ಸೆಲೆಬ್ರಿಟಿ ಕಾರ್ನರ್​ನಲ್ಲಿ ತಾರಾ ಅನೂರಾಧ: ಸ್ಫೂರ್ತಿ ತುಂಬಿದ ಲೇಖನ

Tara
Published on

ವಿಜಯವಾಣಿಯಲ್ಲಿ ಭಾನುವಾರ ‘ಸೆಲೆಬ್ರಿಟಿ ಕಾರ್ನರ್’ನಲ್ಲಿ ಪ್ರಕಟಗೊಂಡ ತಾರಾ ಅನೂರಾಧರ ‘ಯಾರೋ ಬಂದು ಸ್ಪೂರ್ತಿ ತುಂಬಲೆಂದು ಕಾಯಬಾರದು’ ಎಂಬ ಲೇಖನ ಪ್ರೇರಣಾದಾಯಕವಾಗಿತ್ತು. ಜೀವನದ ಪ್ರತಿ ಹಂತದಲ್ಲಿಯೂ ನಾವು ಬೆಳೆಯಬೇಕೆಂದು ಆಸೆ ಪಡುವುದು, ಪ್ರಯತ್ನ ಪಡುವುದು ಸಹಜ. ಆ ಬೆಳವಣಿಗೆಯ ಪಥದಲ್ಲಿ ಬೇರೊಬ್ಬರು ಪ್ರೋತ್ಸಾಹ ನೀಡುವುದು, ಬೆಳವಣಿಗೆಗೆ ಬೆನ್ನೆಲುಬಾಗಿ ನಿಲ್ಲುವುದು ಇಂದಿನ ದಿನಮಾನಗಳಲ್ಲಿ ಬಹಳ ವಿರಳ. ನಮ್ಮ ಪುಟ್ಟಪುಟ್ಟ ಪ್ರಯತ್ನಗಳಿಗೆ ಬೇರೊಬ್ಬರ ಮೆಚ್ಚುಗೆ ಸಿಗಲಿಲ್ಲ ಎಂಬ ಕಾರಣಕ್ಕೆ ಹತಾಶರಾಗುವುದರಲ್ಲಿ ಅರ್ಥವಿಲ್ಲ. ನಮ್ಮ ಜೀವನದ ಯಶದ ಮೆಟ್ಟಿಲಿಗೆ ನಾವೇ ಬಲವಾದ ಹೆಜ್ಜೆಯನ್ನಿಟ್ಟು ಮೇಲೇರಬೇಕು. ಮೇಲೇರುವ ಹಾದಿಯಲ್ಲಿ ವಿಶಾಲ ಮನಸ್ಸಿನಿಂದ ಕಿಂಚಿತ್ತು ಸ್ಪೂರ್ತಿ ತುಂಬುವವರು ಸಿಗಲೂಬಹುದು ಅಥವಾ ಒಂಟಿ ಪಯಣ ಸಾಗಬೇಕಾಗಲೂಬಹುದು ಎಂಬುದನ್ನು ಬಹಳ ಚೆನ್ನಾಗಿ ತಿಳಿಸಿದ್ದಾರೆ. ಸೋಲು, ಅವಮಾನಗಳು ಮನವನ್ನು ಕುಗ್ಗಿಸದೆ, ಅವುಗಳನ್ನೇ ಸವಾಲನ್ನಾಗಿ ಸ್ವೀಕರಿಸಿ, ಜಾಣ್ಮೆಯಿಂದ ಮುನ್ನುಗ್ಗುವ ಆತ್ಮಸ್ಥೈರ್ಯ ಬೆಳೆಸಿಕೊಳ್ಳಬೇಕಿದೆ. ಜೀವನದಲ್ಲಿ ಸಿಹಿ-ಕಹಿಗಳನ್ನು ಸಮತೋಲನ ಮಾಡುವ ನೈಪುಣ್ಯ ರೂಢಿಸಿಕೊಂಡು, ನಮ್ಮ ಬಾಳಿನ ಶಿಲ್ಪಿ ನಾವೇ ಎಂದು ಸ್ವಯಂಸ್ಪೂರ್ತಿಯಿಂದ ಸಾಗಲು ಈ ಲೇಖನ ಪ್ರೇರಕವಾಗಿದೆ.

| ಅನೀಶ್ ಕೊಪ್ಪ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net