ಶಿವಮೊಗ್ಗಕ್ಕೆ ನಡೆದುಬಂದೆ’ ಎಂದು ನೆನಪಿಸಿಕೊಂಡರು. 1946ರಲ್ಲಿ ಬಂಧಿತರಾಗಿ ಶಿವಮೊಗ್ಗದ ಜೈಲಿನಲ್ಲಿ ಶಿಕ್ಷೆಗೆ ಒಳಗಾಗಿದ್ದು, ಸ್ವಾತಂತ್ರ್ಯ ಸಿಕ್ಕ ನಂತರ ಸೇವಾ ಕಾರ್ಯವನ್ನು ಮುಂದುವರಿಸಿಕೊಂಡು ಹೋಗಿದ್ದೆ ಎಂದು ಮೆಲುಕು ಹಾಕಿದರು.
ಊರನ್ನೇ ತೊರೆಯಬೇಕಾಯಿತು!
ಕೃಷ್ಣಮೂರ್ತಿ ಹುಟ್ಟಿ ಬೆಳೆದಿದ್ದು ಕನಕಪುರ ಜಿಲ್ಲೆಯ ಮರಳವಾಡಿಯಲ್ಲಿ. 1931 ಆಗಸ್ಟ್ 8ರಂದು. 1947 ಆಗಸ್ಟ್ 9ರಂದು ಕನಕಪುರ ತಾಲೂಕು ಕಚೇರಿಗೆ ಮುತ್ತಿಗೆ ಹಾಕಲು ಕೃಷ್ಣಮೂರ್ತಿ ಯತ್ನಿಸಿದಾಗ 15 ವಿದ್ಯಾರ್ಥಿಗಳನ್ನು ಬಂಧಿಸಿ ಠಾಣೆಯ ಲಾಕಪ್ನಲ್ಲಿ 24 ಗಂಟೆ ಇರಿಸಿದ್ದರು. ಲಾಕಪ್ನಲ್ಲಿ ವಿದ್ಯಾರ್ಥಿಗಳು ಅಸಹಕಾರ ಚಳವಳಿ ಆರಂಭಿಸಿದರು. ನಂತರ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ವಿದ್ಯಾರ್ಥಿಗಳ ಮನವೊಲಿಸಿ, ಊಟ ಮಾಡಿಸಿ ಮರುದಿನ ಬಿಡುಗಡೆ ಮಾಡಿದರು. ಅದಾದ ಕೆಲ ದಿನಗಳಲ್ಲಿ ದೇಶಕ್ಕೆ ಸ್ವಾತಂತ್ರ್ಯ ದೊರೆಯಿತು. ಅದೇ ಸಂಭ್ರಮದಲ್ಲಿ ಮುಳುಗಿರುವಾಗ ಮೈಸೂರು ಸಂಸ್ಥಾನ ದೇಶದ ಒಕ್ಕೂಟ ವ್ಯವಸ್ಥೆಯೊಳಗೆ ಸೇರ್ಪಡೆಗೊಳ್ಳಲು ಹಿಂದೇಟು ಹಾಕಿತು. ಆಗ ನಡೆದ ‘ಮೈಸೂರು ಚಲೋ’ ಚಳವಳಿಯಲ್ಲೂ ಕೃಷ್ಣಮೂರ್ತಿ ಪಾಲ್ಗೊಂಡರು. ಆದರೂ, ಊರಿನವರು, ಸಂಬಂಧಿಕರು ಇವರನ್ನು ದೂರ ಇರಿಸಿ, ಅವಮಾನ ಮಾಡಿದ್ದರಿಂದ ಬೇಸತ್ತ ಕೃಷ್ಣಮೂರ್ತಿ ಕುಟುಂಬ 1948ರಲ್ಲಿ ಮೈಸೂರಿಗೆ ಬಂದು ನೆಲೆಸಿತು.
| ಎಂ.ಜಿ. ಕೃಷ್ಣಮೂರ್ತಿ
ತ್ಯಾಗ, ಬಲಿದಾನದ ಮೂಲಕ ದೇಶಕ್ಕೆ ಸ್ವಾತಂತ್ರ್ಯ ಬಂದಿದೆ. ಆದರೆ, ರಾಜಕಾರಣಿಗಳು ಪ್ರಸ್ತುತ ನಡೆದುಕೊಳ್ಳುವ ರೀತಿಯನ್ನು ನೋಡಿದರೆ ಮನಸ್ಸಿಗೆ ತುಂಬ ನೋವಾಗುತ್ತದೆ. ಇದಕೋಸ್ಕರನಾ ದೇಶದ ಅಸಂಖ್ಯಾತ ಸ್ವಾತಂತ್ರ್ಯ ಹೋರಾಟಗಾರರು ಪ್ರಾಣವನ್ನು ತ್ಯಾಗ ಮಾಡಿದ್ದು ಎಂಬ ಬೇಸರ ಮೂಡುತ್ತದೆ. ರಾಜಕಾರಣಿಗಳಿಗೆ ದೇಶದ ಹಿತಕ್ಕಿಂತ ಸ್ವಹಿತವೇ ಮುಖ್ಯವಾಗಿದೆ.
ಆ ದಿನಗಳನ್ನು ಮರೆತಿಲ್ಲ
‘ಅದು 1940ರ ಮಾತು. ನನಗಾಗ 19 ವರ್ಷ ವಯಸ್ಸು. ‘ದೇಶಕ್ಕಾಗಿ ಪ್ರಾಣ ತ್ಯಾಗಕ್ಕೂ ಸಿದ್ಧ’ ಎನ್ನುವ ಸಂಕಲ್ಪದೊಂದಿಗೆ ಹೋರಾಟಕ್ಕೆ ಇಳಿದೆವು. ಸಂಪಗಾವಿಯ ಚನ್ನಪ್ಪ ವಾಲಿ ನಮ್ಮ ತಂಡದ ನಾಯಕ. ಅವರ ಮಾರ್ಗದರ್ಶನದಲ್ಲಿ 10-12 ಜನರು ಸ್ವಾತಂತ್ರ್ಯ್ಕಾಗಿ ಕೆಲಸ ಮಾಡುತ್ತಿದ್ದೆವು. ಸ್ವಾತಂತ್ರ್ಯ ಹೋರಾಟದ ಕುರಿತು ಜನರಲ್ಲಿ ಪ್ರೇರಣೆ ತುಂಬುವ ನಿಟ್ಟಿನಲ್ಲಿ ಗಾಂಧೀಜಿ ಪತ್ರಗಳನ್ನು ಕಳುಹಿಸುತ್ತಿದ್ದರು. ಮುಂಬೈನಿಂದ ಬೆಳಗಾವಿಗೆ ಬರುತ್ತಿದ್ದ ಪತ್ರಗಳನ್ನು ಸ್ಥಳೀಯರಿಗೆ ಹಂಚುವ ಜವಾಬ್ದಾರಿ ನನಗೆ ವಹಿಸಲಾಗಿತ್ತು. ಬ್ರಿಟಿಷರ ಕಣ್ತಪ್ಪಿಸಿ ಆ ಪತ್ರಗಳನ್ನು ಸ್ಥಳೀಯರಿಗೆ ಮುಟ್ಟಿಸಿ ಸ್ವಾತಂತ್ರ್ಯ ಕಿಚ್ಚು ಹೊತ್ತಿಸುತ್ತಿದ್ದೆ.
1943ರ ಏಪ್ರಿಲ್ ತಿಂಗಳಲ್ಲಿ ಪತ್ರ ಹಂಚುವಾಗ ಬೆಳಗಾವಿಯ ಕಾಂಗ್ರೆಸ್ ರಸ್ತೆಯಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದೆ. ಬಳಿಕ ಕ್ಯಾಂಪ್ ಠಾಣೆಗೆ ಕರೆದೊಯ್ದ ಪೊಲೀಸರು ಕೋಟೆಯಲ್ಲಿದ್ದ ನ್ಯಾಯಾಲಯಕ್ಕೆ ನನ್ನನ್ನು ಹಾಜರುಪಡಿಸಿದರು. ವಿಚಾರಣೆ ನಡೆಸಿದ ನ್ಯಾಯಾಧೀಶರು, 7 ತಿಂಗಳ ಸಜೆ ವಿಧಿಸಿ ಹಿಂಡಲಗಾ ಕಾರಾಗೃಹಕ್ಕೆ ಕಳುಹಿಸಿದರು.
ರಾಜೇಂದ್ರ ಧರ್ಮಪ್ಪ ಕಲಘಟಗಿ
ಕಾರಾಗೃಹದಿಂದ ಬಿಡುಗಡೆಯಾದ ನಂತರವೂ ಜನರಲ್ಲಿ ಸ್ವಾತಂತ್ರ್ಯದ ಕಿಚ್ಚು ಹೆಚ್ಚಿಸಲು ನಿರಂತರವಾಗಿ ಕೆಲಸ ಮಾಡಿದೆ. ಬಿಳಿಯರು ರೈಲು ಮೂಲಕ ಇಲ್ಲಿ ಆಗಮಿಸಬಾರದೆಂದು ನಮ್ಮ ತಂಡದವರೆಲ್ಲ ಸೇರಿ ರೈಲು ಹಳಿ ಕತ್ತರಿಸುತ್ತಿದ್ದೆವು. ಬ್ರಿಟಿಷರ ಶಾಲೆಗೂ ಬೆಂಕಿ ಹಚ್ಚುತ್ತಿದ್ದೆವು’ ಎಂದು ನೆನಪುಗಳನ್ನು ಮೆಲುಕು ಹಾಕಿದರು ರಾಜೇಂದ್ರ.
ಚಳವಳಿಯ ರುಚಿ
ಉಪ್ಪಿನ ಸತ್ಯಾಗ್ರಹದಲ್ಲಿ ಭಾಗಿ
ಸದ್ಯ ಅಕ್ಕಿಆಲೂರಿನಲ್ಲಿ ವಾಸವಾಗಿರುವ 103 ವರ್ಷ ವಯಸ್ಸಿನ ಗುಡ್ಡನಗೌಡ ಪಾಟೀಲರು, (ಜನನ 1917ರ ಅಕ್ಟೋಬರ್ 10) 18ನೇ ವಯಸ್ಸಿನಲ್ಲಿ ಸ್ವಾತಂತ್ರ್ಯ ಹೋರಾಟಕ್ಕಾಗಿ ಮನೆಬಿಟ್ಟರು. ಉಪ್ಪಿನ ಸತ್ಯಾಗ್ರಹ ಸೇರಿ ಹಲವು ಚಳವಳಿಯಲ್ಲಿ ಧುಮುಕಿದರು. ಗುಡ್ಡನಗೌಡ ಅವರನ್ನು 1942ರಲ್ಲಿ ಧಾರವಾಡ ಸಬ್ ಜೈಲಿನಲ್ಲಿ ಹಲವು ದಿನಗಳ ಕಾಲ ಬಂಧನಕ್ಕೆ ಒಳಪಡಿಸಲಾಗಿತ್ತು.
ಸಾಮಾಜಿಕ ಕೆಲಸ: 1968ರಲ್ಲಿ ಇಂದಿನ ಹಾವೇರಿ ಜಿಲ್ಲೆಯ ಗುಡ್ಡಗಾಡು ಪ್ರದೇಶದಲ್ಲಿ ಭೂರಹಿತ ಕಾರ್ವಿುಕರನ್ನು ಸಂಘಟಿಸಿ ಜಾಗೃತಿ ಮೂಡಿಸುವುದರ ಜೊತೆಗೆ ಭೂಮಿಯನ್ನು ಸಾಗುವಳಿ ಮಾಡಿಸುವಲ್ಲಿ ಇವರು ಮಾಡಿರುವ ಸಾಧನೆ ಅಸಾಧಾರಣ. 1972ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ತಾಮ್ರದ ಪುರಸ್ಕಾರ ಪತ್ರ ನೀಡಿ ಗೌರವಿಸಿದ್ದಾರೆ.
=
ದಿಟ್ಟ ಸಂಘರ್ಷ
ಆಗ ಮಂಗೇಶರಿಗೆ ಹದಿನೆಂಟರ ಪ್ರಾಯ. ಹುಣ್ಸವಾಡ ಗ್ರಾಮದಲ್ಲಿ ಬ್ರಿಟಿಷರ ತಂಗುದಾಣವನ್ನು ಧ್ವಂಸ ಮಾಡಿ ಭೂಗತರಾದರು. ಕೆಲ ದಿನಗಳ ನಂತರ ಗೋವಾ-ಕಾರವಾರ ರಸ್ತೆಯಲ್ಲಿ ಬ್ರಿಟಿಷರ ಚೌಕಿಗೆ ಬೆಂಕಿಯಿಟ್ಟರು. ಯಡೋಗಾ ಗ್ರಾಮದಲ್ಲಿ ಗ್ರಾಮಸ್ಥರಿಂದ ಹೆಚ್ಚುವರಿಯಾಗಿ ಎರಡು ರೂಪಾಯಿ ಕರವನ್ನು ವಸೂಲಿ ಮಾಡಲಾಗುತ್ತಿತ್ತು. ಈ ಸುದ್ದಿ ತಿಳಿದ ಮಂಗೇಶ ತನ್ನ ಗೆಳೆಯರೊಂದಿಗೆ ಯಡೋಗಾಕ್ಕೆ ಹೋಗಿ ಪಾಟೀಲರು ವಸೂಲಿ ಮಾಡಿದ ಕರ ಸಂಗ್ರಹವನ್ನು ವಶಪಡಿಸಿಕೊಂಡು ಗ್ರಾಮಸ್ಥರಿಗೆ ಹಂಚಿದರು. ಇವರ ಹೋರಾಟವನ್ನು ಮಣಿಸಲು ಬಂದ ಬ್ರಿಟಿಷ್ ಅಧಿಕಾರಿಯನ್ನು ಗ್ರಾಮದ ಬಾಗಿಲಲ್ಲಿಯೇ ತಡೆದರು. ಈ ಘಟನೆಯನ್ನು ತಿಳಿದ ಬ್ರಿಟಿಷರು ತುಕಡಿಯೊಂದನ್ನು ಕಳಿಸಿ ಮಂಗೇಶ ಪಾಟೀಲ ಹಾಗೂ ಅವರ ತಂಡವನ್ನು ಬಂಧಿಸಿ, ಜೈಲು ಸಜೆ ಘೊಷಿಸಿತು. ಹಳಿಯಾಳ, ಯಲ್ಲಾಪುರ, ಅಂಕೋಲಾ ಜೈಲಿನಲ್ಲಿ ಕೆಲ ದಿನ ಹಾಗೂ ಕಾರವಾರದ ಜೈಲಿನಲ್ಲಿ ಎರಡು ವರ್ಷ ಕಳೆಯಬೇಕಾಯಿತು ಎಂದು ಮಂಗೇಶ ಪಾಟೀಲ ಹೋರಾಟದ ಹಾದಿಯನ್ನು ನೆನಪಿಸಿಕೊಳ್ಳುತ್ತಾರೆ.
ಸನ್ಮಾನ: ‘ಬ್ರಿಟಿಷರೇ ಭಾರತ ಬಿಟ್ಟು ತೊಲಗಿ’ ಹೋರಾಟದಲ್ಲಿ ಭಾಗವಹಿಸಿದ ಸ್ವಾತಂತ್ರ್ಯ ಯೋಧರಿಗೆ ಭಾರತ ಸರ್ಕಾರದಿಂದ ನೀಡಿದ ಗೌರವ ಈ ವರ್ಷ ಮಂಗೇಶ ಪಾಟೀಲರಿಗೆ ದೊರೆತಿದೆ.
=
ಲಾವಣಿಯಿಂದ ಹರಡಿದರು ದೇಶಪ್ರೇಮ
‘ದೇಶದ ಜನತೆಗೆ ಸ್ವಾತಂತ್ರ್ಯದ ಮಹತ್ವ ತಿಳಿದಿಲ್ಲ. ಯುವಜನಾಂಗ ದಾರಿ ತಪ್ಪುತ್ತಿದೆ. ಅವರಿಗೆ ಸರಿಯಾದ ಮಾರ್ಗದರ್ಶನ ನೀಡುವ ಕೆಲಸ ಆಗಬೇಕು. ಸಿದ್ದಾಪುರದಲ್ಲಿ ಸ್ವಾತಂತ್ರ್ಯ ಭವನ ನಿರ್ಮಾಣ ಆಗಬೇಕು. ಅಲ್ಲಿ ಸ್ವಾತಂತ್ರ್ಯ ಹೋರಾಟದ ಎಲ್ಲ ಚಿತ್ರಣಗಳಿರಬೇಕು’ ಎನ್ನುವ ಆಶಯ ಅವರದ್ದಾಗಿದೆ.
---
ದೇಶ ಮೊದಲು ಎಂಬ ಭಾವ
ಸ್ವಾತಂತ್ರ್ಯ ಸೇನಾನಿಗಳಾದ ಸಂಗೂರು ಕರಿಯಪ್ಪ, ವೀರಯ್ಯ ಹಿರೇಮಠ, ಮಹದೇವ ಮೈಲಾರ, ಸಿದ್ದಮ್ಮ ಮೈಲಾರ, ಕೆ.ಎಫ್.ಪಾಟೀಲ ಸೇರಿ ಹಲವರೊಂದಿಗೆ ಒಡನಾಟ ಹೊಂದಿದ್ದರು. ಹಿರೇಕೆರೂರ, ಬ್ಯಾಡಗಿಯಲ್ಲಿ ಟಪಾಲು ಬಸ್ನ್ನು ಲೂಟಿ ಮಾಡಿದ ಹಿನ್ನೆಲೆಯಲ್ಲಿ ಇವರಿಗೆ ಧಾರವಾಡ ನ್ಯಾಯಾಲಯದಲ್ಲಿ ಶಿಕ್ಷೆಯಾಗಿ, ಮಹಾರಾಷ್ಟ್ರದ ಅಹಮದ್ನಗರದ ಜೈಲಿನಲ್ಲಿದ್ದರು.
‘ಸ್ವಾತಂತ್ರ್ಯ ದೊರಕಿಸುವಲ್ಲಿ ನಮ್ಮನ್ನು ನಾವು ಅರ್ಪಿಸಿಕೊಂಡಿದ್ದೆವು. ಮನೆ-ಹೆಂಡತಿ, ಮಕ್ಕಳನ್ನು ಲೆಕ್ಕಿಸದೆ ಹೋರಾಟದಲ್ಲಿ ಪಾಲ್ಗೊಂಡಿದ್ದೆವು’ ಎಂದವರು ನೆನಪಿಸಿಕೊಂಡರು.
---
ಕಾರ್ಕಳದಲ್ಲಿ ಹೋರಾಟ
‘ತಂದೆ ಶ್ರೀನಿವಾಸ ಕಾಮತ್ ವಿದ್ಯಾರ್ಥಿ ದಿನಗಳಲ್ಲೇ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕುಕಿದವರು. ಕಾರ್ಕಳದಲ್ಲಿ ನಡೆದಿದ್ದ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿದ ಕಾರಣಕ್ಕೆ ಅಂದು ಅವರನ್ನು ಬಂಧಿಸಲಾಗಿತ್ತು. 1942ರ ಡಿಸೆಂಬರ್ನಿಂದ 1943ರ ಜೂನ್ವರೆಗೆ ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿ 6 ತಿಂಗಳ ಸೆರೆಮನೆ ವಾಸವನ್ನೂ ಅನುಭವಿಸಿದ್ದರು. ಕಾರ್ಕಳದಲ್ಲಿ ಶಿಕ್ಷಕರಾಗಿ, ಭುವನೇಂದ್ರ ಪ್ರೌಢಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ನಿವೃತ್ತರಾದರು.
--
ಏಳು ವರ್ಷದ ಸಂಘರ್ಷ
1942ರಲ್ಲಿ ನಡೆದ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಪಾಲ್ಗೊಂಡಿದ್ದ ಅವರು ಮೂರು ತಿಂಗಳ ಸೆರೆವಾಸ ಅನುಭವಿಸಿದರು. ಮೈಸೂರು ಚಲೋ, ರೈಲುತಡೆ, ಬಾಣಾವರ ಠಾಣೆ ಮುತ್ತಿಗೆ ಸೇರಿ ವಿವಿಧ ಚಳವಳಿಗಳಲ್ಲಿ ಭಾಗವಹಿಸಿದರು. ಇವರ ಹೋರಾಟ ಗುರುತಿಸಿ ಅಂದಿನ ಸರ್ಕಾರ ತಾಮ್ರಪತ್ರ ನೀಡಿ ಗೌರವಿಸಿದೆ. ಕಳೆದ ವರ್ಷ ದೆಹಲಿಯಲ್ಲಿ ನಡೆದ ಸ್ವಾತಂತ್ರ್ಯೊತ್ಸವ ಸಮಾರಂಭದಲ್ಲಿ ಬಸವರಾಜ್ ಅವರನ್ನು ಸನ್ಮಾನಿಸಲಾಗಿದೆ.
ಪಾಲಕರು ಮಕ್ಕಳಲ್ಲಿ ರಾಷ್ಟ್ರಭಕ್ತಿ ಹಾಗೂ ಐಕ್ಯತೆ ಕುರಿತು ಜಾಗೃತಿ ಮೂಡಿಸುವ ಮೂಲಕ ದೇಶದ ಸಮಗ್ರತೆ ಕಾಪಾಡಲು ಪ್ರೋತ್ಸಾಹಿಸಬೇಕು.
| ನೇರ್ಲಿಗೆ ಬಸವರಾಜ್
ಭಕ್ತರಹಳ್ಳಿಯ ದೇಶಭಕ್ತ
-ಹೀಗೆಂದು ನೆನಪುಗಳತ್ತ ಜಾರುತ್ತಾರೆ ಸ್ವಾತಂತ್ರ್ಯ ಹೋರಾಟಗಾರ 91 ವರ್ಷದ ಡಿ. ಮಾರಪ್ಪ. ಶಿಡ್ಲಘಟ್ಟ ತಾಲೂಕಿನ ಭಕ್ತರಹಳ್ಳಿಯ ದ್ಯಾವಪ್ಪ-ಹನುಮಕ್ಕ ದಂಪತಿಯ ಪುತ್ರ ಮಾರಪ್ಪ ಜನಿಸಿದ್ದು 1929ರಲ್ಲಿ. ಆಗ ಭಕ್ತರಹಳ್ಳಿ ಸ್ವಾತಂತ್ರ್ಯ ಹೋರಾಟಗಾರರ ಊರು ಎಂದೇ ಕರೆಸಿಕೊಂಡಿತ್ತು. ಆ ವಾತಾವರಣದಲ್ಲಿ ಮಾರಪ್ಪ ಸಹಜವಾಗಿ ವಿದ್ಯಾರ್ಥಿ ದೆಸೆಯಲ್ಲಿಯೇ ಸ್ವಾತಂತ್ರ್ಯ ಹೋರಾಟದತ್ತ ಆಕರ್ಷಿತರಾದರು. ನಂದಿ ಬೆಟ್ಟಕ್ಕೆ ಗಾಂಧೀಜಿ ಬಂದಿದ್ದಾಗ ಅವರನ್ನು ಭೇಟಿಯಾಗಿದ್ದರು. ‘ಚಲೋ ಚಲೋ ದಿಲ್ಲಿ ಚಲೋ’, ‘ಚಲೋ ಚಲೋ ಮೈಸೂರು ಚಲೋ’ ಸೇರಿ ಹತ್ತಾರು ಹೋರಾಟಗಳಲ್ಲಿ ಪಾಲ್ಗೊಂಡು ಜೈಲುವಾಸ ಅನುಭವಿಸಿದರು.
ಚಿಕ್ಕಬಳ್ಳಾಪುರ ತಾಲೂಕಿನ ಚೊಕ್ಕಹಳ್ಳಿಯಲ್ಲಿ ವಾಸವಾಗಿರುವ ಮಾರಪ್ಪ ಹಲವು ರಂಗಗಳಲ್ಲಿ ನಿಸ್ವಾರ್ಥ ಸೇವೆ ಮಾಡಿ ಶಿಸ್ತು, ಸರಳತೆ, ಸಂಯಮ ಮೈಗೂಡಿಸಿಕೊಂಡವರು. ಸ್ವಾತಂತ್ರಾ್ಯನಂತರದಲ್ಲಿ ಯುವಜನರಿಗೆ ಹೋರಾಟದ ಹಿನ್ನೆಲೆ, ಹೋರಾಟಗಾರರ ಬಲಿದಾನ ಮತ್ತು ದೇಶಭಕ್ತಿ ಮಹತ್ವ ತಿಳಿಸುವ ಕಾಯಕದಲ್ಲಿ ಹೆಚ್ಚಾಗಿ ತೊಡಗಿಸಿಕೊಂಡಿದ್ದರು. ಈಗ ವಯೋಸಹಜ ಹಿನ್ನೆಲೆಯಲ್ಲಿ ಸಾರ್ವಜನಿಕ ಚಟುವಟಿಕೆ ನಡೆಸುತ್ತಿಲ್ಲ.