

ಅಕ್ಕಿಯನ್ನು ಉಪಯೋಗಿಸಿ ಅನೇಕ ರೀತಿಯ ಖಾದ್ಯಗಳನ್ನು ತಯಾರಿಸಬಹುದು. ಇಂಥ ಖಾದ್ಯಗಳ ಪೈಕಿ ಇಲ್ಲಿ ಕೆಲವುಗಳ ಪರಿಚಯ ನೀಡಲಾಗಿದೆ.
ಬೇಕಾಗುವ ಸಾಮಗ್ರಿ : ಅಕ್ಕಿ 250 ಗ್ರಾಂ, 250 ಗ್ರಾಂ ಗಟ್ಟಿ ಟೊಮ್ಯಾಟೋ, ಈರುಳ್ಳಿ 2, ನಿಂಬೆ ಹಣ್ಣು 1, ಹಸಿಮೆಣಸು 10, ತೆಂಗಿನ ತುರಿ, ಸ್ವಲ್ಪ ಎಣ್ಣೆ, ಸಾಸಿವೆ, ಇಂಗು, ಕೊತ್ತುಂಬರಿ, ಒಣಮೆಣಸು, ಕರಿಬೇವು, ಉಪ್ಪು
ಮಾಡುವ ವಿಧಾನ: ಮೊದಲು ಅನ್ನ ತಯಾರಿಸಿ ಸಿದ್ಧಮಾಡಿಕೊಳ್ಳಿ. ಒಗ್ಗರಣೆ ಮಾಡಿ ಅದರಲ್ಲಿ ಈರುಳ್ಳಿ ಹೋಳು ಕುಟ್ಟಿದ ಹಸಿಮೆಣಸು, ಟೊಮ್ಯಾಟೋ ಹೋಳು ಚೆನ್ನಾಗಿ ಬೆಂದ ಮೇಲೆ ಈಗಾಗಲೇ ಸಿದ್ಧಗೊಂಡ ಆರಿದ ಅನ್ನಕ್ಕೆ ಹಾಕಿ ಅದರ ಮೇಲೆ ನಿಂಬೆರಸ, ಉಪ್ಪು, ಕೊತ್ತಂಬರಿ ಹಾಕಿ ಚೆನ್ನಾಗಿ ಕಲಕಿ.
|ಅರವಿಂದ ಬಿ ಲೋಕರೆ